ಅನಂತ ಕುಮಾರ್ ಹೆಗಡೆ ಸಿಎಂ, ಯತ್ನಾಳ್ ಹೋಂ ಮಿನಿಸ್ಟರ್ : ಸದ್ದಿಲ್ಲದೇ ರೂಪುಗೊಳ್ತಿದೆ ಸ್ಟ್ರಾಂಗ್ ಜನಾಭಿಪ್ರಾಯ

ಬೆಂಗಳೂರು : (Anantkumar Hegde CM Basangouda Patil Yatnal Home Minister) ರಾಜ್ಯದಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆ ಸಂಗತಿ ಮುನ್ನಲೆಗೆ ಬಂದಿದೆ. ಕಳೆದ 15 ದಿನಗಳ ಅಂತರದಲ್ಲಿ ರಾಜ್ಯದಲ್ಲಿ ನಡೆದ ಹಿಂದೂ ಹಾಗೂ ಮುಸ್ಲಿಂ ಯುವಕರ ಹತ್ಯೆ ಪ್ರಕರಣದ ಬಳಿಕ ಬಿಜೆಪಿಯ ಆಂತರಿಕ ಕಲಹ ಉಲ್ಬಣಿಸಿದ್ದು, ಸಿಎಂ ಬದಲಾವಣೆಗೆ ಅರ್‌ಎಸ್ ಎಸ್ ನಿಂದಲೇ ಒತ್ತಡ ಹೆಚ್ಚಿದೆ ಎನ್ನಲಾಗ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಹಾಗೂ ಡಿಸಿಎಂ,ಗೃಹ ಸಚಿವ ಸ್ಥಾನಕ್ಕೆ ಅಚ್ಚರಿಯ ಜನಾಭಿಪ್ರಾಯವೊಂದು ಸದ್ದಿಲ್ಲದೇ ಗಟ್ಟಿಯಾಗುತ್ತಿದ್ದು, ವರ್ಗ ಬೇಧವಿಲ್ಲದೇ ಜನಸಾಮಾನ್ಯರು ಆಯ್ಕೆ‌ಮಾಡಿದ ಆ ನಾಯಕರು ಯಾರು ಅನ್ನೋ ಕುತೂಹಲ ನಿಮಗಿದ್ದರೇ ಈ ಸ್ಟೋರಿ ಓದಿ.

ಬಿಜೆಪಿಯ ಅಜೆಂಡಾ ಹಿಂದುತ್ವ. ಆದರೆ ಈ ಭಾರಿ ಅಧಿಕಾರದ ಗದ್ದುಗೆ‌ ಏರಿದ ಬೊಮ್ಮಾಯಿ ನೇತೃತ್ವದ ಸರ್ಕಾರ ಕಾರ್ಯಕರ್ತರ ಹಾಗೂ ಜನಸಾಮಾನ್ಯರ ಆಶಯಗಳನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಹಿಂದುತ್ವಕ್ಕಾಗಿ ಹೋರಾಡುವ ತಮ್ಮ ಕಾರ್ಯಕರ್ತರನ್ನೇ ಬಿಜೆಪಿಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಲಕ್ಷಾಂತರ‌ಕಾರ್ಯಕರ್ತರನ್ನು ಕಾಡಲಾರಂಭಿಸಿದೆ. ಇದು ಬಿಜೆಪಿಯ ಮುಂದಿನ‌ ಚುನಾವಣಾ ಭವಿಷ್ಯಕ್ಕೆ ಮಾರಕ ಎಂಬುದರಲ್ಲಿ ಅನುಮಾನವಿಲ್ಲ.

ಇದಕ್ಕೆಲ್ಲ ಕಾರಣ ಅಸಮರ್ಥ ಸಿಎಂ‌ ಹಾಗೂ ಗೃಹಸಚಿವರು ಎಂಬ ಮಾತು ಜನಸಾಮಾನ್ಯ ರಿಂದಲೇ ಕೇಳಿಬಂದಿದೆ. ಸಿಎಂ ಮತ್ತು ಗೃಹ ಸಚಿವರು ಕಾನೂನು ಸುವ್ಯವಸ್ಥೆಯ ಬಗ್ಗೆ ಕಿಡಿಕೇಡಿಗಳ ಎದೆಯಲ್ಲಿ ನಡುಕ ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಗೃಹ ಸಚಿವರ ಬೇಜವಾಬ್ದಾರಿಯ ಮಾತುಗಳು, ಸಿಎಂ ಸೈಲೆಂಟ್ ಸ್ವಭಾವ ಈ ರೀತಿಯ ಹತ್ಯೆಕೋರರಿಗೆ ಧೈರ್ಯ ತುಂಬುತ್ತಿದೆ. ಹಿಂದೂ ಕಾರ್ಯಕರ್ತರಿರಬಹುದು ಅಥವಾ ಅನ್ಯಕೋಮಿನವರು ಇರಬಹುದು, ಯಾರನ್ನಾದರೂ ಹತ್ಯೆ ಮಾಡಿದರೇ ಸುಲಭವಾಗಿ ಹೊರಬರಬಹುದು ಎಂಬ ಅಭಿಪ್ರಾಯ ರೂಪುಗೊಂಡಿದೆ ಎಂಬುದು ಜನರ ಆತಂಕ.

ಹೀಗಾಗಿ ಇದಕ್ಕೆಲ್ಲ ಪರಿಹಾರ ಸಿಗಬೇಕೆಂದರೇ, ವೈರಿಯ ಎದೆಯಲ್ಲಿ ನಡುಕ‌ ಮೂಡಿಸುವಂತ ಆಡಳಿತ ನೀಡಲು ಸಂಸದ, ಬಿಜೆಪಿಯ ಫೈರ್ ಬ್ರ್ಯಾಂಡ್ ಅನಂತ ಕುಮಾರ್ ಹೆಗಡೆ ಸಿಎಂ ಸ್ಥಾನಕ್ಕೇರಬೇಕು. ಅವರಿಗೆ ಬಿಜೆಪಿಯ ನೇರ ನುಡಿಯ ನಾಯಕ ಹಾಗೂ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಡಿಸಿಎಂ ಸ್ಥಾನಕ್ಕೇರಬೇಕು. ಡಿಸಿಎಂಗೆ ಗೃಹ ಇಲಾಖೆಯನ್ನು ಕೊಡಬೇಕು.

ಇಂತಹದೊಂದು ಜನಾಭಿಪ್ರಾಯ ಸದ್ದಿಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಬಲಗೊಳ್ಳುತ್ತಿದೆ. ಮಾತ್ರವಲ್ಲ ಅಟೋ ಚಾಲಕರಿಂದ ಆರಂಭಿಸಿ ಕೂಲಿ ಕಾರ್ಮಿಕರ ತನಕ ಎಲ್ಲರೂ , ಖಡಕ್ ಆಡಳಿತ ನೀಡುವಂತ ಹುಲಿ ಸಿಂಹದಂತವರಿಗೆ ರಾಜ್ಯದ ಚುಕ್ಕಾಣಿ ನೀಡಬೇಕು‌. ಇಲ್ಲದಿದ್ದರೇ ಚಿಕ್ಕ ಪುಟ್ಟ ಕಳ್ಳರು, ರೌಡಿಗಳು ಸರ್ಕಾರಕ್ಕೆ ಕಂಟಕವಾಗುವ ಮಟ್ಟಕ್ಕೆ ಬೆಳೆದು ನಿಲ್ಲುತ್ತಾರೆ. .ಈಗ ಅಧಿಕಾರದಲ್ಲಿರೋ ಸಿಎಂ ಹಾಗೂ ಗೃಹ ಸಚಿವರು ಪರಿಸ್ಥಿತಿ ನಿಯಂತ್ರಿಸಲು ಸಂಪೂರ್ಣ ವಿಫಲರಾಗಿದ್ದಾರೆ. ನಮಗೆ ಬೆಂಕಿಚೆಂಡಿನಂತ ವ್ಯಕ್ತಿತ್ವದ ಅನಂತ ಕುಮಾರ್ ಹೆಗಡೆ ಹಾಗೂ ಯತ್ನಾಳರಂತಹವರ ನಾಯಕತ್ವ ಬೇಕು ಎನ್ನುತ್ತಿದ್ದಾರೆ.

ಇನ್ನೊಂದೆಡೆಯಲ್ಲಿ ಸಿಎಂ ಬಸವರಾಜ್‌ ಬೊಮ್ಮಾಯಿ ಸೇರಿದಂತೆ ಸಚಿವ ಸಂಪುಟದಲ್ಲಿರುವ ಸಚಿವರು ಬಹುತೇಕರು ಇತರ ಪಕ್ಷದಿಂದ ಬಂದವರಾಗಿದ್ದಾರೆ. ಮೂಲ ಬಿಜೆಪಿ ಶಾಸಕರ ಸಂಖ್ಯೆ ಸಂಪುಟದಲ್ಲಿ ಕಡಿಮೆಯಾಗಿರುವುದೇ ಸರಕಾರದ ವೈಫಲ್ಯಕ್ಕೆ ಕಾರಣ ಎನ್ನಲಾಗುತ್ತಿದೆ. ಇನ್ನೊಂದೆಡೆಯಲ್ಲಿ ರಾಜ್ಯ ಸರಕಾರದ ವಿರುದ್ದ ಸ್ವತಃ ಬಿಜೆಪಿ ಕಾರ್ಯಕರ್ತರು, ಮುಖಂಡರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರ. ಒಂದೆಡೆ ಸಮೀಕ್ಷೆಯಲ್ಲಿ ಬಿಜೆಪಿ ಸದ್ಯ ಚುನಾವಣೆ ನಡೆದ್ರೆ ಆರವತ್ತು ಸ್ಥಾನಗಳನ್ನು ಗೆಲ್ಲುವುದು ಕಷ್ಟ ಅನ್ನುತ್ತಿದ್ರೆ, ಇನ್ನೊಂದೆಡೆಯಲ್ಲಿ ಪಕ್ಷದ ಕಾರ್ಯಕರ್ತರೇ ಸಿಡಿದು ನಿಂತಿರುವುದು ಕೇಂದ್ರ ನಾಯಕರ ತಲೆನೋವಿಗೆ ಕಾರಣವಾಗಿದೆ. ಇನ್ನು ಆರ್‌ಎಸ್‌ಎಸ್‌ ನಾಯಕರು, ಸಂಘ ಪರಿಹಾರದ ಪ್ರಮುಖರು, ಮೂಲ ಬಿಜೆಪಿ ನಾಯಕರಿಗೂ ಕೂಡ ಸರಕಾರದ ಕಾರ್ಯವೈಖರಿ ಬೇಸರ ತರಿಸಿದೆ.

ಅಮಿತ್‌ ಶಾ ರಾಜ್ಯ ಪ್ರವಾಸದ ಬೆನ್ನಲ್ಲೇ ರಾಜ್ಯದಲ್ಲೀಗ ಸಿಎಂ ಬದಲಾವಣೆಯ ಚರ್ಚೆಯೂ ಶುರುವಾಗಿದೆ. ಒಂದೆಡೆ ಸಾಲು ಸಾಲು ಹತ್ಯೆ, ಇನ್ನೊಂದೆಡೆಯಲ್ಲಿ ಸಮೀಕ್ಷೆಯ ವರದಿ. ಜೊತೆಗೆ ಸಂಘ ಪರಿವಾರದ ನಾಯಕರ ಮುನಿಸು. ಎಲ್ಲದಕ್ಕೂ ತೇಪೆ ಹಾಕಬೇಕಾದ ಸಂದಿಗ್ದತೆಗೆ ಹಿರಿಯ ನಾಯಕರು ಸಿಲುಕಿದ್ದಾರೆ. ಚುನಾವಣೆಗೆ ಇನ್ನು ಒಂದು ವರ್ಷ ಇರುವ ಹೊತ್ತಲ್ಲೇ ರಾಜ್ಯದಲ್ಲಿ ಹಿಂದುತ್ವದ ಹಿನ್ನೆಲೆಯುಳ್ಳ ನಾಯಕನನ್ನು ಸಿಎಂ ಕುರ್ಚಿಯ ಮೇಲೆ ಕೂರಿಸಲು ಬಿಜೆಪಿ ಸರ್ಕಸ್‌ ಮಾಡುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಜೊತೆಗೆ ಕರ್ನಾಟಕದ ಸದ್ಯದ ಸ್ಥಿತಿಯಲ್ಲಿ ಯಾರು ಸಿಎಂ, ಯಾರು ಡಿಸಿಎಂ, ಯಾರು ಗೃಹ ಸಚಿವರಾಗಬೇಕು ಅನ್ನೋ ಕುರಿತು ಚರ್ಚೆಯೂ ಜೋರಾಗಿಯೇ ನಡೆಯುತ್ತಿದೆ.

ಇದನ್ನೂ ಓದಿ : Amit Shah visit : ರಾಜ್ಯದಲ್ಲಿ ಸಿಎಂ ಬದಲಾವಣೆ ಫಿಕ್ಸ್ : ಅಮಿತ್ ಶಾ ರಾಜ್ಯ ಭೇಟಿಗೆ ಇದೇ ಕಾರಣನಾ ?

ಇದನ್ನೂ ಓದಿ : Red alert Karnataka : ಕರಾವಳಿ, ಮಲೆನಾಡಲ್ಲಿ 2 ದಿನ ಭಾರೀ ಮಳೆ : ರೆಡ್ ಅಲರ್ಟ್ ಘೋಷಣೆ, ಶಾಲೆಗಳಿಗೆ ರಜೆ

Anantkumar Hegde CM Basangouda Patil Yatnal Home Minister, Strong Referendum Formed Quietly in Karnataka

Comments are closed.