BL Santosh – BS Yeddyurappa : BL ಸಂತೋಷ್‌ ಬಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, BS ಯಡಿಯೂರಪ್ಪ ಬಣಕ್ಕೆ ವಿಪಕ್ಷ ನಾಯಕನ ಸ್ಥಾನ : ಮುನಿಸಿಗೆ ಮದ್ದೆರೆದ ಬಿಜೆಪಿ ಹೈಕಮಾಂಡ್‌

ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ಬಳಿಕ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಿಜೆಪಿಯ ಎರಡು ಪ್ರಮುಖ ಸ್ಥಾನಗಳ ಆಯ್ಕೆ ಕುತೂಹಲಕ್ಕೆ (BL Santosh – BS Yeddyurappa) ಅಧಿಕೃತವಾಗಿ ತೆರೆ ಬೀಳೋ ಕಾಲ ಸನ್ನಿಹಿತವಾದಂತಿದೆ. ಬಿಜೆಪಿಯಲ್ಲಿ ಅಲಿಖಿತವಾಗಿ ನಿರ್ಮಾಣವಾಗಿರೋ ಎರಡು ಬಣಗಳನ್ನು ಸಮಾಧಾನಿಸುವ ನಿಟ್ಟಿನಲ್ಲಿ ಹೈಕಮಾಂಡ್ ಸಂತೋಷ್ ಬಣಕ್ಕೊಂದು, ಬಿಎಸ್ವೈ ಬಣಕ್ಕೊಂದು ಹುದ್ದೆ ನೀಡಲು ನಿರ್ಧರಿಸಿದಂತಿದೆ.

ಹೌದು, ಎಷ್ಟು ಒಗ್ಗಟ್ಟಿನ ಪ್ರದರ್ಶನವಾದರೂ ಬಿಜೆಪಿಯಲ್ಲಿ ಎರಡು ಬಣಗಳಿವೆ ಅನ್ನೋದು ಬಹಿರಂಗ ಸತ್ಯ. ಎರಡು ಬಣಗಳ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಚುನಾವಣೆ ಮುಗಿದು ಆರು ತಿಂಗಳು ಕಳೆದರೂ ವಿಪಕ್ಷ ನಾಯಕನ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಅಂತಿಮಗೊಳಿಸಲಾಗದೆ ಮುಜುಗರಕ್ಕಿಡಾಗಿತ್ತು. ಈಗ ಕೊನೆಗೂ ಪಕ್ಷದ ಆಂತರಿಕ ಮೇಲಾಟಗಳಿಗೆ ಹೈಕಮಾಂಡ್ ಒಂದು ಉತ್ತರ ಕಂಡುಕೊಂಡಿದ್ದು, ಮೂಲಗಳ ಪ್ರಕಾರ ಸೋಮವಾರ ಸಂಜೆ ವೇಳೆಗೆ ಸಿ.ಟಿ.ರವಿ ಅಧಿಕೃತವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೇರೋ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ.

ಆ ಮೂಲಕ ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಬಿ.ಎಲ್.ಸಂತೋಷ್ ಬಣಕ್ಕೆ ನೀಡಿದಂತಾಗಿದೆ. ಈಗ ವಿರೋಧ ಪಕ್ಷದ ನಾಯಕ ಸ್ಥಾನ ಯಾರಿಗೆ ಸಿಗುತ್ತೆ ಅನ್ನೋ ಕುತೂಹಲ ಮನೆಮಾಡಿದೆ. ಆದರೆ ಮೂಲಗಳ ಮಾಹಿತಿ ಪ್ರಕಾರ ಹೈಕಮಾಂಡ್ ಈ ಸ್ಥಾನವನ್ನು ಬಿಎಸ್‌ ಯಡಿಯೂರಪ್ಪ ಆಪ್ತರಿಗೆ ನೀಡಲು ತೀರ್ಮಾನಿಸಿದೆಯಂತೆ. ಆ ಮೂಲಕ ರಾಜ್ಯಾಧ್ಯಕ್ಷ ಸ್ಥಾನ ತಮ್ಮ ಪುತ್ರನಿಗೆ ಸಿಗದೇ ಇರೋದಿಕ್ಕೆ‌ ಮುನಿಸಿಕೊಂಡಿರೋ ಬಿಎಸ್‌ ಯಡಿಯೂರಪ್ಪ ಸಮಾಧಾನಿಸೋ ತಂತ್ರಕ್ಕೆ ಮುಂದಾಗಿದೆ.ಬಿಎಸ್ವೈ ಬಣದ ಬೊಮ್ಮಾಯಿ ಕೂಡ ವಿರೋಧ ಪಕ್ಷದ ನಾಯಕರಾಗೋ‌ ಕನಸಿನಲ್ಲಿದ್ದರು. ಇದಲ್ಲದೇ ಆರ್.ಅಶೋಕ್, ಸುನೀಲ್‌ ಕುಮಾರ್ ಹಾಗೂ ಬಸನಗೌಡ್ ಪಾಟೀಲ್ ಯತ್ನಾಳ್ ಹೆಸರು ಕೂಡ ಕೇಳಿಬಂದಿತ್ತು.

ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯಡಿಯೂರಪ್ಪನವರನ್ನು ಪಕ್ಷ ಸಂಘಟನೆಗೆ ಒಲಿಸಿಕೊಳ್ಳುವ ಉದ್ದೇಶದಿಂದ ಹೈಕಮಾಂಡ್ ವಿರೋಧ ಪಕ್ಷದ ನಾಯಕ ಸ್ಥಾನ ವನ್ನು ಬೊಮ್ಮಾಯಿ ಹೆಗಲಿಗೆ ಹೊರಿಸೋದು ಬಹುತೇಕ ಖಚಿತವಾಗಿದೆ. ಆ ಮೂಲಕ ಬಿಎಸ್ವೈ ಹಾಗೂ ಬಿ.ಎಲ್.ಸಂತೋಷ್ ಅವರನ್ನು ಸಮಾಧಾನಿಸಿ ಪಕ್ಷವನ್ನು ಹಾಗೂ ಆಂತರಿಕ ಭಿನ್ನಮತವನ್ನು ನಿಯಂತ್ರಿಸಿದಂತಾಗಲಿದೆ ಅನ್ನೋದು ಹೈಕಮಾಂಡ್ ಲೆಕ್ಕಾಚಾರ.

ಇದನ್ನೂ ಓದಿ : BJP State President : ಬಿಎಸ್‌ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರಗೆ ಶಾಕ್: ಬಿಜೆಪಿ ಪಕ್ಷದ ಹೊಣೆ ಸಿ.ಟಿ.ರವಿ ಹೆಗಲಿಗೆ

ಇದಕ್ಕಾಗಿಯೇ ಬಿ.ಎಲ್.ಸಂತೋಷ್ ಹಾಗೂ ಬಿಎಸ್ವೈ ಜೊತೆ ಈಗಾಗಲೇ ಹಲವು ಭಾರಿ ಹೈಕಮಾಂಡ್ ಚರ್ಚೆ ಕೂಡ ನಡೆಸಿದೆ. ಮಗನಿಗೆ ಹುದ್ದೆ ಕೈತಪ್ಪೋದು ಖಚಿತವಾಗುತ್ತಿದ್ದಂತೆ ಯಡಿಯೂರಪ್ಪ ಪ್ರವಾಸದ ನೆಪದಲ್ಲಿ ದೇಶ ತೊರೆದಿದ್ದಾರೆ. ಇದು ಬಿಎಸ್ವೈ ಮುನಿಸಿಗೆ ಸಾಕ್ಷಿ ಎಂಬುದು ಹೈಕಮಾಂಡ್ ಗಮನದಲ್ಲಿದೆ. ಹೀಗಾಗಿಯೇ ಬಿಜೆಪಿ ಹೈಕಮಾಂಡ್ ಬುದ್ಧಿವಂತಿಕೆಯ ಹಾಗೂ ಚಾಕಚಕ್ಯತೆಯ ನಡೆ ತೋರಿದ್ದು, ಎರಡೂ ಬಣಕ್ಕೂ ಸಮಾಧಾನ ತರೋ ಪ್ರಯತ್ನದಲ್ಲಿದೆ‌.

BL Santosh – BS Yeddyurappa: BJP State President for BL Santosh faction, Leader of Opposition for BS Yeddyurappa faction: BJP High Command reprimanded Munisi

Comments are closed.