Throw Eggs At Siddaramaiahs Car : ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ : ಕಾರ್ಯಕರ್ತರ ನಡೆಗೆ ಬಿಜೆಪಿ ಅಸಮಾಧಾನ

ಬೆಂಗಳೂರು : Throw Eggs At Siddaramaiahs Car : ನೆರೆ ಹಾನಿಗೆ ಒಳಗಾಗಿದ್ದ ಕೊಡಗು ಜಿಲ್ಲೆಗೆ ಪ್ರವಾಸವನ್ನು ಕೈಗೊಂಡಿದ್ದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಿನ್ನೆ ಭಾರೀ ವಿರೋಧವನ್ನು ಎದುರಿಸಿದ್ದಾರೆ. ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಆಗಮಿಸಿದ್ದನ್ನು ವಿರೋಧಿಸಿದ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸಿದ್ದು ಖಾನ್​ ಗೋ ಬ್ಯಾಕ್​ ಎಂದು ಘೋಷಣೆ ಕೂಗಿದ್ದು ಮಾತ್ರವಲ್ಲದೇ ಸಿದ್ದರಾಮಯ್ಯರ ಕಾರಿಗೆ ಮೊಟ್ಟೆಯನ್ನೂ ಎಸೆದಿದ್ದಾರೆ.


ಈ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಬಿಜೆಪಿ ಕಾರ್ಯಕರ್ತರ ಈ ನಡೆಗೆ ಕಾಂಗ್ರೆಸ್​​​ ನಾಯಕರು ಮಾತ್ರವಲ್ಲದೇ ಸ್ವಪಕ್ಷದ ನಾಯಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ, ಸಚಿವ ಆರ್​.ಅಶೋಕ್​​ ಸೇರಿದಂತೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಈ ಸಂಬಂಧ ಟ್ವೀಟ್​​​ ಮೂಲಕ ಅಸಮಾಧಾನ ಹೊರ ಹಾಕಿದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದು ಈ ಸ್ಥಾನಕ್ಕೆ ತನ್ನದೇ ಆದ ಗೌರವವಿದೆ. ಯಾವುದೇ ವಿಷಯದ ಬಗ್ಗೆ ಬಿನ್ನಾಭಿಪ್ರಾಯವಿದ್ದರೆ ಅದನ್ನು ಬಲವಾದ ಅಭಿಪ್ರಾಯಗಳೊಂದಿಗೆ ವಿರೋಧಿಸಬೇಕು. ಯಾವುದೇ ದೈಹಿಕ ಕಾರ್ಯದಿಂದಲ್ಲ. ಇದನ್ನು ಎಲ್ಲರೂ ಪಾಲಿಸಬೇಕು ಎಂದು ಬರೆದಿದ್ದಾರೆ.


ಮಾಜಿ ಸಿಎಂ ಯಡಿಯೂರಪ್ಪ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿರುವುದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಪಕ್ಷದ ಕಾರ್ಯಕರ್ತರು ಈ ರೀತಿ ಮಾಡಬಾರದಿತ್ತು ಎಂದು ಖಂಡಿಸಿದ್ದಾರೆ.


ಕಂದಾಯ ಸಚಿವ ಆರ್​.ಅಶೋಕ್​​​ ಕೂಡ ಈ ವಿಚಾರವಾಗಿ ಟ್ವೀಟಾಯಿಸಿದ್ದು, ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಸಂಪ್ರದಾಯವಲ್ಲ. ವಿರೋಧವನ್ನು ವೈಚಾರಿಕತೆಯಿಂದಲೇ ತೋರಿಸಬೇಕು. ವಿನಃ ಇಂತಹ ಸಂಪ್ರದಾಯದಿಂದಲ್ಲ ಎಂದು ಟ್ವೀಟಾಯಿಸಿದ್ದಾರೆ.


ಇತ್ತ ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತರ ನಡೆಯನ್ನು ಖಂಡಿಸಿ ಇಂದು ಕಾಂಗ್ರೆಸ್​ ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ನಡೆಸಲಿದೆ. ಫ್ರೀಡಂ ಪಾರ್ಕ್​ನಲ್ಲಿ ಕಾಂಗ್ರೆಸ್​ ನಾಯಕರು ಪ್ರತಿಭಟನೆ ಆರಂಭಿಸಿದ್ದಾರೆ. ಈ ಕೃತ್ಯವನ್ನು ಎಸಗಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಮಾಜಿ ಸಚಿವ ಹೆಚ್​.ಎಂ ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ಇದನ್ನು ಓದಿ : KL Rahul advice his young Fan: “ಶಾಲೆಗೆ ಹೋಗು, ಉಳಿದದ್ದೆಲ್ಲಾ ಆಮೇಲೆ..” ಆಟೋಗ್ರಾಫ್ ಕೇಳಲು ಬಂದ ಅಭಿಮಾನಿಗೆ ರಾಹುಲ್ ಬುದ್ಧಿಮಾತು

ಇದನ್ನೂ ಓದಿ : Chahal Dhanashree Relationship: ಪತ್ನಿಗೆ ಡಿವೋರ್ಸ್ ಕೊಡ್ತಾರಾ ಯುಜ್ವೇಂದ್ರ ಚಹಲ್..? “ಎಲ್ಲದಕ್ಕೂ ಇಲ್ಲೇ ಫುಲ್ ಸ್ಟಾಪ್” ಅಂದರೇಕೆ ಲೆಗ್ ಸ್ಪಿನ್ನರ್ ?

Bjp Youth Wing Members Throw Eggs At Siddaramaiahs Car In Kodagu Congress Leaders Protest In Bengaluru

Comments are closed.