ಬೆಂಗಳೂರು : ಯಲಹಂಕ ನಗರದ ಪ್ರಭಾವಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ( MLA SR Vishwanath ) ಹಾಗೂ ಬೆಂಬಲಿಗನ ಹತ್ಯೆಗೆ ಮಾಸ್ಟರ್ ಪ್ಲ್ಯಾನ್ ಸಿದ್ದವಾಗಿತ್ತು ಅನ್ನೋ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಕಾಂಗ್ರೆಸ್ ಮುಖಂಡ ಎಂ.ಎನ್. ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್ ರಹಸ್ಯವಾಗಿ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಕುಳ್ಳ ದೇವರಾಜ್ ಶಾಸಕ ಎಸ್.ಆರ್ .ವಿಶ್ವನಾಥ್ ಜೊತೆಗೆ ಗುರುತಿಸಿಕೊಂಡಿದ್ದ ಆದರೆ, ವಿಶ್ವನಾಥ್ ಎದುರಲ್ಲಿ ಎರಡು ಬಾರಿ ಸೋಲು ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಕೃಷ್ಣನ ಜೊತೆ ಸೇರಿ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಿರುವುದು ಬಯಲಾಗಿದೆ. ಇಬ್ಬರ ನಡುವಿನ ಸಂಭಾಷಣೆಯ ವಿಡಿಯೋ ಇದೀಗ ವೈರಲ್ ಆದ ಬೆನ್ನಲ್ಲೇ ಸಿಸಿಬಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದೆ. ತಡರಾತ್ರಿಯ ವರೆಗೂ ಕಾಂಗ್ರೆಸ್ ನಾಯಕನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಡಿಯೋದಲ್ಲಿ ಶಾಸಕ ವಿಶ್ವನಾಥ್ ಅವರನ್ನು ಮುಗಿಸುವ ಕುರಿತು ಮಾತನಾಡಿದ್ದಾರೆ.
ಸ್ಕೆಚ್ ವಿಡಿಯೋ ಶೂಟ್ ಮಾಡಿದ್ದ ದೇವರಾಜ್ !
ಇನ್ನು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ ಹತ್ಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಅವರ ಜೊತೆಗೆ ಕುಳ್ಳ ದೇವರಾಜ್ ಮಾತುಕತೆ ನಡೆಸಿದ್ದಾನೆ. ವಿಡಿಯೋದಲ್ಲಿ ಕುಳ್ಳ ದೇವರಾಜ್ ಹತ್ಯೆಗೆ ಪ್ರಚೋದನೆ ನೀಡುತ್ತಿರುವುದು ಕಂಡು ಬರುತ್ತಿದೆ. ವಿಶ್ವನಾಥ್ ವಿರುದ್ದ ವಿಡಿಯೋ ಮಾಡಿಸಿ, ಗೋಪಾಲ ಕೃಷ್ಣನನ್ನು ಅರೆಸ್ಟ್ ಮಾಡಿಸಿ, ವಿಶ್ವನಾಥ್‌ಗೆ ಇನ್ನಷ್ಟು ಹತ್ತಿರವಾಗಲಯ ಈ ಪ್ಲ್ಯಾನ್ ಮಾಡಿದ್ನಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಸಿಸಿಬಿ ತನಿಖೆಯ ವೇಳೆಯಲ್ಲಿಯೂ ದೇವರಾಜ್ ಗೋಪಾಲಕೃಷ್ಣನನ್ನು ಪ್ರಚೋದಿಸುತ್ತಿರುವುದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ದೇವರಾಜ್‌ನನ್ನು ವಶಕ್ಕೆ ಪಡೆದು, ಗೋಪಾಲಕೃಷ್ಣನನ್ನು ಸಿಸಿಬಿ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.
ರಾಜಕೀಯವಾಗಿ ಮುಗಿಸಲು ನಡೆದಿತ್ತಾ ಫ್ಲ್ಯಾನ್
ವಿಶ್ವನಾಥ್ ಎರಡು ಎರಡು ಬಾರಿ ಸೋಲು ಕಂಡಿರುವ ಗೋಪಾಲಕೃಷ್ಣನನ್ನು ರಾಜಕೀಯವಾಗಿ ಮುಗಿಸುವ ಸಲುವಾಗಿ ವಿಶ್ವನಾಥ್ ಈ ಪ್ಲ್ಯಾನ್ ಮಾಡಿದ್ರಾ, ಇಲ್ಲಾ ವಿಶ್ವನಾಥ್ ಸ್ನೇಹ ಸಂಪಾದಿಸುವ ಸಲುವಾಗಿಯೇ ಕುಳ್ಳ ದೇವರಾಜ್ ಈ ಫ್ಲ್ಯಾನ್ ಮಾಡಿನ್ನಾ ಅನ್ನೋ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇನ್ನು ಸಿಸಿಬಿ ಅಧಿಕಾರಿಯೋರ್ವರು ಕುಳ್ಳ ದೇವರಾಜ್‌ಗೆ ಸ್ಟಿಂಗ್ ಮಾಡಲು ಫ್ಲ್ಯಾನ್ ನೀಡಿದ್ರು ಅನ್ನೋ ಮಾತು ಕೇಳಿಬರುತ್ತಿದ್ದು, ಹಿರಿಯ ಅಧಿಕಾರಿಗಳ ವಿಚಾರಣೆಯ ವೇಳೆಯಲ್ಲಿ ಆ ಅಧಿಕಾರಿಯ ಬಗ್ಗೆ ಕುಳ್ಳ ದೇವರಾಜ್ ಬಾಯಿಬಿಟ್ಟಿದ್ದಾನೆ ಎನ್ನಲಾಗುತ್ತಿದೆ. ವಿಡಿಯೋ ಕುರಿತು ಸಿಸಿಬಿ ಅಧಿಕಾರಿಯೋರ್ವರು ಶಾಸಕ ವಿಶ್ವನಾಥ್ ಗೆ ಮಾಹಿತಿ ನೀಡಿದ್ದಾರೆ.
