ಬಳ್ಳಾರಿ: ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಮನೆ ಮುಂದೆ ಧರಣಿ ನಡೆಸಲು ಮುಂದಾದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ರನ್ನು ಪೊಲೀಸರು ಅರ್ಧದಲ್ಲಿಯೇ ತಡೆದು, ವಶಕ್ಕೆ ಪಡೆದಿದ್ದಾರೆ.
ಸೋಮಶೇಖರ್ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆ, ಬಳ್ಳಾರಿಯಲ್ಲಿ ಇಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ತಾಕತ್ತಿದ್ದರೆ ತಡೆಯಲಿ..ನಾನೇ ಅವನ ಮನೆ ಮುಂದೆ ಹೋಗಿ ಧರಣಿ ಮಾಡ್ತೀನಿ ಅಂತಾ ಸೋಮಶೇಖರ ರೆಡ್ಡಿಗೆ ಜಮೀರ್ ಇತ್ತೀಚೆಗೆ ಸವಾಲೆಸೆದಿದ್ದರು.
ಹೀಗಾಗಿ ಇಂದು ಜಮೀರ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಿದ್ದು, ಸೋಮಶೇಖರ್ ರೆಡ್ಡಿ ಮನೆಗೆ ಮುತ್ತಿಗೆ ಹಾಕೋ ಸಾಧ್ಯತೆ ಇತ್ತು. ಹೀಗಾಗಿ ಅಲ್ಲಿಗೆ ತಲುಪೋ ಮುನ್ನವೇ ಜಮೀರ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಾಸಕ ರೆಡ್ಡಿ ಮನೆಮುಂದೆ ಧರಣಿ : ಜಮೀರ್ ಅಹಮದ್ ಅರೆಸ್ಟ್
- Advertisement -