Lakshmi Manchu : ಸ್ಟಾರ್ ಪುತ್ರಿಯನ್ನೂ ಕಾಡಿದ ಕಾಸ್ಟಿಂಗ್ ಕೌಚ್ : ನಟಿ ಹಂಚಿಕೊಂಡ್ರು ಕಹಿನೆನಪು

ಕಾಸ್ಟಿಂಗ್ ಕೌಚ್ ಅನ್ನೋದು ಭಾಷೆಯ ಬೇಧವಿಲ್ಲದೇ ಎಲ್ಲ‌ ಚಿತ್ರರಂಗವನ್ನು ಕಾಡುತ್ತಿರುವ ಸಮಸ್ಯೆ. ಇದಕ್ಕೆ ಬಲಿಯಾಗೋದು ನಟಿಯರೇ ಅನ್ನೋದು ಆಘಾತಕರ ಸಂಗತಿ. ಸಿನಿಮಾ‌ ಹಿನ್ನೆಲೆಯಿಲ್ಲದ ನಟಿಮಣಿಯರಿಗೆ ಮಾತ್ರ ಇಂಥ ಸಮಸ್ಯೆ ಕಾಡುತ್ತೆ ಅನ್ನೋ ಅಭಿಪ್ರಾಯ ಸಾಮಾನ್ಯವಾಗಿತ್ತು.‌ಆದರೆ ಈಗ ಸ್ಟಾರ್ ನಟರ‌ ಪುತ್ರಿ (Lakshmi Manchu) ಯೊಬ್ಬರು ತಾವು ಈ ಅನುಭವದಿಂದ ನಲುಗಿದ್ದೇವೆ ಎನ್ನುವ ಮೂಲಕ ಶಾಕ್ ನೀಡಿದ್ದಾರೆ.

ಟಾಲಿವುಡ್ ನ ಖ್ಯಾತ ನಟ ಮೋಹನ್ ಬಾಬು ಪುತ್ರಿ ಲಕ್ಷ್ಮೀ ಮಂಚು ಕೂಡ ಹೆಸರಾಂತ‌ನಟಿ. ಸೂಪರ್ ಹಿಟ್ ಸ್ಟಾರ್ ಮಗಳಾಗಿರೋ ಲಕ್ಷ್ಮೀ ಮಂಚು ಹೀರೋಯಿನ್ ಆಗಿರೋದರಲ್ಲಿ ಹೊಸ ಸಂಗತಿ ಏನಿದೆ ? ಅಥವಾ ಅವರ ಪಾಲಿಗೆ ಹೀರೋಯಿನ್ ಆಗೋದು ಯಾವ ದೊಡ್ಡ ಕಷ್ಟದ ವಿಚಾರ ಎಂದೆಲ್ಲ ಮಾತನಾಡಿಕೊಳ್ಳೋರು ಬೇಕಷ್ಟಿದ್ದಾರೆ. ಆದರೆ ಸ್ವತಃ ನಟ ಮೋಹನ್ ಬಾಬು ಪುತ್ರಿ ಲಕ್ಷ್ಮೀ ತಾವು ಕೂಡ ನಟನೆಯ ಬದುಕಿನಲ್ಲಿ ಕಾಸ್ಟಿಂಗ್ ಕೌಚ್ ( casting couch) ಎದುರಿಸಿದ್ದೇನೆ ಎಂಬ ಆಘಾತಕಾರಿ ಹಾಗೂ ಶಾಕಿಂಗ್ ಸತ್ಯವನ್ನು ಬಯಲು ಮಾಡಿದ್ದಾರೆ.

ಈ ಬಗ್ಗೆ ಸ್ವತಃ ತಮ್ಮ ಅನುಭವ ಹಂಚಿಕೊಂಡಿರೋ ಲಕ್ಷ್ಮೀ ಮಂಚು, ಕಾಸ್ಟಿಂಗ್ ಕೌಚ್ (casting couch) ಅನ್ನೋದು ಸಾಮಾನ್ಯ ನಟಿಗೆ ಅಥವಾ ಹೊಸದಾಗಿ ಬರುವ ಕಲಾವಿದೆ ಯರಿಗೆ ಮಾತ್ರವಲ್ಲ ,ಖ್ಯಾತ ನಟರ ಮಗಳಾದ ನನಗೂ ಆಗಿದೆ ಎನ್ನುವ ಮೂಲಕ ಶಾಕ್ ನೀಡಿದ್ದಾರೆ. ಲಕ್ಷ್ಮೀ ಮಂಚು ಈ ಹೇಳಿಕೆ ಈಗ ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದು, ಲಕ್ಷ್ಮೀ ಮಂಚುಗೆ (Lakshmi Manchu) ಕಿರುಕುಳ ನೀಡಿದವ್ಯರ್ಯಾರು ಎಂಬ ಚರ್ಚೆ ಆರಂಭವಾಗಿದೆ.

ಬಿಗ್ ಸ್ಟಾರ್ ಗಳ ಮಕ್ಕಳಿಗೆ ಸಿನಿಮಾ‌ರಂಗದಲ್ಲಿ ಗ್ರ್ಯಾಂಡ್ ವೆಲ್ ಕಮ್ ಇರುತ್ತದೆ. ನಟರ ಮಕ್ಕಳು ಸೇಫ್ ಎಂಬುದಲ್ಲ ಸುಳ್ಳು. ನಾನು ದೊಡ್ಡ ನಟರ ಮಗಳಾಗಿದ್ದರೂ ನನಗೆ ಕಹಿ ಅನುಭವವಾಗಿದೆ. ಎಲ್ಲಿ ಯಾರು ಹೇಗಿರುತ್ತಾರೆ ? ಯಾರ ಮನಸ್ಸಿನಲ್ಲಿ ಏನಿರುತ್ತದೆ ಅನ್ನೋದು ನಮಗೆ ಅರಿವಾಗೋದೇ ಇಲ್ಲ. ಅವಕಾಶ ನೀಡೋ ನೆಪದಲ್ಲಿ ಯಾರ ಯಾರೋ ನಮ್ಮ ಮೇಲೆ‌ ಏನೇನೋ ಕೆಟ್ಟ ಭಾವನೆ ಬೆಳೆಸಿಕೊಂಡು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ ಎಂದಿದ್ದಾರೆ. ಲಕ್ಷ್ಮೀ‌ ಮಂಚು ಈ ಹೇಳಿಕೆ ಯಿಂದ ತೆಲುಗು ಚಿತ್ರರಂಗದಲ್ಲಿ ಲಕ್ಷ್ಮೀ ಕೈಬಿಟ್ಟ ಸಿನಿಮಾ ಗಳು ಹಾಗೂ ಅವರಿಗೆ ಹೀಗೆ ತೊಂದರೆ ಕೊಟ್ಟವರು ಯಾರು ಎಂಬುದರ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಆದರೆ ಕಿರುತೆರೆ ಹಾಗೂ ಬೆಳ್ಳಿತೆರೆ ಎರಡಲ್ಲೂ ಕೆಲಸ ಮಾಡಿರುವ ಲಕ್ಷ್ಮೀ ಮಂಚು ತಮಗೆ ಕಹಿ ಅನುಭವ ಆಗಿದ್ದೆಲ್ಲಿ ಎಂಬ ಗುಟ್ಟು ಬಿಟ್ಟು ಕೊಟ್ಟಿಲ್ಲ. ಇಂಗ್ಲೀಷ್ ಸಿನಿಮಾದ ಮೂಲಕ ವೇ ಕೆರಿಯರ್ ಆರಂಭಿಸಿದ ಲಕ್ಷ್ಮೀ ಮಂಜು ಇದುವರೆಗೂ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : ತ್ರಿಷಾ ಕೃಷ್ಣನ್​​ ಹಾಟ್ ಹಾಟ್ ಫೋಟೋ ವೈರಲ್​​..!

ಇದನ್ನೂ ಓದಿ : ಬಾಯ್ ಪ್ರೆಂಡ್ ಜೊತೆ ಟ್ರಿಪ್, ಬಿಕನಿ ಪೋಸ್: ಸೋಷಿಯಲ್ ಮೀಡಿಯಾಗೆ ನಶೆ ಏರಿಸಿದ ದಿಶಾ ಪಟಾಣಿ

( Lakshmi Manchu recalls casting couch experience )

Comments are closed.