Bill Against family politics : ಕುಟುಂಬ ರಾಜಕಾರಣದ ವಿರುದ್ಧ ಮಸೂದೆ ತನ್ನಿ: ಕೈ, ಕಮಲ‌ ಪಾಳಯಕ್ಕೆ ಎಚ್.ಡಿ.ರೇವಣ್ಣ ಸವಾಲು

ಪರಿಷತ್ ಚುನಾವಣೆಯಲ್ಲಿ ಸೋಲು- ಗೆಲುವಿಗಿಂತ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಕುಟುಂಬ ರಾಜಕಾರಣದ ವಿಚಾರ. ಅದರಲ್ಲೂ ದೇವೇಗೌಡರ ಕುಟುಂಬದ ಮೂರನೇ ತಲೆಮಾರು ಸೂರಜ್ ರೇವಣ್ಣ ಚುನಾವಣೆಗೆ ನಿಲ್ಲುತ್ತಿದ್ದಂತೆ ಕುಟುಂಬ ರಾಜಕಾರಣದ ಸಂಗತಿ ಸಾಕಷ್ಟು ಬಲಪಡೆದುಕೊಂಡಿತು. ಈ ವಿಚಾರಕ್ಕೆ ಮಾಜಿಸಿಎಂ ಎಚ್ಡಿಕೆಯಿಂದ ಆರಂಭಿಸಿ ಅಭ್ಯರ್ಥಿ ಸೂರಜ್ ರೇವಣ್ಣ ತನಕ ಎಲ್ಲರೂ ತಿರುಗೇಟು ನೀಡಿದ್ದರು. ಈಗ ಚುನಾವಣೆ ಬಳಿಕ ಕುಟುಂಬ ರಾಜಕಾರಣದ ವಿಚಾರಕ್ಕೆ ಶಾಸಕ ಎಚ್.ಡಿ.ರೇವಣ್ಣ( HD Revanna ) ಸಖತ್ ಗರಂ ಆಗಿದ್ದು ಸರಕಾರ ಕುಟುಂಬ ರಾಜಕಾರಣದ ವಿರುದ್ಧ ಮಸೂದೆ (Bill Against family politics) ತರಲಿ ಎಂದು ಸವಾಲೆಸೆದಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿರುವ ಶಾಸಕ ಎಚ್.ಡಿ.ರೇವಣ್ಣ ಮಾಧ್ಯಮಗಳ ಜೊತೆ ಮಾತನಾಡುತ್ತಾ ಕುಟುಂಬ ರಾಜಕಾರಣದ ವಿಚಾರಕ್ಕೆ ಗರಂ ಆಗಿದ್ದಾರೆ.‌ಕೆಲವರಿಗೆ ನಮ್ಮ ಕುಟುಂಬದ ಬಗ್ಗೆ ಮಾತನಾಡದೇ ಇದ್ದರೇ ನಿದ್ದೆಯೇ ಬರೋದಿಲ್ಲ. ನಾವೇನು ಹಿಂದಿನ ಬಾಗಿಲಿನ ಮೂಲಕ ರಾಜಕಾರಣ ಮಾಡಿಲ್ಲ. ನೇರವಾಗಿ ಚುನಾವಣೆಗೆ ಹೋಗಿದ್ದೇವೆ. ಗೆದ್ದಿದ್ದೇವೆ. ನಮ್ಮದು ಕುಟುಂಬ ರಾಜಕಾರಣ ಅಲ್ಲ. ದೇವರ ಅನುಗ್ರಹ ಅಷ್ಟೇ ಎಂದು ರೇವಣ್ಣ ಸಮರ್ಥಿಸಿಕೊಂಡಿದ್ದಾರೆ.

ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಪಕ್ಷಗಳು ತಮ್ಮ ಪಕ್ಷವನ್ನು ಒಮ್ಮೆ‌ನೋಡಿಕೊಳ್ಳಲಿ. ಬೇಕಾದರೇ ರಾಜ್ಯ ಸರ್ಕಾರ ಕುಟುಂಬ ರಾಜಕಾರಣದ ವಿರುದ್ಧ ಒಂದು ಮಸೂದೆ ತರಲಿ. ಆ ಮೂಲಕ ಕುಟುಂಬ ರಾಜಕಾರಣಕ್ಕೆ ಒಂದು ಅಂತ್ಯ ಹಾಡಲಿ ಎಂದು ರೇವಣ್ಣ ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ಅಷ್ಟೇ ಅಲ್ಲ ಎರಡು ರಾಷ್ಟ್ರೀಯ ಪಕ್ಷಗಳು ಈ ಮಸೂದೆ ಒಪ್ಪಿಕೊಳ್ಳಲಿ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ರೇವಣ್ಣ ಸವಾಲೆಸೆದಿದ್ದಾರೆ. ಎಚ್.ಡಿ.ರೇವಣ್ಣ ಪುತ್ರ ಸೂರಜ್ ರೇವಣ್ಣ ಹಾಸನದಿಂದ ವಿಧಾನಪರಿಷತ್ ಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಹಲವು ಕಾಂಗ್ರೆಸ್ ನಾಯಕರು ಎಚ್.ಡಿ.ಡಿ ಕುಟುಂಬದ, ಫ್ಯಾಮಿಲಿ ಪಾಲಿಟಿಕ್ಸ್ ಬಗ್ಗೆ ಟೀಕಿಸಿದ್ದರು.

ಈ ಟೀಕೆಗಳಿಗೆ ರೇವಣ್ಣ ಖಡಕ್ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ಎಚ್ಡಿಡಿ ಕುಟುಂಬ ರಾಜಕಾರಣದ ಬಗ್ಗೆ ಚರ್ಚೆಯಾಗುತ್ತಿರುವುದು ನಿಜವಾದರೂ ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳ್ಕರ್, ಎಂ.ಬಿ.ಪಾಟೀಲ್, ಎ.ಮಂಜು,ಡಿಕೆಶಿ,ಬಿಜೆಪಿಯ ಡಿ.ಎಚ್.ಶಂಕರ್‌ಮೂರ್ತಿ , ಜಾರಕಿಹೊಳಿ ಬ್ರದರ್ಸ್, ಕೊಡಗು ಸುಜಾ ಕುಶಾಲಪ್ಪ ಸೇರಿದಂತೆ ಹಲವರು ಕುಟುಂಬ ರಾಜಕಾರಣದ ಪರೀಧಿಯಲ್ಲೇ ಮುಂದುವರಿಯುತ್ತಿರುವುದು ಸುಳ್ಳಲ್ಲ. ಹೀಗಾಗಿ ಎಲ್ಲ ಪಕ್ಷಗಳಲ್ಲಿ ಆರಂಭವಾಗಿರುವ ಕುಟುಂಬ ರಾಜಕಾರಣಕ್ಕೆ ಕೇವಲ ಎಚ್ಡಿಡಿ ಕುಟುಂಬವನ್ನು ಮಾತ್ರ ದೂರುವ ಪ್ರವೃತ್ತಿಗೆ ರೇವಣ್ಣ ಸಖತ್ ತಿರುಗೇಟು ನೀಡಿದ್ದಾರೆ.‌

ಇದನ್ನೂ ಓದಿ : Omicron Variant fear : ಕ್ರಿಸ್ಮಸ್, ನ್ಯೂಇಯರ್ ಗೆ ಓಮೈಕ್ರಾನ್ ಭೀತಿ : ಜಾರಿಯಾಗುತ್ತಾ ಟಫ್ ರೂಲ್ಸ್?!

ಇದನ್ನೂ ಓದಿ : Prohibition of Conversion Act : ಮತಾಂತರ ನಿಷೇಧ ಕಾಯಿದೆ ಜಾರಿ : ಬಿಜೆಪಿ ನಿಲುವಿಗೆ ಎಚ್.ಡಿ.ಕೆ ಅಚ್ಚರಿಯ ಹೇಳಿಕೆ

( Bring a bill against family politics, HD Revanna challenges Congress and BJP camp )

Comments are closed.