ಶಿಗ್ಗಾಂವಿ, ಚನ್ನಗಿರಿ, ಚಿಕ್ಕಬಳ್ಳಾಪುರ : ಸಿಎಂ ಬಸವರಾಜ್ ಬೊಮ್ಮಾಯಿಗೆ ಬಿಜೆಪಿಯಲ್ಲಿ ಭರ್ಜರಿ ಆಫರ್

ಬೆಂಗಳೂರು : ಸಿಎಂ ಕುರ್ಚಿಯ ಮಹಿಮೆಯೇ ಹಾಗೇ ಅದು ಎಂತಹ ನಿರ್ಮೋಹಿಯನ್ನು ವ್ಯಾಮೋಹಿಯಾಗಿಸುತ್ತೆ. ಅಂತ ಸಿಎಂ ಕುರ್ಚಿಯಲ್ಲಿ ಅಚಾನಕ್ ಕುಳಿತ ಬಸವರಾಜ್ ಬೊಮ್ಮಾಯಿ (CM Basavaraj Bommai – BJP party) ಈಗ ಮುಂದಿನ ಸರಕಾರದಲ್ಲಿಯೂ ಸಿಎಂ ಸ್ಥಾನಕ್ಕೇರುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಒಂದಲ್ಲ ಎರಡು ಕ್ಷೇತ್ರದ ಮೊರೆ ಹೋಗುವ ಲೆಕ್ಕಾಚಾರದಲ್ಲಿದ್ದಾರೆ.

ಪಂಚಮಶಾಲಿ ಮೀಸಲಾತಿ ಹೋರಾಟ ಸಿಎಂ ಬೊಮ್ಮಾಯಿ ಪಾಲಿಗೆ ಒಂದು ರೀತಿಯ ಸೋಲು/ಗೆಲುವಿನ ಆತಂಕವನ್ನು ತಂದಿತ್ತಿದೆ. ಹೀಗಾಗಿ ಕಳೆದ ಭಾರಿ ಗೆದ್ದು ಬಂದ ಶಿಗ್ಗಾಂವಿ ಕ್ಷೇತ್ರದಿಂದ ಗೆಲುವು ಸಾಧ್ಯವೋ ಅಥವಾ ಸೋಲಾಗಬಹುದೋ ಎಂಬ ಅನುಮಾನ ಬೊಮ್ಮಾಯ ಅವರನ್ನು ಬಲವಾಗಿ ಕಾಡತೊಡಗಿದೆ. ಹೀಗಾಗಿ ಈಗ ಬೊಮ್ಮಾಯಿಯವರು ಮಾಜಿ ಸಿಎಂಗಳಾದ ಸಿದ್ಧರಾಮಯ್ಯ, ಎಚ್ಡಿಕೆ ಯಂತೆ ಎರಡೆರಡು ಕ್ಷೇತ್ರಗಳ ಮೊರೆ ಹೋಗಲು ಸಜ್ಜಾಗಿದ್ದಾರೆ.

ಹೀಗಾಗಿ ನಡೆಯುತ್ತಿರೋ ಬಿಜೆಪಿಯ ಕೋರ್ ಕಮಿಟಿ ಸಭೆ ವೇಳೆ ಸಿಎಂ ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಜೋರಾದ ಚರ್ಚೆ ನಡೆದಿದೆ. ಸದ್ಯ ಸಿಎಂ ಬೊಮ್ಮಾಯಿ, ಶಿಗ್ಗಾಂವನಿಂದ ಸ್ಪರ್ಧಿಸುತ್ತಾರಾ? ಅಥವಾ ತಮ್ಮ ಸಹೋದ್ಯೋಗಿ ಡಾ.ಸುಧಾಕರ್ ಅವರ ಚಿಕ್ಕಬಳ್ಳಾಪುರನಾ..? ಅಥವಾ ಸಾದರ ಲಿಂಗಾಯತ್ ರ ಕ್ಷೇತ್ರವಾಗಿರೋ ಚನ್ನಗಿರಿನಾ ಎಂಬ ಚರ್ಚೆ ನಡೆದಿದೆ. ಮೂಲಗಳ ಮಾಹಿತಿ ಪ್ರಕಾರ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸಿಎಂ ರನ್ನು ಸಚಿವ ಸುಧಾಕರ್‌ ಆಹ್ವಾನಿಸಿದ್ದಾರಂತೆ. ಬಾಗೇಪಲ್ಲಿ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡ್ತೀನಿ. ನೀವು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬನ್ನಿ ಎಂದು ಸುಧಾಕರ್ ಆಹ್ವಾನಿಸಿದ್ದು, ಸದ್ಯ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ಎದುರಾಳಿ ಪ್ರಬಲ ಅಭ್ಯರ್ಥಿ ಗಳು ಯಾರು ಇಲ್ಲ.

ಸುಧಾಕರ್ ನಿಂತ್ರೆ ಸುಲಭವಾಗಿ ಗೆಲ್ಲುವ ಅವಕಾಶ ಇದೆ.ಹೀಗಾಗಿ ಅದರ ಬದಲು ಸಿಎಂ ನಿಂತ್ರು ಗೆಲ್ಲುವ ಅವಕಾಶ ಇದೆ ಎಂಬ ಲೆಕ್ಕಾಚಾರ ಈ ಆಹ್ವಾನದ ಹಿಂದಿದೆ. ಇತ್ತ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದಲೂ ಸಿಎಂ ಸ್ಪರ್ಧೆ ಬಗ್ಗೆ ಚರ್ಚೆ ನಡೆದಿದೆ ‌ ಚನ್ನಗಿರಿ ಕ್ಷೇತ್ರದಲ್ಲಿ ಸಾದರ ಲಿಂಗಾಯತ ಮತಗಳು ನಿರ್ಣಾಯಕವಾಗಿದೆ. ಸಿಎಂ ಬೊಮ್ಮಾಯಿ ಕೂಡ ಸಾದರ ಲಿಂಗಾಯತ್ ಸಮುದಾಯಕ್ಕೆ ಸೇರಿದವರು. ಹೀಗಾಗಿ ಅಲ್ಲಿ ಹೋದ್ರೆ ಸಿಎಂ ಗೆಲ್ಲುವ ಅವಕಾಶ ಇದೆ ಎಂಬ ಚರ್ಚೆ ನಡೆದಿದೆ.

ಇದನ್ನೂ ಓದಿ : Rahul Gandhi defamation case : ಮಾನನಷ್ಟ ಪ್ರಕರಣ : ನಾಳೆ ಗುಜರಾತ್ ಹೈಕೋರ್ಟ್ ಗೆ ಹಾಜರಾಗಲಿದ್ದಾರೆ ರಾಹುಲ್ ಗಾಂಧಿ

ಚನ್ನಗಿರಿ ಕ್ಷೇತ್ರ ಹಾಲಿ ಬಂಧನಕ್ಕೆ ಒಳಗಾಗಿರುವ ಮಾಡಾಳು ವಿರೂಪಾಕ್ಷಪ್ಪ ಕ್ಷೇತ್ರವಾಗಿದ್ದು, ಮಾಡಾಳು ಬದಲು ಪುತ್ರ ಮಲ್ಲಿಕಾರ್ಜುನಗೆ ಟಿಕೆಟ್ ನೀಡುವಂತೆ ಒತ್ತಡ ಹೆಚ್ಚಿದೆ. ಇದೀಗ ಮಲ್ಲಿಕಾರ್ಜುನ್ ಗೆ ಬೇಡ ಅದರ ಬದಲು ಸಿಎಂ ಅಲ್ಲಿಗೆ ಹೋದ್ರೆ ಗೆಲ್ಲುವ ಅವಕಾಶ ಇದೆ ಎಂಬ ಚರ್ಚೆ ರಾಜ್ಯ ನಾಯಕರ ಸಭೆಯಲ್ಲಿ ನಡೆದಿದೆ ಎಂಬುದನ್ನು ಬಿಜೆಪಿ ಮೂಲಗಳೇ ಖಚಿತಪಡಿಸಿವೆ. ಒಟ್ಟಿನಲ್ಲಿ ಈ ಭಾರಿ ಚುನಾವಣೆಯಲ್ಲಿ ಹಾಲಿ ಮಾಜಿ ಸಿಎಂಗಳ ಕ್ಷೇತ್ರ ಆಯ್ಕೆಯೇ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

CM Basavaraj Bommai – BJP party : Shiggamvi, Channagiri, Chikkaballapur : Big offer for CM Basavaraj Bommai in BJP

Comments are closed.