Acid Attach Punishment: ಹುಷಾರ್! ಆಸಿಡ್ ದಾಳಿಗೆ ವಿಧಿಸುವ ಕಠಿಣಾತಿ ಕಠಿಣ ಶಿಕ್ಷೆಗಳಿವು!

ಪ್ರೀತಿಸಲು ನಿರಾಕರಿಸಿದಳು ಆಸಿಡ್ ಹಾಕುವ (Acid Attack) ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುವ ಕ್ರೌರ್ಯದ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಆದ್ರೆ ಆಸಿಡ್ ದಾಳಿ ಮಾಡುವವರು ತೊಗೊಂಡ ಒಂದು ನಿರ್ಧಾರ ಮತ್ತೊಬ್ಬರ ಜೀವನ ಸಂಪೂರ್ಣವಾಗಿ ನಾಶಪಡಿಸುತ್ತದೆ ಎಂದೂ ಯೋಚಿಸುವುದೇ ಇಲ್ಲ. ಹುಚ್ಚು ಪ್ರೀತಿಯಿಂದ ಈ ರೀತಿಯಾದ ಘಟನೆಗಳು  ದಿನೇದಿನೇ ಹೆಚ್ಚಾಗುತ್ತಿದೆ. (Explainer Acid Attack). ಹಾಗಾದೆರ ಆಸಿಡ್ ದಾಳಿಗೆ ಭಾರತದಲ್ಲಿ ಏನೇನು ಶಿಕ್ಷೆ (Acid Attach Punishment) ವಿಧಿಸಲಾಗುತ್ತದೆ? ಇಲ್ಲಿದೆ ವಿವರ

ಈ ದಾಳಿಯಿಂದಾಗಿ ದೀರ್ಘಾವಧಿಯ ಪರಿಣಾಮಗಳು ಕುರುಡುತನವನ್ನು ಒಳಗೊಳ್ಳಬಹುದು, ಹಾಗೆಯೇ ಕಣ್ಣಿನ ಸುಟ್ಟಗಾಯ, ಮುಖ ಮತ್ತು ದೇಹದ ತೀವ್ರವಾದ ಶಾಶ್ವತ ಗುರುತುಗಳೊಂದಿಗೆ, ದೂರಗಾಮಿ ಸಾಮಾಜಿಕ, ಮಾನಸಿಕ ಮತ್ತು ಆರ್ಥಿಕ ತೊಂದರೆಗಳ ಉಂಟುಮಾಡುತ್ತದೆ.

ಪ್ರಪಂಚದ ಅನೇಕ ಭಾಗಗಳಲ್ಲಿ ಆಸಿಡ್ ದಾಳಿಗಳು ವರದಿಯಾಗಿವೆ:
ದಕ್ಷಿಣ ಏಷ್ಯಾದಲ್ಲಿ ತುಂಬಾ ಸಾಮಾನ್ಯವಾಗಿದೆ. ಆದರೂ ಸಾಮಾನ್ಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿದೆ. ಬಾಂಗ್ಲಾದೇಶ, ಭಾರತ ಮತ್ತು ಪಾಕಿಸ್ತಾನಗಳು ಅತಿ ಹೆಚ್ಚು ಆಸಿಡ್ ದಾಳಿ ಘಟನೆಗಳನ್ನು ಹೊಂದಿರುವ ದೇಶಗಳಲ್ಲಿ ಸೇರಿವೆ. ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರೇ ಆಸಿಡ್ ದಾಳಿಗಳು ದಾಖಲಾಗುತ್ತಿದೆ. ಅದರಲ್ಲೂ ಭಾರತದಲ್ಲಿ, ಆಸಿಡ್ ದಾಳಿಗಳು ಪ್ರತಿ ವರ್ಷವೂ ಹೆಚ್ಚುತ್ತಿದೆ, ಒಂದು ವರ್ಷಗೆ 250 -300 ಘಟನೆಗಳು ವರದಿಯಾಗುತ್ತವೆ, ಆದರೆ ಆಸಿಡ್ ಸರ್ವೈವರ್ಸ್ ಟ್ರಸ್ಟ್ ಇಂಟರ್ನ್ಯಾಷನಲ್ ಪ್ರಕಾರ, ಒಂದು ವರ್ಷಕ್ಕೆ ಸುಮಾರು ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತದೆ.

