ಮತ್ತೆ ಕಾಂಗ್ರೆಸ್ ಗೆ ಹೊರಟ್ರಾ ವಲಸಿಗರು: ಮನವೊಲಿಕೆಗೆ ಬಿಜೆಪಿ ಸೂಚನೆ

ಬೆಂಗಳೂರು : (BJP persuasion) ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ಎಲ್ಲ ಪಕ್ಷಗಳು ಅಧಿಕಾರಕ್ಕೆ ಬರೋ ಕನಸಿನಲ್ಲಿ ಮತಬೇಟೆಯಲ್ಲಿ ತೊಡಗಿವೆ. ಈ ಮಧ್ಯೆ ಬಿಜೆಪಿ ನಾಯಕರಿಗೆ ಚುನಾವಣೆ ಗೆಲ್ಲೋದರ ಜೊತೆಗೆ ಶಾಸಕರು, ಸಚಿವರ ಪಕ್ಷಾಂತರ ಪರ್ವದ ಚಿಂತೆಯೂ ಕಾಡತೊಡಗಿದ್ದು, ಹೈಕಮಾಂಡ್ ಪಾಲಿಗೆ ಇದು ಹೊಸ ತಲೆನೋವಾಗಿದೆ.

ಹೌದು ರಾಜಕೀಯ ಮೇಲಾಟ ಹಾಗೂ ಅಧಿಕಾರದ ಚುಕ್ಕಾಣಿ ಹಿಡಿಯೋ ಉದ್ದೇಶದಿಂದ ಬಿಜೆಪಿ ಆಫರೇಶನ್ ಕಮಲ ನಡೆಸಿ ಅಧಿಕಾರಕ್ಕೇನೋ ಬಂತು. ಆದರೆ ಈಗ ಮತ್ತೆ ಆಫರೇಶನ್ ಹಸ್ತದ ಭೀತಿ ಬಿಜೆಪಿ ಗೆ ಎದುರಾಗಿದೆ. ಬಿಜೆಪಿ ಸರ್ಕಾರದ ಸಂಪುಟದಲ್ಲಿ ಸಚಿವರಾಗಿದ್ದು, ಅನುದಾನ ಪಡೆದು ಅಭಿವೃದ್ದಿ ಕೆಲಸ ಮಾಡಿ ಗೆಲ್ಲೋ ಕುದುರೆಗಳಾಗಿರೋ ಶಾಸಕರು, ಸಚಿವರು ಮತ್ತೆ ಕಾಂಗ್ರೆಸ್ ಗೆ ಮರಳಿದರೇ ಏನು ಕತೆ ? ಇದೇ ಕಾರಣಕ್ಕೆ ಬಿಜೆಪಿ, ಕಾಂಗ್ರೆಸ್ ಸಂಪರ್ಕಕ್ಕೆ ಸಿಗದಂತೆ ಶಾಸಕರ ಮೇಲೆ ನಿಗಾ ವಹಿಸುತ್ತಿದೆ. ಸರ್ಕಾರ ರಚನೆ ಮಾಡುವಾಗ ಕಾಂಗ್ರೆಸ್ ಶಾಸಕರ ಆಪರೇಷನ್ ಮಾಡಿದ್ದ ಬಿಜೆಪಿಗೆ ಈಗ ಆಪರೇಷನ್ ಗೆ ಒಳಗಾದ ಶಾಸಕರು ರಿ ಆಪರೇಷನ್ ಗೆ ಒಳಗಾಗುವ ಭೀತಿ ಕಾಡುತ್ತಿದೆ.

