ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಹಾಗೂ ಬೊಮ್ಮಾಯಿ ಸಂಪುಟದಲ್ಲಿ ಭ್ರಷ್ಟಾಚಾರದ ಸಂಗತಿ ಚರ್ಚೆಗೊಳಗಾಗುತ್ತಿರುವಾಗಲೇ ರಾಜ್ಯ ಬಿಜೆಪಿಗೆ ಮತ್ತಷ್ಟು ಮುಜುಗರ ಸಂಗತಿ ವರದಿಯಾಗಿದ್ದು, ಮಾಜಿ ಸಿಎಂ ಹಾಗೂ ಬಿಜೆಪಿ ಮುಖವಾಣಿ ಬಿ.ಎಸ್.ಯಡಿಯೂರಪ್ಪ (BS Yediyurappa ) ವಿರುದ್ಧ ಇದೀಗ ಎಸಿಬಿಗೆ ದೂರು ದಾಖಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa ) ವಿರುದ್ಧ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಹಾಗೂ ವಕೀಲರ ತಂಡ ಎಸಿಬಿಗೆ ದೂರು ನೀಡಿದೆ. ಬಿ.ಎಸ್.ಯಡಿಯೂರಪ್ಪ ಕಿಕ್ ಬ್ಯಾಕ್ ಪಡೆದು ಅರ್ಹತೆ ಇಲ್ಲದ ಸಿಇಎಸ್ಎಸ್ ಎನ್ನುವ ಶಿಕ್ಷಣ ಸಂಸ್ಥೆಗೆ 116 ಎಕರೆ ಜಮೀನು ಮಂಜೂರು ಮಾಡಿದ್ದಾರೆ ಎಂದು ದೂರಿನಲ್ಲಿ ದೂರುದಾರರು ಉಲ್ಲೇಖಿಸಿದ್ದು ತನಿಖೆ ನಡೆಸುವಂತೆ ಎಸಿಬಿಗೆ ಕೋರಿದ್ದಾರೆ. ಹರಳೂರು ಮತ್ತು ಪೂಲನಹಳ್ಳಿ ಬಳಿ ಕೆಐಡಿಬಿಗೆ ಸೇರಿದ ಜಮೀನು ಇದೆ. ಈ ಜಮೀನನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ಶಿಕ್ಷಣ ಸಂಸ್ಥೆಗೆ ಮಂಜೂರು ಮಾಡಲಾಗಿದೆ ಎಂಬ ಆರೋಪವಿದೆ.
ಶಿಕ್ಷಣ ಸಂಸ್ಥೆ ಜಮೀನಿಗಾಗಿ ಅರ್ಜಿ ಸಲ್ಲಿಸಿದ 30 ದಿನದಲ್ಲೇ ಜಮೀನು ಮಂಜೂರು ಮಾಡಲಾಗಿದ್ದು, ಚೆಸ್ ಸಂಸ್ಥೆ ಈ ಜಮೀನಿಗಾಗಿ ಬಿ.ಎಸ್.ಯಡಿಯೂರಪ್ಪಗೆ ನೇರವಾಗಿ ಮನವಿ ಸಲ್ಲಿಸಿತ್ತು. ಈ ಸಂಸ್ಥೆಯ ಮನವಿಗೆ ಬಿ.ಎಸ್.ಯಡಿಯೂರಪ್ಪ (BS Yediyurappa ) ನಿಯಮ ಗಾಳಿಗೆ ತೂರಿ ಮಂಜೂರಿ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ನಿಯಮಗಳ ಪ್ರಕಾರ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಸಂಸ್ಥೆಗಳಿಗೆ 25 ಎಕರೆಗಿಂತ ಹೆಚ್ಚಿನ ಭೂಮಿ ಮಂಜೂರು ಮಾಡುವಾಗ ಮೊದಲು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಯಲ್ಲಿ ಮನವಿ ಸಲ್ಲಿಸಬೇಕು. ಈ ನಿಯಮವನ್ನು ಮೀರಿ ಬಿಎಸ್ವೈ ಒಟ್ಟು 166 ಎಕರೆ ಜಮೀನನ್ನು ವಿವಿ ಸ್ಥಾಪನೆಗೆ ಅವಕಾಶ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
CESS ಸಂಸ್ಥೆಗೆ ಜಮೀನು ಮಂಜೂರು ಮಾಡಲು ಪ್ರತಿ ಎಕರೆಗೆ 1.61 ಕೋಟಿ ದರವನ್ನು ಅಪರ ಮುಖ್ಯಕಾರ್ಯದರ್ಶಿ ನಿಗದಿಪಡಿಸಿದ್ದರು. ಆದರೆ ಬಿಎಸ್ವೈ 2021 ಏಪ್ರಿಲ್ 26 ರಂದು ಸಚಿವ ಸಂಪುಟದ ಮುಂದೇ ತಂದು 116.16 ಎಕರೆ ಜಾಗವನ್ನು ಕೇವಲ 50 ಕೋಟಿಗೆ ಮಂಜೂರು ಮಾಡಿದ್ದಾರೆ. ಈ ಜಮೀನನ್ನು 186.76 ಕೋಟಿಗೆ ನೀಡಬೇಕಿತ್ತು. ಆದರೆ ಬಿಎಸ್ವೈ ಪ್ರಭಾವಕ್ಕೆ ಒಳಗಾಗಿ ಈ ಜಮೀನನನ್ನು ಕೇವಲ 50 ಕೋಟಿಗೆ ಮಂಜೂರು ಮಾಡಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ಇಂದೊಂದು ಮಹಾ ಕಂಟಕವಾಗುವ ಸಾಧ್ಯತೆ ಇದ್ದು,ಕಾಂಗ್ರೆಸ್ ಗೆ ಹೊಸ ಅಸ್ತ್ರ ಸಿಕ್ಕಿದಂತಾಗಿದೆ.
ಇದನ್ನೂ ಓದಿ : ಅನುಕಂಪವೇ ಸುಮಲತಾ ಗೆ ಅಸ್ತ್ರ : ಮತ್ತೆ ಟಾಕ್ ಫೈಟ್ ಗೆ ನಾಂದಿಹಾಡಿದ ನಿಖಿಲ್ ಕುಮಾರಸ್ವಾಮಿ
ಇದನ್ನೂ ಓದಿ : ಸ್ವಾಮೀಜಿಗಳು ತಲೆಗೆ ಬಟ್ಟೆ ಹಾಕಲ್ವಾ, ಹೊಸ ವಿವಾದಕ್ಕೆ ನಾಂದಿ ಹಾಡಿದ ಸಿದ್ಧರಾಮಯ್ಯ
BS Yediyurappa Land Scam compliant to ACB