BJP MLA FIGHTING : ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಎದುರಲ್ಲೇ ಬಿಜೆಪಿ ಶಾಸಕರಿಬ್ಬರ ಗಲಾಟೆ

ಹುಬ್ಬಳ್ಳಿ : ವಿಧಾನ ಪರಿಷತ್‌ ಚುನಾವಣೆಯ ಕಾವು ಜೋರಾಗಿದೆ. ಚುನಾವಣೆಗೆ ಸಂಬಂಧಸಿದಂತೆ ಚರ್ಚಿಸುವ ಸಲುವಾಗಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಸಭೆ ಆಯೋಜಿಸಿತ್ತು. ಆದರೆ ಸಭೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಜಗದೀಶ್‌ ಶೆಟ್ಟರ್‌ ಅವರ ಎದುರಲ್ಲೇ ಹಾವೇರಿ ಜಿಲ್ಲೆಯ ರಾಣಿ ಬೆನ್ನೂರು ಶಾಸಕ ಅರುಣ್‌ ಕುಮಾರ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಆರ್.‌ ಶಂಕರ್‌ ನಡುವೆ ಗಲಾಟೆ (BJP MLA FIGHTING)ನಡೆದಿದೆ.

ಹಾವೇರಿ ಜಿಲ್ಲೆಯ ಚುನಾವಣಾ ಉಸ್ತುವಾರಿ ವಿಚಾರ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದಂತೆಯೇ ಶಾಸಕ ಅರುಣ್‌ ಕುಮಾರ್‌ ಹಾಗೂ ಆರ್.‌ ಶಂಕರ್‌ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಈ ವೇಳೆಯಲ್ಲಿ ಇಬ್ಬರ ಬೆಂಬಲಿಗರೂ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದರು. ಆರ್.‌ ಶಂಕರ್‌ ಸಭೆಯಿಂದ ಹೊರ ನಡೆದ್ರು. ನಂತರ ಅವರನ್ನು ಸಮಾಧಾನ ಪಡಿಸಿ ಸಭೆಗೆ ಕರೆ ತರಲಾಯ್ತು. ಶಂಕರ್‌ ಸಭೆಗೆ ಬಂದ ಸ್ವಲ್ಪ ಹೊತ್ತಲ್ಲೇ ಶಾಸಕ ಅರುಣ್‌ ಕುಮಾರ್‌ ಸಭೆಯಿಂದ ಹೊರ ನಡೆದಿದ್ದಾರೆ. ಬಿಜೆಪಿ ಮುಖಂಡರು ಎಷ್ಟೇ ಮನವೊಲಿಸಿದ್ರು ಸಮಾಧಾನಗೊಳ್ಳದ ಶಾಸಕ ಅರುಣ್‌ ಕುಮಾರ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರಾಜೀನಾಮೆ ಪತ್ರವನ್ನು ಬರೆಯಲು ಮುಂದಾಗಿದ್ದಾರೆ. ಆದರೆ ಹಾವೇರಿ ಜಿಲ್ಲಾ ಬಿಜೆಪಿ ಮುಖಂಡರು ಮನವೊಲಿಸಿ ಸಭೆಗೆ ಕರೆದಿದ್ದಾರೆ. ಆದರೆ ತನಗೆ ಅವಮಾನವಾಗಿದೆ ಎಂದ ಅರುಣ್‌ ಕುಮಾರ್‌ ಸಭೆಗೆ ಆಗಮಿಸದೆ ಹೊಟೇಲ್‌ನಿಂದ ನಿರ್ಗಮಿಸಿದ್ದಾರೆ.

