ಕಮಲ ಪಡೆಗೆ ಕಿಚ್ಚನೇ ಶಕ್ತಿ : ಬಿಜೆಪಿ ಪರ ಪ್ರಚಾರಕ್ಕೆ ಸಿದ್ಧವಾದ ಸುದೀಪ್

ಬೆಂಗಳೂರು : ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಮೂರು ಪಕ್ಷಗಳು ಅಧಿಕಾರ ಹಿಡಿಯಲು ಕಸರತ್ತು ನಡೆಸಿವೆ. ಈ ಮಧ್ಯೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಲು ಸ್ಟಾರ್ ಗಳ ಮೊರೆ ಹೋಗಿದ್ದು ಸದ್ಯ ಬಹುಭಾಷಾ ನಟ ಸುದೀಪ್ ಬೊಮ್ಮಾಯಿ ಪರ ಪ್ರಚಾರ (CM Bommai Shiggamvi Constituency) ಮಾಡೋದಾಗಿ ಘೋಷಿಸಿದ್ದಾರೆ. ಈ ಮಧ್ಯೆ ಸುದೀಪ್ ಯಾವಾಗಿಂದ ಪ್ರಚಾರ ನಡೆಸಲಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಸುದೀಪ್ ಬಿಜೆಪಿ ಪರ ಅದರಲ್ಲೂ ಬೊಮ್ಮಾಯಿ ಪರ ಪ್ರಚಾರ ನಡೆಸೋದಾಗಿ ಘೋಷಿಸಿದ್ದಾರೆ. ಸುದೀಪ್ ಈ ನಿರ್ಧಾರ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಮಧ್ಯೆ ಸುದೀಪ್ ಯಾವಾಗ ಪ್ರಚಾರ ಆರಂಭಿಸುತ್ತಾರೆ. ಯಾವ ಯಾವ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಾರೆ ಎಂಬ ಕುತೂಹಲವೂ ಮನೆ ಮಾಡಿದೆ. ಸದ್ಯ ಮೂಲಗಳಿಂದ ಲಭ್ಯವಾಗ್ತಿರೋ ಮಾಹಿತಿ ಪ್ರಕಾರ ಸಿಎಂ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದೀಪ್ ಪ್ರಚಾರ ಆರಂಭಿಸಲಿದ್ದಾರಂತೆ.

ಮೊದಲು ಸುದೀಪ್ ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು, ಬಳಿಕ ಇತರೇ ಅಭ್ಯರ್ಥಿಗಳ ಕ್ಷೇತ್ರಗಳಲ್ಲಿ ಸುದೀಪ್ ಬಿಜೆಪಿ ಪರ‌‌ಮತಯಾಚನೆ ಮಾಡಲಿದ್ದಾರಂತೆ. ಅದರಲ್ಲೂ ಪ್ರಮುಖವಾಗಿ ವಾಲ್ಮೀಕಿ ಸಮುದಾಯದ ಮತಗಳನ್ನೇ ಟಾರ್ಗೆಟ್ ಮಾಡಿರೋ ಬಿಜೆಪಿ ವಾಲ್ಮೀಕಿ ಸಮುದಾಯದವರು ಹೆಚ್ಚಿರುವ ವಿಧಾನಸಭಾ ಕ್ಷೇತ್ರದಲ್ಲಿ ಸುದೀಪ್ ರಿಂದ ಪ್ರಚಾರ ಮಾಡಿಸಲು ಬಿಜೆಪಿ ಪ್ಲ್ಯಾನ್ ಮಾಡಲಾಗಿದೆ ಎನ್ನಲಾಗ್ತಿದೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಸುರಪುರ,ಕೂಡ್ಲಿಗಿ,ಚಿಕ್ಕಬಳ್ಳಾಪುರ,ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮೊದಲು ಸುದೀಪ್ ಪ್ರಚಾರ ಮಾಡಲಿದ್ದಾರಂತೆ.‌ ಇದಾದ ಬಳಿಕ ಉಳಿದ ಆಯ್ದ ಕ್ಷೇತ್ರಗಳಲ್ಲಿ ಕಿಚ್ಚ ಬಿಜೆಪಿ ಪರ ಮತಯಾಚನೆ ಮಾಡಲಿದ್ದಾರಂತೆ. ಬಿಜೆಪಿ ಸುದೀಪ್ ಪ್ರಚಾರದ ವಿಚಾರದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಲು ನಿರ್ಧರಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಕೇವಲ ಆಯ್ದ ಸ್ಥಳಗಳಲ್ಲಿ ಮಾತ್ರ ಸುದೀಪ್ ರನ್ನು ಪ್ರಚಾರಕ್ಕೆ ಬಳಸಿಕೊಳ್ಳುವಂತೆ ಪ್ಲ್ಯಾನ್ ಮಾಡಲಾಗಿದೆಯಂತೆ.

ಇದನ್ನೂ ಓದಿ : ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ : ಬಿಎಸ್ವೈ ಭೇಟಿ ಮಾಡಿದ ತಮಿಳು ನಾಯಕರು

ಇದನ್ನೂ ಓದಿ : ಸಾಂಸ್ಕೃತಿಕ ನಗರಿಗೆ ಇಂದು ಮೋದಿ ಆಗಮನ : ಇಲ್ಲಿದೆ ಸಂಪೂರ್ಣ ಕಾರ್ಯಕ್ರಮದ ವಿವರ

ಇನ್ನೊಂದೆಡೆ ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೇರಿದಂತೆ ಇತರ ಪಕ್ಷದ ಪ್ರಮುಖ ಹಾಗೂ ಪ್ರಭಾವಿ ನಾಯಕರ ಕ್ಷೇತ್ರದಲ್ಲಿ ಸುದೀಪ್ ರಿಂದ ಪ್ರಚಾರ ಮಾಡಿಸಿದಲ್ಲಿ ಅಂತಹ ನಾಯಕರೊಂದಿಗಿನ ಸುದೀಪ್ ರ ಸೌಹಾರ್ದಯುತ ಸ್ನೇಹ ಸಂಬಂಧಕ್ಕೆ ಧಕ್ಕೆಯಾಗೋ ಸಾಧ್ಯತೆ ಇರೋದರಿಂದ ಯಾವುದೇ ಕಾರಣಕ್ಕೂ ಸುದೀಪ್ ಮುಜುಗರವಾಗದಂತೆ ಪ್ರಚಾರದ ಪ್ಲ್ಯಾನ್ ಮಾಡಲು ಸಿದ್ಧತೆ ನಡೆದಿದೆಯಂತೆ. ಒಟ್ಟಿನಲ್ಲಿ ಸುದೀಪ್ ಗೌರವಕ್ಕೆ ಧಕ್ಕೆಯಾಗದಂತೆ ಅವರ ಜನಪ್ರಿಯತೆಯನ್ನು ಮತವಾಗಿ ಪರಿವರ್ತಿಸಿಕೊಳ್ಳುವ ಪ್ರಯತ್ನ ಕಮಲ ಪಾಳಯದಿಂದ ನಡೆದಿದೆ.

CM Bommai Shiggamvi Constituency: Little power for Kamala Pade: Sudeep ready to campaign for BJP

Comments are closed.