BK Hariprasad clarification : ಸಿಎಂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸೋನಿಯಾ ಗಾಂಧಿ ನಿರ್ಧಾರ ಅಂತಿಮ : ಬಿ.ಕೆ ಹರಿಪ್ರಸಾದ್​​ ಪ್ರತಿಕ್ರಿಯೆ

ಮಂಗಳೂರು BK Hariprasad clarification : ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಎಂಟು ತಿಂಗಳು ಬಾಕಿ ಇರುವ ನಡುವೆಯೇ ಕಾಂಗ್ರೆಸ್​ನಲ್ಲಿ ಸಿಎಂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ತೀವ್ರ ಪೈಪೋಟಿ ಉಂಟಾಗಿದೆ. ಕಾಂಗ್ರೆಸ್​ ಸಿಎಂ ಅಭ್ಯರ್ಥಿ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ಇಬ್ಬರ ಹೆಸರೂ ಕೇಳಿ ಬರ್ತಿದೆ. ಈ ವಿಚಾರವಾಗಿ ಇಂದು ಮಂಗಳೂರಿನಲ್ಲಿ ಪರಿಷತ್​ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್​ ಪ್ರತಿಕ್ರಿಯೆ ನೀಡಿದ್ರು.

ಕಾಂಗ್ರೆಸ್ ಪಕ್ಷ ಯಾರನ್ನು ಮುಖ್ಯಮಂತ್ರಿ ಮಾಡುತ್ತೋ ಅವರು ಮುಖ್ಯಮಂತ್ರಿ ಆಗ್ತಾರೆ .ಪಕ್ಷದಿಂದ ಆಯ್ಕೆಯಾದ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸಂಪ್ರದಾಯ ಕಾಂಗ್ರೆಸ್​ನಲ್ಲಿದೆ. ಚುನಾವಣೆಯಲ್ಲಿ ಗೆದ್ದ ಶಾಸಕರ ಬಳಿಯಲ್ಲಿ ಸೋನಿಯಾ ಗಾಂಧಿ ಅಭಿಪ್ರಾಯ ಪಡೆಯುತ್ತಾರೆ. ಎಲ್ಲರಿಂದ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರವನ್ನು ಸೋನಿಯಾ ಗಾಂಧಿಯೇ ತೆಗೆದುಕೊಳ್ತಾರೆ. ಕಾಂಗ್ರೆಸ್​ನಲ್ಲಿ ಈ ಸಂಪ್ರದಾಯ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಹೇಳಿದರು.

ಈ ವರ್ಷ ಕೂಡ ಸಿಎಂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲಿದ್ದೇವೆ. ಈ ಬಗ್ಗೆ ಯಾರೂ ಸಂಶಯ ಪಡುವುದು ಬೇಡ. ಒಂದು ಜಾತಿ ಕಟ್ಟಿಕೊಂಡು ಜಾತಿ ಸಂಘಟನೆ ಮಾಡಬಹುದು. .ಜಾತಿ‌ ಕಟ್ಟಿಕೊಂಡು ರಾಜಕೀಯ ಪಕ್ಷ ಕಟ್ಟುವುದಕ್ಕೆ ಸಾಧ್ಯ ಇಲ್ಲ . ಇಂತಹ ಸಂಕುಚಿತ ಮನೋಭಾವನೆ ಬಿಟ್ಟು ಬಿಡಿ ಎಂದು ಹೇಳಿದರು.

ಇನ್ನು ಇದೇ ವೇಳೆ ಸಿದ್ರಾಮೋತ್ಸವ ಕಾರ್ಯಕ್ರಮದ ಬಗ್ಗೆ ಸಚಿವ ಬಿ.ಸಿ ಪಾಟೀಲ್​ ಟೀಕೆ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಬಿ‌.ಸಿ ಪಾಟೀಲ್ ಯಾವ ನೈತಿಕತೆ ಇಟ್ಕೊಂಡು ಮಾತಾಡ್ತಾರೆ ಗೊತ್ತಿಲ್ಲ .ನಾನು ಈ ವಲಸೆ ಗಿರಾಕಿಗಳ ಬಗ್ಗೆ ಮಾತನಾಡೋದಿಲ್ಲ. ಪ್ರಾಣಿ ಪಕ್ಷಿಗಳಂತೆ ವಲಸೆ ಹೋಗುವ ವಲಸೆ ಗಿರಾಕಿಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಟಾಂಗ್​ ನೀಡಿದ್ರು.

ಇದನ್ನು ಓದಿ : bus stand : ಎಮ್ಮೆಯಿಂದ ಬಸ್​ ತಂಗುದಾಣ ಉದ್ಘಾಟನೆ ಮಾಡಿಸಿದ ಗ್ರಾಮಸ್ಥರು :ಗದಗದಲ್ಲೊಂದು ವಿಚಿತ್ರ ಘಟನೆ

ಇದನ್ನೂ ಓದಿ : Ambulance hits Shiroor toll : ಶಿರೂರು ಟೋಲ್‌ ಕಂಬಕ್ಕೆ ಅಂಬ್ಯುಲೆನ್ಸ್‌ ಢಿಕ್ಕಿ : ಸಿಸಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ

ಇದನ್ನೂ ಓದಿ : KS Eshwarappa : ಮುಸಲ್ಮಾನರು ಎಲ್ಲಿರ್ತಾರೋ ಅಲ್ಲಿ ಸಿದ್ದರಾಮಯ್ಯ ಚುನಾವಣೆಗೆ ನಿಲ್ತಾರೆ : ಕೆ.ಎಸ್​ ಈಶ್ವರಪ್ಪ ವ್ಯಂಗ್ಯ

BK Hariprasad clarification on CM candidate selection

Comments are closed.