ಭಾರತೀಯ ದಂಡ ಸಂಹಿತೆ (ಐ. ಪಿ. ಸಿ ) 2013 ರಲ್ಲಿ ಕ್ರಿಮಿನಲ್ ಕಾನೂನು ತಿದ್ದುಪಡಿಯಲ್ಲಿ ಆಸಿಡ್ ದಾಳಿಯ ಅಪರಾಧಿಗಳನ್ನು ಶಿಕ್ಷಿಸಲು ಐಪಿಸಿ  ಸೆಕ್ಷನ್ 326 ಎ ಮತ್ತು 326 ಬಿ, ಈ ಎರಡೂ ವಿಭಾಗಗಳನ್ನು ಸೇರಿಸಲಾಗಿದೆ. ಈ ವಿಭಾಗಗಳು ಲಿಂಗ ತಟಸ್ಥವಾಗಿವೆ – ಅಂದರೆ ಪುರುಷ ಅಥವಾ ಸ್ತ್ರೀ ತನ್ನ ರಕ್ಷಣೆಯನ್ನು ಮಾಡಿಕೊಳ್ಳಬಹುದು ಈ ಕಾನೂನು ಪ್ರಕಾರವಾಗಿದೆ.ಆಸಿಡ್ ದಾಳಿಗೆ ಬಲಿಯಾದವರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದರೂ, ಹಾಗೂ ಕೂಡ  ಪುರುಷರು ಅಪರಾಧಕ್ಕೆ ಬಲಿಯಾಗಿದ್ದಾರೆ.
ಕನಿಷ್ಠ ಶಿಕ್ಷೆ 10 ವರ್ಷಗಳ ಜೈಲು ಶಿಕ್ಷೆ. ಇದು ದಂಡದೊಂದಿಗೆ ಜೀವಾವಧಿ ಶಿಕ್ಷೆಯವರೆಗೆ ವಿಸ್ತರಿಸಬಹುದು. ಅಂತಹ ಪ್ರಕರಣಗಳಲ್ಲಿ ಅಪರಾಧಿಗಳನ್ನು ಶಿಕ್ಷಿಸಲು ಪ್ರತ್ಯೇಕ ಕಾನೂನನ್ನು ಲೈಂಗಿಕ ಅಪರಾಧಗಳ ಕಾನೂನಿನ ತಿದ್ದುಪಡಿಯೊಂದಿಗೆ ಅಂಗೀಕರಿಸಲಾಯಿತು. ಬಾಂಗ್ಲಾದೇಶದಂತಹ ಇತರ ದೇಶಗಳಲ್ಲಿನ ಕಾನೂನುಗಳಿಗೆ ಅನುಗುಣವಾಗಿ ಇಂತಹ ಶಾಸನವು ದೀರ್ಘಕಾಲದವರೆಗೆ ಸಮಾಜದ ವಿವಿಧ ವರ್ಗಗಳಿಂದ ಬೇಡಿಕೆಯಿತ್ತು.

ಐಪಿಸಿ ಸೆಕ್ಷನ್ 326ಎ

ಈ ವಿಭಾಗದಲ್ಲಿ ಆಸಿಡ್ ದಾಳಿ ಪ್ರಕರಣಗಳನ್ನು ಪರಿಶೀಲಿಸುತ್ತಿದೆ ಹಾಗೂ ಅಪರಾಧಿಗೆ ಸೂಕ್ತವಾದ ಶಿಕ್ಷೆಯನ್ನು ನಿಗದಿಪಡಿಸುತ್ತದೆ. ಇದರ ಅಡಿ,