ಇನ್ನು ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಜಗದೀಶ್‌ ಶೆಟ್ಟರ್‌ ಅವರು ಸಭೆಯಲ್ಲಿ ಜಗಳ ನಡೆದಿಲ್ಲ. ಬದಲಾಗಿ ಶಾಸಕ ಅರುಣ್‌ ಕುಮಾರ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಆರ್.‌ ಶಂಕರ್‌ ಅವರ ನಡುವೆ ಮಾತಿನ ಚಕಮಕಿ ನಡೆದಿದೆ ಅಷ್ಟೇ. ಚುನಾವಣೆಯ ಬೆನ್ನಲ್ಲೇ ಇಬ್ಬರ ಜೊತೆಗೂ ಚರ್ಚಿಸಿ ಪಕ್ಷದ ನಾಯಕರು ಸಮಸ್ಯೆ ಬಗೆಹರಿಸಲಿದ್ದಾರೆ ಎಂದಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ರಾಣಿ ಬೆನ್ನೂರು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದ ಆರ್.ಶಂಕರ್‌ ಕಾಂಗ್ರೆಸ್‌ – ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿ ಆಯ್ಕೆಯಾಗಿದ್ದರು. ಆದರೆ ಕಾಂಗ್ರೆಸ್‌ ವಿರುದ್ದ ಮುನಿಸಿಕೊಂಡು ಕಾಂಗ್ರೆಸ್‌ ಅತೃಪ್ತ ಶಾಸಕರ ಗುಂಪು ಸೇರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಸ್ಥಾನ ಅನರ್ಹವಾಗಿತ್ತು. ನಂತರದಲ್ಲಿ ಬಿಜೆಪಿ ಸೇರಿ ಸಚಿವರಾಗುವ ಕನಸು ಕಂಡಿದ್ದರು. ಆದರೆ ನಂತರದಲ್ಲಿ ಎದುರಾದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅರುಣ್‌ ಕುಮಾರ್‌ ಅವರಿಗೆ ಟಿಕೆಟ್‌ ನೀಡಿತ್ತು. ಅಲ್ಲದೇ ಅರುಣ್‌ ಕುಮಾರ್‌ ಶಾಸಕರಾಗಿ ಆಯ್ಕೆಯಾಗಿದ್ದರು. ಕೊಟ್ಟ ಮಾತಿನಂತೆ ಯಡಿಯೂರಪ್ಪ ಆರ್.‌ ಶಂಕರ್‌ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ನೇಮಕ ಮಾಡಿದ್ದರು. ಅಲ್ಲಿಂದಲೇ ಶಾಸಕ ಅರುಣ್‌ ಕುಮಾರ್‌ ಹಾಗೂ ಶಂಕರ್‌ ಅವರ ನಡುವೆ ಹಾವೇರಿ ಜಿಲ್ಲೆಯಲ್ಲಿ ಮುಸುಕಿನ ಗುದ್ದಾಟ ಶುರುವಾಗಿತ್ತು.

ರಾಜ್ಯದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಡಿಸೆಂಬರ್‌ 10 ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದಾರೆ. ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆಯುವ ಚುನಾವಣಾ ಫಲಿತಾಂಶ ಡಿಸೆಂಬರ್‌ 14 ರಂದು ಪ್ರಕಟವಾಗಲಿದೆ.

ಇದನ್ನೂ ಓದಿ : ಬಿಜೆಪಿ ಅಂಗಡಿಯಲ್ಲಿ ಪ್ರಭಾವ ನೋಡಿ ಸುಣ್ಣ-ಬೆಣ್ಣೆ: ಟ್ವೀಟ್ ನಲ್ಲಿ ಕುಟುಕಿದ ಕಾಂಗ್ರೆಸ್

ಇದನ್ನೂ ಓದಿ : ಬಿಜೆಪಿ ಪ್ರಭಾವಿ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ಬೆಂಬಲಿಗನ ಹತ್ಯೆಗೆ ನಡೆದಿತ್ತಾ ಮಾಸ್ಟರ್ ಪ್ಲಾನ್ ?

(Karnataka legislative council elections 2 BJP MLA FIGHTING in front of Jagadish Shetter)

Comments are closed.