ರಿ – ಆಪರೇಷನ್ ಗೆ ಒಳಗಾಗದಂತೆ ಶಾಸಕರ ಮೇಲೆ ಖುದ್ದು ನಿಗಾ ವಹಿಸಿದ ಸಿಎಂ, ಶಾಸಕರು ಸಚಿವರ ಜೊತೆ ಸಿಎಂ ಬೊಮ್ಮಾಯಿ ನಿರಂತರ ಸಂಪರ್ಕದಲ್ಲಿದ್ದಾರಂತೆ. ಸಚಿವರಾದ ಭೈರತಿ ಬಸವರಾಜ್, ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಗೋಪಾಲಯ್ಯ, ಶ್ರೀಮಂತ ಪಾಟೀಲ್ ಮೇಲೆ ನಿಗಾ ವಹಿಸಿರುವ ಬಿಜೆಪಿ, ಸಚಿವರು ಶಾಸಕರ ಜೊತೆ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಲು ಸೂಚಿಸಿದೆಯಂತೆ

ಕಾಂಗ್ರೆಸ್ ನಾಯಕರ ಮಾತಿಗೆಲ್ಲ ತೆಲೆಕೆಡೆಸಿಕೊಳ್ಳದೇ, ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಚೆನ್ನಾಗಿ ಕೆಲಸ ಮಾಡಿ.ಬಿಜೆಪಿ ಯಲ್ಲೇ ನಿಮಗೆ ಉತ್ತಮ ಭವಿಷ್ಯ ಇದೆ.ಇಷ್ಟು ದಿನದಲ್ಲಿ ನಿಮ್ಮ ಮಂತ್ರಿ ಸ್ಥಾನಕ್ಕೆ ಯಾವುದೇ ಚ್ಯುತಿ ತಂದಿಲ್ಲಕಾಂಗ್ರೆಸ್ ನಲ್ಲಿ‌ ಭವಿಷ್ಯ ಇಲ್ಲ, ಸಿದ್ದರಾಮಯ್ಯ ಹೋದ್ರೆ ಕಾಂಗ್ರೆಸ್ ಮುಗಿದ ಅಧ್ಯಾಯ.ಆದರೆ ಬಿಜೆಪಿ ಬೆಳೆದು ಹೆಮ್ಮರವಾಗಿ ನಿಂತಿರುವ ಪಕ್ಷ.ಹೀಗಾಗಿ ಪಕ್ಷದಲ್ಲಿ ನಿಮಗೆ ಯಾವುದೇ ರೀತಿಯ ತೊಂದರೆ ಆಗಲ್ಲ.ಚುನಾವಣೆ ಯಲ್ಲಿ ನಾವೇ ಗೆಲ್ಲೋದು, ಮತ್ತೆ ನಾವೇ ಅಧಿಕಾರಕ್ಕೆ ಬರೋದು.ಕಾಂಗ್ರೆಸ್ ನಾಯಕರು ಏನು ಮಾಡಿದ್ರು, ಅವರಿಗೆ ನಾವು ಅಧಿಕಾರ ಮಾಡೋಕೆ ಅಂತೂ ಬಿಡುವುದಿಲ್ಲ.ಎಲ್ಲಾ ಸರ್ವೆ ಗಳಲ್ಲೂ ಪಕ್ಷದ ಪರ ವಾತವರಣ ಇದೆ.ಪಕ್ಷದಲ್ಲೇ ಇರೀ, ನಿಮಗೆ ಟಿಕೆಟ್ ಸಿಗುತ್ತದೆ ಎಲ್ಲ ಸೇರಿ ಒಟ್ಟಾಗಿ ಪಕ್ಷ ಅಧಿಕಾರಕ್ಕೆ ತರುವ ಕೆಲಸ ಮಾಡೋಣ ಎಂದು ಸಿಎಂ ಅಭಯ ನೀಡಿದ್ದಾರಂತೆ. ಒಟ್ಟಿನಲ್ಲಿ ವಲಸಿಗರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ಸರ್ಕಸ್ ನಡೆಸುತ್ತಿದೆ.

ಇದನ್ನೂ ಓದಿ : BJP ticket announcement: ಜೆಡಿಎಸ್, ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಬಿಜೆಪಿ ಪ್ಲ್ಯಾನ್: ಸದ್ಯಕ್ಕಿಲ್ಲ ಟಿಕೆಟ್ ಘೋಷಣೆ

BJP persuasion: Horatra migrants to Congress again: BJP instructions for persuasion

Comments are closed.