326ಎ : ಆ ವ್ಯಕ್ತಿಯ ಮೇಲೆ ಆಸಿಡ್ ಎರಚುವ ಮೂಲಕ ಅಥವಾ ಆಸಿಡ್ ಅನ್ನು ನಿರ್ವಹಿಸುವ ಮೂಲಕ ತೀವ್ರವಾದ ಗಾಯವನ್ನು ಉಂಟುಮಾಡುತ್ತದೆ. ಯಾವುದೇ ಇತರ ವಿಧಾನಗಳನ್ನು ಉಂಟುಮಾಡುವ ಉದ್ದೇಶದಿಂದ ಅಥವಾ ಅವರು ಅಂತಹ ಗಾಯ ಅಥವಾ ನೋವನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ತಿಳಿದಿದ್ದರೆ, ಹತ್ತು ವರ್ಷಗಳಿಗಿಂತ ಕಡಿಮೆಯಿಲ್ಲದ ಆದರೆ ಜೀವಿತಾವಧಿಯವರೆಗೆ ಸೆರೆವಾಸಕ್ಕೆ ವಿಸ್ತರಿಸಬಹುದಾದ ಅವಧಿಗೆ ವಿವರಣೆಯ ಸೆರೆವಾಸದೊಂದಿಗೆ ಶಿಕ್ಷೆ ವಿಧಿಸಲಾಗುತ್ತದೆ. ಮತ್ತು ದಂಡವು ಆಸಿಡ್ ಕೆ ತುತ್ತಾದವರಿಗೆ ಚಿಕಿತ್ಸೆಯ ವೈದ್ಯಕೀಯ ವೆಚ್ಚಗಳನ್ನು ಪೂರೈಸಲು ನ್ಯಾಯಯುತ ಮತ್ತು ಸಮಂಜಸವಾಗಿರುತ್ತದೆ.ಈ ಸೆಕ್ಷನ್ ಅಡಿಯಲ್ಲಿ ವಿಧಿಸಲಾದ ಯಾವುದೇ ದಂಡವನ್ನು ಆಸಿಡ್ ದಾಳಿಗೆ ತುತ್ತಾದವರಿಗೆ ಪಾವತಿಸಬೇಕು.

ವಿವರಣೆ 1 – ಈ ವಿಭಾಗದ ಉದ್ದೇಶಗಳಿಗಾಗಿ, ಆಸಿಡ್ ನಿಂದಾಗಿ ಸುಡುವ ಸ್ವಭಾವವನ್ನು ಹೊಂದಿದೆ. ಜಿ ಚರ್ಮವನ್ನು ಸಂಪೂರ್ಣವಾಗಿ ವಿಕಾರಗೊಳಿಸುತ್ತದೆ. ಪ್ರ ಚಿಕಿತ್ಸೆ ಮಾಡಿದರೂ ಕೂಡ ಅಷ್ಟೇ ಅಪಾಯಕರವಾದ ತೊಂದರೆಗಳು ಇದೆ, ಹಾಗೂ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುತ್ತದೆ.

ವಿವರಣೆ 2 – ಈ ವಿಭಾಗದ ಉದ್ದೇಶಗಳಿಗಾಗಿ, ಶಾಶ್ವತ ಅಥವಾ ಭಾಗಶಃ ಹಾನಿ ಅಥವಾ ವಿರೂಪತೆಯನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ.

ಐಪಿಸಿಯ ಸೆಕ್ಷನ್ 326ಬಿ :

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 3268 ಆಸಿಡ್ ದಾಳಿಗೆ ಪ್ರಯತ್ನಕ್ಕೆ ಅಪರಾಧಿಗೆ ಸೂಕ್ತವಾದ ಶಿಕ್ಷೆಯನ್ನು ನಿಗದಿಪಡಿಸುತ್ತದೆ.

3268: ಯಾರೇ ಯಾವ ಉದ್ದೇಶಕ್ಕೆ ಆದರೂ ಯಾವುದೇ ವ್ಯಕ್ತಿಯ ಮೇಲೆ ಆಸಿಡ್ ಎಸೆಯುತ್ತಾರೆ ಅಥವಾ ಎಸೆಯಲು ಪ್ರಯತ್ನಿಸುತ್ತಾರೆ ಇದು ತಿಳಿದುಬಂದರೆ ಅಥವಾ ಸಿಕ್ಕಿಕೊಂಡರೆ, ಐದರಿಂದ ಏಳು ವರ್ಷಗಳ ಕಾಲ ಜೈಲುವಾಸ ಮತ್ತು ದಂಡಕ್ಕೆ ಗುರಿಯಾಗಬಹುದು.

