ಸೋಮವಾರ, ಏಪ್ರಿಲ್ 28, 2025
HomekarnatakaCommission Case : 40% ಕಮೀಷನ್ ಪ್ರಕರಣ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೊರೆ ಹೋದ...

Commission Case : 40% ಕಮೀಷನ್ ಪ್ರಕರಣ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೊರೆ ಹೋದ ಗುತ್ತಿಗೆದಾರರ ಸಂಘ

- Advertisement -

ಬೆಂಗಳೂರು : ರಾಜ್ಯದಾದ್ಯಂತ 40% ಕಮೀಷನ ಕಾಮಗಾರಿ (Commission Case ) ಆರೋಪ ಸದ್ದು ಮಾಡ್ತಿದೆ. ಗುತ್ತಿಗೆದಾರ ಸಂತೋಷ್ ಪಟೇಲ್ ಆತ್ಮಹತ್ಯೆಯೊಂದಿಗೆ ಈ ಪ್ರಕರಣ ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ. ಈ ಮಧ್ಯೆ ರಾಜ್ಯದಲ್ಲಿ ಸರಕಾರಿ ಕಾಮಗಾರಿ ಗಳಿಗೆ ಕಮೀಷನ್ ನೀಡಬೇಕೆಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ರಾಜ್ಯ ಗುತ್ತಿಗೆದಾರ ಸಂಘದ (Contractors Association) ಸದಸ್ಯರು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ (CM Basavaraj Bommai) ಭೇಟಿ ಮಾಡಿದ್ದು, ಕುತೂಹಲ ಮೂಡಿಸಿದೆ.

ರಾಜ್ಯದಲ್ಲಿ ಕಳೆದ ಕೆಲದಿನಗಳಿಂದ ಸದ್ದು ಮಾಡ್ತಿರೋದು ಸರ್ಕಾರಿ ಕಾಮಗಾರಿಗಳ ಕಮೀಷನ್ ವ್ಯವಹಾರ. ಎಲ್ಲ ಕಾಮಗಾರಿಯಲ್ಲೂ ಸಚಿವರುಗಳು 40% ರಷ್ಟು ಕಮೀಷನ್ ಪಡೆಯುತ್ತಾರೆ ಎಂಬ ಹೇಳಿಕೆ ಸಂಚಲನ ಉಂಟು ಮಾಡಿತ್ತು. ಇದರ ಬೆನ್ನಲ್ಲೇ ಈಗ ಗುತ್ತಿಗೆದಾರ ಸಂಘದ ಅಧ್ಯಕ್ಷ ಹಾಗೂ ಸಂಘದ ಸದಸ್ಯರು ಸಿಎಂ ‌ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು, ಸಿಎಂಗೆ ಮನವಿ ಸಲ್ಲಿಸಿದ್ದಾರೆ.

ಸಿಎಂ ಗುತ್ತಿಗೆದಾರರ ಸಂಘದ ಸದಸ್ಯರ ಭೇಟಿ ವೇಳೆ ಸಚಿವ ಸಿ.ಸಿ.ಪಾಟೀಲ್ ರನ್ನು ಕರೆಯಿಸಿಕೊಂಡಿದ್ದರು. ಇನ್ನು ಸಿಎಂ ಭೇಟಿ ಬಳಿಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾತನಾಡಿದ್ದು, ಭ್ರಷ್ಟಾಚಾರ ಕಡಿಮೆ ಮಾಡಲು ಸಿಎಂ ಗೆ ಮನವಿ ಮಾಡಿದ್ದೇವೆ. ಪತ್ರದ ಮೂಲಕ ಕೆಲ ಅಂಶಗಳ ಬಗ್ಗೆ ಬರೆದು ಕೊಟ್ಟಿದ್ದೇವೆ. ಅದಕ್ಕೆ ತಕ್ಕಂತೆ ಅವ್ರು ಏನಾದರೂ ದಾಖಲೆ ಕೇಳಿದ್ರೆ, ನಾವು ಕೊಡಲು ಸಿದ್ದರಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಗಳು ಪ್ರಾಮೀಸ್ ಮಾಡಿದ್ದಾರೆ ಎಂದಿದ್ದಾರೆ. ಅಲ್ಲದೇ ಸಿಎಂ ಬೊಮ್ಮಾಯಿ ಅವರು ಚೆನ್ನಾಗಿ ನಡೆಸಿಕೊಂಡರು ಎಂದ ಕೆಂಪಣ್ಣನವರು, ಸಿಎಂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಪ್ಯಾಕೇಜ್ ಪದ್ದತಿಯನ್ನ ಆದಷ್ಟು ನಿಲ್ಲಿಸುತ್ತೇನೆ ಎಂದಿದ್ದಾರೆ.ಭ್ರಷ್ಟಾಚಾರ ಮುಕ್ತ ಮಾಡೋದರ ಬಗ್ಗೆ ಎಂದಿದ್ದಾರೆ. ಸೀನಿಯಾರಿಟಿ ಪ್ರಕಾರ ಪೇಮೆಂಟ್ ಕೊಡಿಸೋದಾಗಿ ಹೇಳಿದ್ದಾರೆ ಎಂದರು.

ಅಲ್ಲದೇ ನಮ್ಮ ಬೇಡಿಕೆ ಈಡೇರಿಸದಿದ್ದರೇ ದಾಖಲೆಗಳನ್ನ ಹೊರಗಡೆ ಬಿಡುಗಡೆ ಮಾಡ್ತೀವಿ ಎಂದಿರೋ ಕೆಂಪಣ್ಣನವರು, ಇವತ್ತಿನ ಭೇಟಿಗೂ 40% ಕಮಿಷನ್ ಹೋರಾಟಕ್ಕೂ ಸಂಬಂಧವಿಲ್ಲ. ಭ್ರಷ್ಟಾಚಾರ ಕಡಿಮೆ ಮಾಡಲು ನಮ್ಮ ಸಹಕಾರ ಬೇಕು ಅಂದಿದ್ದಾರೆ. ನಾವೂ ಸಹಕಾರ ಕೊಡ್ತೀವಿ ಅವರು ಕೂಡ ನಮಗೆ ಸಹಕಾರ ಕೊಡ್ತಾರೆ. ನಾವೂ ನಿರಂತರವಾಗಿ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡ್ತಿವಿ. ಹೊಸದಾಗಿ ಕಮಿಟಿ ಮಾಡುವ ಭರವಸೆಯನ್ನ ಸಿಎಂ ಹೇಳಿದ್ದಾರೆ ಎಂದರು. ಒಟ್ಟಿನಲ್ಲಿ ರಾಜ್ಯದಲ್ಲಿ 40% ಕಮೀಷನ್ ವಿಚಾರ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದ್ದು, ಗುತ್ತಿಗೆದಾರರು ಸಿಎಂ ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂಬ ನೀರಿಕ್ಷೆ ಹೊತ್ತು ಭೇಟಿ ಮಾಡಿದ್ದಾರೆ.

ಇದನ್ನೂ ಓದಿ : ಬಿಜೆಪಿಗೆ ಬರ್ತಾರಂತೆ ಸುಮಲತಾ : ಸಿದ್ಧವಾಗಿದೆ ಕಮಲ ಪಾಳಯದ ಮಾಸ್ಟರ್ ಪ್ಲ್ಯಾನ್

ಇದನ್ನೂ ಓದಿ : ದೇವೇಗೌಡರ ಮೊಮ್ಮಕ್ಕಳ ಬಳಿಕ ಸೊಸೆ ಸರದಿ : ವಿಧಾನಸಭಾ ಎಲೆಕ್ಷನ್ ಗೆ ಭವಾನಿ ರೇವಣ್ಣ

40 percent commission case, Contractors Association meet of CM Basavaraj Bommai

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular