ಸೋಮವಾರ, ಏಪ್ರಿಲ್ 28, 2025
HomepoliticsBJP Secret Meeting : ಸಿಎಂ ಬೊಮ್ಮಾಯಿ ಬದಲಾವಣೆ ? ಕುತೂಹಲ ಮೂಡಿಸಿದೆ ಬಿಜೆಪಿ ತ್ರಿಮೂರ್ತಿಗಳ...

BJP Secret Meeting : ಸಿಎಂ ಬೊಮ್ಮಾಯಿ ಬದಲಾವಣೆ ? ಕುತೂಹಲ ಮೂಡಿಸಿದೆ ಬಿಜೆಪಿ ತ್ರಿಮೂರ್ತಿಗಳ ಸಭೆ

- Advertisement -

ದೆಹಲಿ : ಕರ್ನಾಟಕದಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆಯಾಗಲಿದೆಯಾ ? ಬಸವರಾಜ್ ಬೊಮ್ಮಾಯಿ ಅವರನ್ನು ಕೆಳಗಿಳಿಸಿ ಸಿಎಂ ಕುರ್ಚಿಗೆ ಏರುವ ಆ ನಾಯಕ ಯಾರು ? ಹೀಗೊಂದು ಚರ್ಚೆ ಶುರುವಾಗಿದೆ. ರಾಜ್ಯ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿ.ಎಲ್.ಸಂತೋಷ್‌, ಜೆಪಿ ನಡ್ಡಾ ನಡೆಸಿರುವ‌ ರಹಸ್ಯ ಸಭೆ ಹಲವು ಕುತೂಹಲಗಳನ್ನು ಮೂಡಿಸಿದ್ದು, ರಾಜ್ಯ ರಾಜಕೀಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕದಲ್ಲಿ ಮುಂದಿನ ಒಂದು ವರ್ಷಗಳ ಅವಧಿಯಲ್ಲಿ ಮಹಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ, ಬಿಜೆಪಿಯ ಚುನಾವಣಾ ಚಾಣಾಕ್ಷ ಅಮಿತ್‌ ಶಾ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಈ ನಡುವಲ್ಲೇ ರಾಜ್ಯ ಬಿಜೆಪಿಯಲ್ಲಿ ಮಹಾ ಬದಲಾವಣೆಯೊಂದು ನಡೆಯುವ ಕುರಿತು ಚರ್ಚೆ ಶುರುವಾಗಿದೆ. ರಾಜ್ಯ ಪ್ರವಾಸಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿವಾಸದಲ್ಲಿ ಬಿಜೆಪಿ ನಾಯಕರು ಮಹತ್ವದ ಸಭೆಯನ್ನು ನಡೆಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಭೆಯಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ಹೈಕಮಾಂಡ್‌ ನಾಯಕರು ದಿಢೀರ್‌ ಸಭೆ ನಡೆಸಿರುವುದು ಹಲವು ಕುತೂಹಲಗಳನ್ನು ಹುಟ್ಟುಹಾಕಿದೆ. ಒಂದು ಗಂಟೆಗೂ ಅಧಿಕ ಕಾಲ ನಡೆದಿರುವ ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ಕಾರ್ಯಕ್ಷಮತೆಯ ಕುರಿತು ಚರ್ಚೆ ನಡೆಸಿದ್ದಾರೆ.

ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಹಗರಣ, ೪೦ ಪರ್ಸೆಂಟ್‌ ಆರೋಪ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಹಗರಣಗಳಿಂದಾಗಿ ಪಕ್ಷ ಹಾಗೂ ಸರಕಾರದ ವರ್ಚಸ್ಸಿನ ಮೇಲೆ ಉಂಟಾಗುತ್ತಿರುವ ಧಕ್ಕೆಯ ಬಗ್ಗೆಯೂ ಸಮಾಲೋಚನೆಯನ್ನು ನಡೆಸಲಾಗಿದೆ. ಸಭೆಯಲ್ಲಿ ಕೈಗೊಂಡಿರುವ ತೀರ್ಮಾನಗಳು ಅಮಿತ್‌ ಶಾ ಕರ್ನಾಟಕ ಭೇಟಿಯ ವೇಳೆಯಲ್ಲಿ ಕಾರ್ಯಗತವಾಗುವ ಸಾಧ್ಯತೆಯಿದೆ.

ಬಿ.ಎಲ್.‌ ಸಂತೋಷ್‌ ಕಳೆದೊಂದು ವಾರದಿಂದಲೂ ಸ್ಪೋಟಕ ಹೇಳಿಕೆ ನೀಡುವ ಮೂಲಕ ಹಾಲಿ ಶಾಸಕರಲ್ಲಿ ನಡುಕ ಹುಟ್ಟಿಸಿದ್ದಾರೆ. ಇನ್ನೊಂದೆಡೆಯಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಚರ್ಚೆಗಳು ಬದಲಾಗಿ ನಡೆಯುತ್ತಿದೆ. ಒಟ್ಟಿನಲ್ಲಿ ತ್ರಿಮೂರ್ತಿಗಳ ಸಭೆ ರಾಜ್ಯ ಬಿಜೆಪಿ ಶಾಸಕರ ನಿದ್ದೆಗೆಡಿಸುವುದು ಮಾತ್ರ ಸುಳ್ಳಲ್ಲ.

ಇದನ್ನೂ ಓದಿ : ಒಕ್ಕಲಿಗ ನಾಯಕನಿಗೆ ಪಕ್ಷದಲ್ಲಿ ಪ್ರಬಲ ಸ್ಥಾನ ನೀಡಲು ಮುಂದಾದ ಬಿಜೆಪಿ

ಇದನ್ನೂ ಓದಿ : ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಚುನಾವಣಾ ಚಾಣಾಕ್ಷ ಪ್ರಶಾಂತ್​ ಕಿಶೋರ್​

BJP Secret Meeting CM Basavaraj Bommai change Interesting Amith Shah, JP Nadda and Santhosh Meeting

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular