ಭಾನುವಾರ, ಏಪ್ರಿಲ್ 27, 2025
HomekarnatakaCT Ravi Again Minister : ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ : ಮತ್ತೆ ಸಚಿವರಾಗ್ತಾರಾ...

CT Ravi Again Minister : ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ : ಮತ್ತೆ ಸಚಿವರಾಗ್ತಾರಾ ಸಿ.ಟಿ.ರವಿ

- Advertisement -

ಬೆಂಗಳೂರು : ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರೋದು ಬೆರಳೆಣಿಕೆಯಷ್ಟು ಸಚಿವ ಸ್ಥಾನ. ಆದರೆ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಈಗಾಗಲೇ 20 ಕ್ಕೂ ಹೆಚ್ಚು ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ಸಂಖ್ಯೆ ಹೈಕಮಾಂಡ್ ಗೆ ಶಿಫಾರಸ್ಸುಗೊಂಡಿದ್ದು ಯಾರಿಗೂ ಇನ್ನೂ ಸಚಿವ ಸ್ಥಾನ ಖಚಿತಗೊಂಡಿಲ್ಲ. ಈ ಮಧ್ಯೆ ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿರೋ ಸಿ.ಟಿ.ರವಿ (CT Ravi Again Minister) ಕೂಡ ರಾಜ್ಯ ರಾಜಕಾರಣದ‌ಮೇಲೆ ಕಣ್ಣಿಟ್ಟಿದ್ದು, ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಅನ್ನೋ ಎಕ್ಸಕ್ಲೂಸಿವ್ ಮಾಹಿತಿ ನ್ಯೂಸ್ ನೆಕ್ಟ್ಸ್ ಗೆ ಲಭ್ಯವಾಗಿದೆ.

ಸಿ.ಟಿ.ರವಿ ಬಿಜೆಪಿಯ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರು. ರಾಜ್ಯ ಬಿಜೆಪಿಯಲ್ಲಿ ಹಲವು ಜವಾಬ್ದಾರಿ ನಿರ್ವಹಿಸಿದ ಅನುಭವ ಇರೋ ಸಿ.ಟಿ.ರವಿ ಪ್ರಸ್ತುತ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾತ್ರವಲ್ಲ ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಚುನಾವಣಾ ಉಸ್ತುವಾರಿಯಾಗಿ ಕೂಡ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಇದೆಲ್ಲದ ಮಧ್ಯೆ ಸಿ.ಟಿ.ರವಿ ಮತ್ತೆ ರಾಜ್ಯ ರಾಜಕೀಯಕ್ಕೆ ಮರಳುವ ಮನಸ್ಸು ಮಾಡಿದ್ದಾರಂತೆ. ಹೀಗಾಗಿ ನೇರವಾಗಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಳಿಯೇ ತಮ್ಮ ಬೇಡಿಕೆ ಹೇಳಿಕೊಂಡಿದ್ದಾರಂತೆ.

ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಹೀಗಾಗಿ ತುರ್ತಾಗಿ ಪಕ್ಷ ಸಂಘಟನೆ ಮಾಡುವ ಅಗತ್ಯವಿದೆ. ನನಗೆ ಮಂತ್ರಿ ಸ್ಥಾನ ನೀಡಿದಲ್ಲಿ ನಾನು ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಬಹುದು. ರಾಜ್ಯಾದ್ಯಂತ ಕಾರ್ಯಕರ್ತರನ್ನು ಒಗ್ಗೂಡಿಸಬಹುದು. ಚುನಾವಣೆ ವರ್ಷ ಆಗಿದ್ದರಿಂದ ಕ್ಷೇತ್ರದಲ್ಲೇ ಹೆಚ್ಚು ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಮನವೊಲಿಸುವ ಪ್ರಯತ್ನ ಮಾಡಿದ್ದಾರಂತೆ.

ಬೇರೆ ಬೇರೆ ರಾಜ್ಯಗಳ ಉಸ್ತುವಾರಿ ಇರೋದರಿಂದ ರಾಜ್ಯದ ಪ್ರಚಾರ, ಕ್ಷೇತ್ರದ ಕಡೆ ಗಮನ ಹರಿಸೋದಿಕ್ಕೆ ಸಾಧ್ಯವಾಗೋದಿಲ್ಲ. ಕ್ಷೇತ್ರದಲ್ಲೂ ಜನರ ಜೊತೆ ಇರಲು ಆಗಲ್ಲ. ಹೀಗಾಗಿ ಸದ್ಯ ರಾಷ್ಟ್ರ ರಾಜಕಾರಣದಿಂದ ಸ್ವಲ್ಪ ಬ್ರೇಕ್ ಪಡೆದು ರಾಜ್ಯ ರಾಜಕರಣದಲ್ಲೇ ಸಕ್ರೀಯವಾಗಿ ತೊಡಗಿಸಿಕೊಳ್ತೀನಿ. ಮಂತ್ರಿ ಸ್ಥಾನ ನೀಡಿದರೆ ಇಡೀ ರಾಜ್ಯ ಸುತ್ತಾಡಿ ಸಂಘಟನೆ ಬಗ್ಗೆ ಒತ್ತು ಕೊಡ್ತೀನಿ ಎಂದು ತಮ್ಮ ಆಸೆಯನ್ನು ಬಿ.ಎಲ್.ಸಂತೋಷ್ ಬಳಿ ಹೇಳಿಕೊಂಡಿದ್ದಾರಂತೆ.

ಆದರೆ ಮೂಲಗಳ ಮಾಹಿತಿ ಪ್ರಕಾರ ಬಿಜೆಪಿ ಸಿ.ಟಿ.ರವಿ ಸಚಿವ ಸ್ಥಾನಕ್ಕೆ ಸೀಮಿತವಾಗಿ ಕರ್ನಾಟಕದಲ್ಲೇ ಉಳಿಯೋದು ಬೇಡ ಎಂಬ ಕಾರಣಕ್ಕೆ ಹೈಕಮಾಂಡ್ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಸೆಳೆದುಕೊಂಡಿದೆ. ಹೀಗಿರುವಾಗ ಮತ್ತೆ ಅವರನ್ನೂ ರಾಜ್ಯ ರಾಜಕಾರಣಕ್ಕೆ ಮರಳೋದಿಕ್ಕೆ ಅವಕಾಶ ಮಾಡಿಕೊಡೋದು ಕಷ್ಟ ಎನ್ನಲಾಗ್ತಿದೆ.

ಇದನ್ನೂ ಓದಿ : ದಾವೋಸ್ ಪ್ರವಾಸ ಮತ್ತು ಸಂಪುಟ ವಿಸ್ತರಣೆ: ಸಿಎಂಗೆ ಮುಗಿಯದ ತಲೆನೋವು

ಇದನ್ನೂ ಓದಿ : cbi conducts searches : ಪಿ.ಚಿದಂಬರಂ, ಕಾರ್ತಿ ಚಿದಂಬರಂಗೆ ಸಂಬಂಧಿಸಿದ 7 ಸ್ಥಳಗಳಲ್ಲಿ ಸಿಬಿಐ ದಾಳಿ

BJP national secretary CT Ravi Again Minister in Karnataka

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular