cm ibrahim : ಭಾನುವಾರದಂದು ಜೆಡಿಎಸ್​ ರಾಜ್ಯಾಧ್ಯಕ್ಷನ ಪಟ್ಟ ಅಲಂಕರಿಸಲಿದ್ದಾರೆ ಸಿಎಂ ಇಬ್ರಾಹಿಂ

ಬೆಂಗಳೂರು :cm ibrahim: ಕೆಲ ಸಮಯದ ಹಿಂದಷ್ಟೇ ಕಾಂಗ್ರೆಸ್​ ಪಕ್ಷಕ್ಕೆ ಗುಡ್​ ಬೈ ಹೇಳಿರುವ ಸಿಎಂ ಇಬ್ರಾಹಿಂ ಭಾನುವಾರದಂದು ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ. ಅಂದೇ ಸಿಎಂ ಇಬ್ರಾಹಿಂ ಜೆಡಿಎಸ್​ ಪಕ್ಷದ ರಾಜ್ಯಾಧ್ಯಕ್ಷನಾಗಿಯೂ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಭಾನುವಾರ ನಡೆಯಲಿರುವ ಸಮಾರಂಭದಲ್ಲಿ ಜೆಡಿಎಸ್​ ವರಿಷ್ಟ ಹೆಚ್​​.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿರಲಿದ್ದಾರೆ.


ಜೆಡಿಎಸ್​ನಲ್ಲಿ ಪ್ರಸ್ತುತ ಹೆಚ್​.ಕೆ ಕುಮಾರಸ್ವಾಮಿ ಪಕ್ಷದ ರಾಜ್ಯಾಧ್ಯಕ್ಷನಾಗಿ ಅಧಿಕಾರದಲ್ಲಿದ್ದಾರೆ. ಸಿಎಂ ಇಬ್ರಾಹಿಂಗೂ ಪಕ್ಷದಲ್ಲಿ ಇದೇ ಹುದ್ದೆಯನ್ನು ನೀಡಲಾಗುತ್ತಿದ್ದು ಇನ್ಮುಂದೆ ಈ ಇಬ್ಬರೂ ಪಕ್ಷದಲ್ಲಿ ಜಂಟಿಯಾಗಿ ರಾಜ್ಯಾಧ್ಯಕ್ಷನ ಸ್ಥಾನವನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ. ಇಬ್ಬರೂ ಒಟ್ಟಾಗಿ ಪಕ್ಷವನ್ನು ಮುನ್ನೆಡಸಬೇಕು ಎಂದು ಪಕ್ಷದ ವರಿಷ್ಠರು ಕಿವಿ ಮಾತು ಹೇಳಿದ್ದಾರೆ ಎನ್ನಲಾಗಿದೆ.


ಇನ್ನು ಈ ವಿಚಾರವಾಗಿ ಮಾತನಾಡಿದ ಸಿಎಂ ಇಬ್ರಾಹಿಂ ರೈತರಿಗೆ ಅನ್ಯಾಯ ಮಾಡುವ ಸಂದರ್ಭ ಬಂದರೆ ಪ್ರಧಾನಿ ಪಟ್ಟಕ್ಕೆ ರಾಜೀನಾಮೆ ನೀಡುತ್ತೇನೆ ಎಂದವರು ದೇವೇಗೌಡರು.ಈಗ ಇಂತಹ ವ್ಯಕ್ತಿತ್ವ ನಿಮಗೆ ಇನ್ನೊಂದು ಸಿಗಲು ಸಾಧ್ಯವೇ.? ಎಂದು ಪ್ರಶ್ನೆ ಮಾಡಿದರು. 1994ರಲ್ಲಿ ರಾಮನಗರದಿಂದ ದೇವೇಗೌಡರ ಶಕೆ ಆರಂಭವಾಗಿತ್ತು. ಇನ್ಮುಂದೆ ಕುಮಾರಸ್ವಾಮಿ ಪರ್ವ ಕೂಡ ಇದೇ ಕ್ಷೇತ್ರದಿಂದ ಆರಂಭಗೊಳ್ಳಲಿದೆ. ಕುಮಾರಸ್ವಾಮಿ ಮತ್ತೆ ಸರ್ಕಾರವನ್ನು ರಚಿಸುತ್ತಾರೆ. ಅವರು ಕೇಂದ್ರ ಸರ್ಕಾರವನ್ನೂ ನೋಡುತ್ತಾರೆ ಎಂದು ಹೇಳಿದರು.

ಇದನ್ನು ಓದಿ : Srikakulam : ಶ್ರೀಕಾಕುಳಂನಲ್ಲಿ ಭೀಕರ ರೈಲು ಅಪಘಾತ : ಐವರು ಸಾವು

ಇದನ್ನೂ ಓದಿ : gang rape on girl child : 16 ವರ್ಷದ ಬಾಲಕಿ ಮೇಲೆ 8 ಮಂದಿಯಿಂದ ಗ್ಯಾಂಗ್​ ರೇಪ್​​: ಆರೋಪಿಗಳ ಬಂಧನ

cm ibrahim to join jds on april 17 in bangalore declares hd devegowda

Comments are closed.