ಸೂಕ್ತ ಕ್ರಮಕೈಗೊಳ್ಳುತ್ತೇವೆ : ಕಮಲ್ ಪಂತ್
ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಲ್ಲಿ ವಿಚಾರಣೆ ನಡೆಯುತ್ತಿದೆ. ಈ ಕುರಿತು ನಮ್ಮ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುತ್ತಾರೆ. ಆದರೆ ಚರ್ಚೆ ಮಾಡಿದ ತಕ್ಷಣ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಕ್ಷಿ ಕಲೆ ಹಾಕುತ್ತಿದ್ದೇವೆ. ಆದರೆ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಕುಳ್ಳ ದೇವರಾಜ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ವಿಡಿಯೋದ ಹಿಂದಿನ ಉದ್ದೇಶ, ಸತ್ಯಾಸತ್ಯತೆ ಏನು ಅನ್ನೋ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಆರು ತಿಂಗಳ ಹಿಂದೆಯೇ ನಡೆದಿತ್ತಾ ಸ್ಕೆಚ್ ?
ಸದ್ಯ ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಿರುವ ಕುರಿತ ವಿಡಿಯೋ ಸುಮಾರು ಹದಿನೈದು ದಿನಗಳ ಹಿಂದೆಯಷ್ಟೇ ಬೆಳಕಿಗೆ ಬಂದಿದೆ. ಆದರೆ ಈ ಘಟನೆ 6 ತಿಂಗಳ ಹಿಂದೆ ನಡೆದಿದೆ ಎನ್ನಲಾಗುತ್ತಿದೆ. ವಿಶ್ವನಾಥ್ ಮುಗಿಸಲು ತಾನು ಗೋಪಾಲಕೃಷ್ಣನ ಬಳಿಯಲ್ಲಿ ಕುಳ್ಳ ದೇವರಾಜ್ ಪ್ರಸ್ತಾಪ ಮಾಡಿದ್ದಾನೆ. ಈ ವೇಳೆಯಲ್ಲಿ ಸಾಥ್ ಕೊಡುವುದಾಗಿ ಗೋಪಾಲಕೃಷ್ಣ ಭರವಸೆಯನ್ನು ನೀಡಿದ್ದಾನೆ. ಈ ಸಂದರ್ಭದಲ್ಲಿ ದೇವರಾಜ್ ಮಾತುಕತೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಈ ಪ್ರಕರಣದಲ್ಲಿ ದೇವರಾಜ್ ಡಬ್ಬಲ್ ಗೇಮ್ ಆಡಿದ್ನಾ ಅನ್ನೋ ಬಗ್ಗೆಯೂ ಅನುಮಾನವಿದೆ. ಗೋಪಾಲಕೃಷ್ಣ ಹಾಗೂ ವಿಶ್ವಾನಾಥ್ ನಡುವೆ ರಾಜಕೀಯ ವೈಷಮ್ಯವಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ದ್ವೇಷ ಹೆಚ್ಚು ಮಾಡುವ ಕಾರ್ಯವನ್ನು ದೇವರಾಜ್ ಮಾಡಿದ್ದಾನೆಯೇ ಅನ್ನೋ ಬಗ್ಗೆ ವಿಚಾರಣೆಯಿಂದಲೇ ತಿಳಿದು ಬರಬೇಕಾಗಿದೆ. ಇನ್ನು ವಿಡಿಯೋದಲ್ಲಿ ನಡೆದಿರೋ ಸಂಭಾಷಣೆಯ ಪ್ರಕಾರ ಆಂಧ್ರದಿಂದ ಸುಫಾರಿ ಗ್ಯಾಂಗ್ ಬೆಂಗಳೂರಿಗೆ ಬಂದಿತ್ತಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆದರೆ ಆಂಧ್ರ ಗ್ಯಾಂಗ್ ಬೆಂಗಳೂರಿಗೆ ಬಂದಿರುವ ಅಥವಾ ಹತ್ಯೆಗೆ ಸಂಚು ರೂಪಿಸಿರುವ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಅನ್ನೋದು ಪೊಲೀಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ : Udupi : ಗೋ ರಕ್ಷಕರ ಹತ್ಯೆ ಯತ್ನ ಪ್ರಕರಣ : ಆರೋಗ್ಯ ವಿಚಾರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ
ಇದನ್ನೂ ಓದಿ : Puneeth – DK Ravi : ಡಿ.ಕೆ.ರವಿ ಕುಟುಂಬಕ್ಕೂ ನೆರವಾಗಿದ್ರು ಪುನೀತ್: ಅಪ್ಪು ಸ್ಮರಿಸಿ ಕಣ್ಣಿರಿಟ್ಟ ಗೌರಮ್ಮ
( Master Plan for the murder of BJP influential Yelahanka MLA SR Vishwanath)