ವಿವರಣೆ 1– ಐಪಿಸಿಯ ಸೆಕ್ಷನ್ 326 ಎ ಮತ್ತು ಇದರ ಮುಖ್ಯ ಉದ್ದೇಶ , “ಆಮ್ಲವು ಆಮ್ಲೀಯ ಅಥವಾ ಸುಡುವ ಸ್ವಭಾವವನ್ನು ಹೊಂದಿರುವ ಯಾವುದೇ ವಸ್ತುವನ್ನು ಒಳಗೊಂಡಿರುತ್ತದೆ, ಅದು ಚರ್ಮವು ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ದೈಹಿಕ ಗಾಯವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ.

ವಿವರಣೆ 2 – ವಿಭಾಗ 326 ಎ ಮತ್ತು ಈ ವಿಭಾಗದ ಉದ್ದೇಶ, ಶಾಶ್ವತ ಅಥವಾ ಭಾಗಶಃ ಹಾನಿ ಅಥವಾ ವಿರೂಪತೆಯು ಬದಲಾಯಿಸಲು ಸಾಧ್ಯವಾಗುವುದಿಲ್ಲ.

ಆಧುನಿಕ ಬದುಕಿನಲ್ಲಿ ಹೊಸ ಆವಿಷ್ಕಾರವನ್ನು ದುಡ್ಡು ಕೊಳ್ಳುತ್ತೇವೆ ಆದರೆ ಇಂತಹ ಸಮಸ್ಯೆಗೆ ಸಂಪೂರ್ಣವಾದ ಪರಿಹಾರ ಎಲ್ಲಿ ಎಂಬುದೇ ಪ್ರಶ್ನೆಯಾಗಿದೆ….!!ಆಸಿಡ್ ದಾಳಿಗೆ ತುತ್ತಾದವರಿಗೆ ಪರಿಹಾರ, ವೈದ್ಯಕೀಯ ಚಿಕಿತ್ಸೆ ಹಾಗೂ ಇನ್ನಿತರ ಸೌಲಭ್ಯಗಳು ಎಷ್ಟು ಬೇಕಾದರೂ ಇರಬಹುದು. ಆದರೆ ದೇಹದಲ್ಲಿ ಉಳಿಸುತ್ತಿರುವ ಗಾಯ ಹಾಗೂ ಮನಸಿನ ಗಾಯ ಎಂದು ಮಾಸುವುದಿಲ್ಲ. ಮುಂದಾದರೂ ಆಲೋಚನೆಯನ್ನು ಬದಲಾಯಿಸಬೇಕು ಅದರ ಜೊತೆಗೆ ಕುರುಡು ಪ್ರೀತಿಯಲ್ಲಿ ಪ್ರೀತಿಸಿದವರನ್ನು ನೋಯಿಸಬಾರದು.

––––––––––––––––––
ಬರಹ : ಆಕರ್ಷ ಆರಿಗ

ಇದನ್ನೂ ಓದಿ : Shoot Out Acid Nagesh : ಆಸಿಡ್‌ ನಾಗೇಶ್‌ ಎಸ್ಕೇಪ್‌ ಆಗಲು ಯತ್ನ : ಕಾಲಿಗೆ ಗುಂಡೇಟು

ಇದನ್ನೂ ಓದಿ : acid attack : ಆಸಿಡ್‌ ಪ್ರೇಮಿ ನಾಗೇಶ್‌ ಬಂಧನಕ್ಕೆ ಮೂರು ತಂಡ : #hangnagesh ಅಭಿಯಾನಕ್ಕೆ ಬಾರೀ ಬೆಂಬಲ

(Explainer Analysis of acid attacks and challenges faced by women in India)

Comments are closed.