Bhavani Revanna : ದೇವೇಗೌಡರ ಮೊಮ್ಮಕ್ಕಳ ಬಳಿಕ ಸೊಸೆ ಸರದಿ : ವಿಧಾನಸಭಾ ಎಲೆಕ್ಷನ್ ಗೆ ಭವಾನಿ ರೇವಣ್ಣ

ಬೆಂಗಳೂರು : ಒಂದೆಡೆ ರಾಜಕಾರಣದಲ್ಲಿ ಕುಟುಂಬ ರಾಜಕೀಯ ಕೊನೆಯಾಗಬೇಕು ಎಂಬ ವಾದ ಸಾರ್ವಜನಿಕರ ವಲಯದಿಂದ ಕೇಳಿ ಬರ್ತಿದ್ದರೇ ರಾಜಕೀಯ ಪಕ್ಷಗಳು ಮಾತ್ರ ತಮ್ಮ ವಂಶಪಾರಂಪರ್ಯ ರಾಜಕಾರಣವನ್ನು ಮುಂದುವರೆಸಿಕೊಂಡೇ ಹೋಗೋ ಲೆಕ್ಕಾಚಾರದಲ್ಲಿದೆ. ಈಗಾಗಲೇ ಅಪ್ಪ ಮಕ್ಕಳ ಪಕ್ಷ ಅಂತ ಕರೆಸಿಕೊಳ್ಳೋ ಜೆಡಿಎಸ್ ನಲ್ಲಿ ದೊಡ್ಡಗೌಡರ ಕುಟುಂಬದ ಮತ್ತೊಬ್ಬ ಸದಸ್ಯರು ವಿಧಾನಸೌಧದ ಮೆಟ್ಟಿಲೇರೋ ಸಿದ್ಧತೆ ಅರಂಭಿಸಿದ್ದಾರೆ‌. ಈ ನಡುವಲ್ಲೇ ಮಾಜಿ ಪ್ರಧಾನಿ ದೇವೇಗೌಡರ ಸೊಸೆ ಭವಾನಿ ರೇವಣ್ಣ (Bhavani Revanna) ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗುತ್ತಿದೆ.

ಹೌದು ಈಗಾಗಲೇ ಅಜ್ಜ,ಅಪ್ಪ, ಸೊಸೆ,ಮೊಮ್ಮಕ್ಕಳು ಸಕ್ರಿಯ ರಾಜಕೀಯದಲ್ಲಿ ತೊಡಗಿರೋ ಮಾಜಿಪ್ರಧಾನಿ ದೇವೇಗೌಡರ ಕುಟುಂಬದಿಂದ ಮತ್ತೊಬ್ಬ ಸದಸ್ಯರು ವಿಧಾನಸೌಧದ ಮೆಟ್ಟಿಲೇರೋ ಸಾಧ್ಯತೆ ಇದೆ. ಮಾಜಿ ಸಚಿವರ ಪತ್ನಿ ಹಾಗೂ ಹಾಲಿ ಸಂಸದರ ತಾಯಿ ಶ್ರೀಮತಿ ಭವಾನಿ ರೇವಣ್ಣ ಈ ಭಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರಂತೆ. ಕೆಲ ದಿನಗಳ ಹಿಂದೆಯಷ್ಟೇ ಹಾಸನದಲ್ಲಿ ಮಾತನಾಡಿದ್ದ ಮಾಜಿಸಚಿವ ಹಾಗೂ ಹಾಲಿ ಶಾಸಕ ಎಚ್.ಡಿ.ರೇವಣ್ಣ ಭವಾನಿ ರೇವಣ್ಣ ಎಮ್ ಎಲ್ ಎ ಆಗೋದು ಗ್ಯಾರಂಟಿ. ಅದು ಮುಂದಿನ ವಿಧಾನಸಭೆ ಚುನಾವಣೆಯೇ ಇರಬಹುದು ಅಥವಾ ಅದಕ್ಕೂ ಮುಂದಿನ ವಿಧಾನಸಭಾ ಚುನಾವಣೆ ಇರಬಹುದು ಎಂದಿದ್ದರು.

ಈಗ ಈ ಮಾತಿಗೆ ಮತ್ತಷ್ಟು ಬಲಬಂದಿದ್ದು, ಸಂಸದ ಪ್ರಜ್ವಲ್ ರೇವಣ್ಣ ಕೂಡ ಭವಾನಿ ರೇವಣ್ಣ ಚುನಾವಣೆಗೆ ಸ್ಪರ್ಧಿಸೋದು ಖಚಿತ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಮೈಸೂರಿ ನಲ್ಲಿ ಮುಸ್ಲಿಂರಿಗಾಗಿ ಇಫ್ತಾರಕೂಟ ಏರ್ಪಡಿಸಿ ಮಾತನಾಡಿದ ಪ್ರಜ್ವಲ್ ರೇವಣ್ಣ, ಸರ್ವೇ ರಿಪೋರ್ಟ್ ಬಳಿಕ ನಮ್ಮ ತಾಯಿ ಚುನಾವಣೆ ಸ್ಪರ್ಧಿಸೋ ವಿಚಾರ ಅಂತಿಮಗೊಳ್ಳಲಿದೆ ಎಂದಿದ್ದಾರೆ.

ಎಲ್ಲೆಲ್ಲಿ ನಾವು ಸೂಕ್ತವಾಗಿ, ಯಾರ್ಯಾರು ಗೆಲ್ಲಬಹುದು ಅನ್ನೋದನ್ನ‌ ನಮ್ಮ ವರಿಷ್ಠರು ಸರ್ವೇ ಮಾಡಿಸ್ತಿದ್ದಾರೆ.ಮುಖ್ಯವಾಗಿ ಗೆದ್ದೆ ಗೆಲ್ತೀವಿ ಅನ್ನೋರನ್ನ ಮೊದಲನೇ ಪಟ್ಟಿಯಲ್ಲಿ ತಕ್ಷಣ ರಿಲೀಸ್ ಮಾಡ್ತಾರೆ.ಶ್ರಮ ಪಡುವವರನ್ನ ಸೆಕೆಂಡ್ ಲಿಸ್ಟ್‌ನಲ್ಲಿ ಪ್ರಕಟಿಸ್ತೇವೆ. ಇನ್ನಷ್ಟು ಶ್ರಮ ಪಡಬೇಕು ಅನ್ನೋರನ್ನ, ಯಾರನ್ನ ಡಿಪ್ಲಾಯ್ಡ್ ಮಾಡಬೇಕು, ಯಾರಿಗೆ ಇನ್‌ಚಾರ್ಜ್ ಕೊಡಬೇಕು ಅನ್ನೋದನ್ನ ಮೂರನೇ ಪಟ್ಟಿಯಲ್ಲಿ ಪ್ರಕಟ ಮಾಡ್ತಾರೆ. ಸರ್ವೇ ರಿಪೋರ್ಟ್‌‌ ಬಂದ ಮೇಲೆ ನಮ್ಮ ತಾಯಿ ಸ್ಪರ್ಧೆ ಬಗ್ಗೆ ಚರ್ಚೆ ಮಾಡ್ತೀವಿ ಎಂದಿದ್ದಾರೆ.

ಈ ಮಧ್ಯೆ ಎಚ್.ಡಿ.ಕುಮಾರಸ್ವಾಮಿ ಈ ವಿಷಯದ ಸ್ಪಷ್ಟವಾಗಿ ಮಾತನಾಡಲು ಹಿಂದೇಟು ಹಾಕಿದ್ದು, ಯಾರಿಗೆ ಯಾವ ಕ್ಷೇತ್ರದಲ್ಲಿ ಯಾರು ನಿಲ್ತಾರೆ ಅನ್ನೋದನ್ನು ಪಕ್ಷದ ವರಿಷ್ಟರು ತೀರ್ಮಾನ ಮಾಡಲಿದ್ದಾರೆ ಎಂದಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಈ ಭಾರಿ ವಿಧಾನಸಭಾ ಚುನಾವಣೆ ಗೆ ಭವಾನಿ ರೇವಣ್ಣ ಸ್ಪರ್ಧಿಸೋದು ಬಹುತೇಕ ಖಚಿತವಾಗಿದ್ದು, ಕ್ಷೇತ್ರ ಯಾವುದು ಎಂಬುದು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.

ಇದನ್ನೂ ಓದಿ : ಸುನೀಲ್ ಕುಮಾರ್ ಅವರೇ ಸ್ವಲ್ಪ ಕಾಮನ್ ಸೆನ್ಸ್ ಯೂಸ್ ಮಾಡಿ ಸ್ವಾಮಿ : ಪ್ರಿಯಾಂಕ ಖರ್ಗೆ

ಇದನ್ನೂ ಓದಿ : ಬಿಜೆಪಿಗೆ ಬರ್ತಾರಂತೆ ಸುಮಲತಾ : ಸಿದ್ಧವಾಗಿದೆ ಕಮಲ ಪಾಳಯದ ಮಾಸ್ಟರ್ ಪ್ಲ್ಯಾನ್

Ex PM HD Deve Gowda daughter-in-law Bhavani Revanna Competition in Assembly elections

Comments are closed.