ನವದೆಹಲಿ : ಅರವಿಂದ ಕೇಜ್ರಿವಾಲ್ (Arvind Kejriwal) ನೇತೃತ್ವದ ಆಮ್ ಆದ್ಮಿ ಪಾರ್ಟಿ ( Aam Admi Party ) ಈ ಬಾರಿಯ ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಪಂಜಾಬ್ ನಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಿರುವ ಆಪ್ ದೇಶದ ಹಲವು ರಾಜ್ಯಗಳ ಮೇಲೆಯೂ ಕಣ್ಣಿಟ್ಟಿದೆ. ಈ ನಡುವಲ್ಲೇ ಪ್ರಾದೇಶಿಕ ಪಕ್ಷವೆನಿಸಿರುವ ಆಮ್ ಆದ್ಮಿಗೆ (AAP) ಶೀಘ್ರದಲ್ಲಿಯೇ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಲಭಿಸುವ ಸಾಧ್ಯತೆಯಿದೆ.
ದೇಶದಲ್ಲಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳನ್ನು ಹೊರತು ಪಡಿಸಿ ಉಳಿದ ರಾಜಕೀಯ ಪಕ್ಷಗಳು ಅಧಿಕಾರ ನಡೆಸುತ್ತಿವೆ. ಆದರೆ ದೇಶದಲ್ಲಿ ಅಧಿಕೃತ ರಾಷ್ಟ್ರೀಯ ಪಕ್ಷವಾಗಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಒಟ್ಟು ಏಳು ಪಕ್ಷಗಳು. ಆದರೆ ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಸರಕಾರ ಮಾಡಿರುವ ಸಾಧನೆ ಇದೀಗ ದೇಶದ ಜನರೇ ತಿರುಗಿ ನೋಡಿವಂತೆ ಮಾಡಿದೆ. ಇದೀಗ ಪಂಜಾಬ್ ಚುನಾವಣೆಯಲ್ಲಿ ಕೇಜ್ರಿವಾಲ್ ಗೇಮ್ ಪ್ಲ್ಯಾನ್ ವರ್ಕೌಟ್ ಆಗಿದೆ. ಜೊತೆಗೆ ಗೋವಾದಲ್ಲಿಯೂ ಖಾತೆ ತೆರೆದಿದೆ.
ಯಾವುದೇ ಪಕ್ಷವೂ ರಾಷ್ಟ್ರೀಯ ಪಕ್ಷ ಎನಿಸಿಕೊಳ್ಳಬೇಕಾದ್ರೆ ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಅಥವಾ ಅದಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ಮತ ಹಂಚಿಕೆಯ ಕನಿಷ್ಠ 6%ರಷ್ಟನ್ನು ಹೊಂದಿರಬೇಕು. ಆದರೆ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ( Aam Admi Party ) ದೆಹಲಿಯಲ್ಲಿ ಅಧಿಕಾರಕ್ಕೇರುವುದರ ಜೊತೆಗೆ 54% ಮತಗಳನ್ನು ಪಡೆದುಕೊಂಡಿದೆ. ಅಲ್ಲದೇ ಪಂಜಾಬ್‌ನಲ್ಲಿ 42%, ಗೋವಾದಲ್ಲಿ 6.77%, ಉತ್ತರಾಖಂಡದಲ್ಲಿ 3.4% ಹಾಗೂ ಉತ್ತರ ಪ್ರದೇಶದಲ್ಲಿ 0.3% ಮತಗಳನ್ನು ಪಡೆದುಕೊಂಡಿದೆ. ಈ ಮೂಲಕ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಲು ಸಜ್ಜಾಗಿದೆ.
ದೇಶದಲ್ಲಿ ಈಗಾಗಲೇ ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಐ (ಎಂ), ಸಿಪಿಐ, ಬಹುಜನ ಸಮಾಜ ಪಕ್ಷ ಮತ್ತು ಎನ್‌ಸಿಪಿ ಭಾರತದ ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳು ಎನಿಸಿಕೊಂಡಿವೆ. ಒಂದೊಮ್ಮೆ ಆಮ್ ಆದ್ಮಿ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಪಡೆದುಕೊಂಡ್ರೆ ಚುನಾವಣಾ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ ದೂರದರ್ಶನ, ಆಕಾಶವಾಣಿಯ ಮೂಲಕ ಪ್ರಸಾರ ಸೌಲಭ್ಯ ವನ್ನು ಪಡೆಯಲಿವೆ. ಅಲ್ಲದೇ ರಾಷ್ಟ್ರೀಯ ಪಕ್ಷವು ಸಾರ್ವತ್ರಿಕ ಚುನಾವಣೆಗಳಲ್ಲಿ 40 ‘ಸ್ಟಾರ್ ಪ್ರಚಾರಕರನ್ನು ನಾಮ ನಿರ್ದೇಶನ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದೆ. ಮುಂಬರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯ ಹೊತ್ತಲ್ಲಿ ಆಮ್ ಆದ್ಮಿ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮುವ ಸಾಧ್ಯತೆಯಿದೆ.
ಇದನ್ನೂ ಓದಿ : ಕಾಮಗಾರಿಗೆ 40% ಕಮಿಷನ್ : ಈಶ್ವರಪ್ಪ ಭ್ರಷ್ಟಾಚಾರ, ಹೈಕಮಾಂಡ್‌ಗೆ ದೂರು
ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ ದಾಖಲೆ ಬರೆದ ಬಿಜೆಪಿ : 2ನೇ ಬಾರಿಗೆ ಯೋಗಿ ಸರ್ಕಾರ
( Aam Admi Party closer to attain national party)