Congress Guarantee Card : ಗ್ಯಾರಂಟಿ ಜಾರಿಗೆ ಸರ್ಕಸ್ ಆರಂಭ, ಬ್ಯಾಕ್ ಟೂ ಬ್ಯಾಕ್ ಸಭೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ ಡಿಕೆಶಿ

ಬೆಂಗಳೂರು : ರಾಜ್ಯದಲ್ಲಿ ರಂಗೇರಿದ್ದ ಚುನಾವಣೆ ಕಾವು ಕಾಂಗ್ರೆಸ್ ಅಧಿಕಾರ ಪಡೆದುಕೊಳ್ಳುವುದರೊಂದಿಗೆ ತಣ್ಣಗಾಗಿದೆ. ಈಗ ಸದ್ಯ ರಾಜ್ಯದಲ್ಲಿ (Congress Guarantee Card)‌ ಕಾಂಗ್ರೆಸ್ ನ ಐದು ಗ್ಯಾರಂಟಿಗಳದ್ದೇ ಚರ್ಚೆ. ಐದು ಉಚಿತ ಯೋಜನೆಗಳು ಯಾವಾಗ ಜಾರಿಗೆ ಬರಲಿದೆ ಎಂದು ಜನರು ಕಾಯುತ್ತಿದ್ದಾರೆ. ಹೀಗಾಗಿ ಅಧಿಕಾರ ವಹಿಸಿಕೊಂಡು ಸಿಎಂ ಸ್ಥಾನಕ್ಕೇರಿರೋ ಸಿದ್ಧರಾಮಯ್ಯನವರ ಮುಂದೇ ದೊಡ್ಡ ಸವಾಲು ಸಿದ್ಧವಾಗಿದ್ದು, ಜೂನ್ 1 ರಂದು ಯೋಜನೆಗಳ ಸಂಪೂರ್ಣ ಚಿತ್ರಣ ಜನರಿಗೆ ಸಿಗೋ ಸಾಧ್ಯತೆ ಇದೆ‌.

ಹೌದು ಅಂದುಕೊಂಡಂತೆ ಸರಕಾರ ರಚನೆಯೂ ಆಯ್ತು, ಸಂಪುಟ ವಿಸ್ತರಣೆಯೂ ಆಯ್ತು. ಕೊನೆಗೆ ಸಣ್ಣ ಪುಟ್ಟ ಅಸಮಧಾನಗಳ‌ ಮಧ್ಯೆ ಖಾತೆ ಹಂಚಿಕೆ ಕೂಡ ಆಗಿದೆ‌.‌ ಇನ್ನೇನಿದ್ದರೂ ಸರಕಾರಕ್ಕೆ ಗ್ಯಾರಂಟಿಗಳ ಅನುಷ್ಠಾನ ಮಾಡುವ ಸವಾಲು. ಗ್ಯಾರಂಟಿ ಜಾರಿ ಮಾಡೋದಾಗಿ ಘೋಷಿಸಿರುವ ಸರಕಾರ ಮೊದಲ ಸಂಪುಟ ಸಭೆಯಲ್ಲಿ ಉಚಿತ ಐದು ಗ್ಯಾರಂಟಿಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡೋದಾಗಿ ಹೇಳಿದೆ. ಸರಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ಪಡೆಯಲು ಯಾರು ಅರ್ಹರು ಎಂಬುದನ್ನು ಮೊದಲ ಸಂಪುಟ ಸಭೆ ತೀರ್ಮಾನಿಸಲಿದೆ.

ಇನ್ನೂ ಈಗಾಗಲೇ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಎಲ್ಲಾ ಕಡೆಗಳಲ್ಲೂ ಗ್ಯಾರಂಟಿ ಜಾರಿಗೆ ಒತ್ತಡ ಕೇಳಿ ಬರಲಾರಂಭಿಸಿದೆ. ಹೀಗಾಗಿ ಸರಕಾರಕ್ಕೆ ಕನಿಷ್ಠ ಜೂನ್ 1ರಿಂದ ಯೋಜನೆಗಳನ್ನು ಜಾರಿ ಮಾಡುವ ಅನಿವಾರ್ಯತೆ ಎದುರಾಗಿದೆ‌. ಹೀಗಾಗಿ ಸದ್ಯ ಬೇರೆ ಎಲ್ಲ ವಿಚಾರಗಳನ್ನು ಬದಿಗೊತ್ತಿರೋ ಸಿಎಂ ಸಿದ್ಧರಾಮಯ್ಯ, ಗ್ಯಾರಂಟಿ ಕಡೆ ಗಮನ ಕೊಡಲು ನಿರ್ಧರಿಸಿದ್ದಾರೆ. ಅಲ್ಲದೇ ಗ್ಯಾರಂಟಿಗೆ ಸಂಬಂಧಿಸಿದ ಇಲಾಖೆಗಳ ಸಚಿವರು ಅಧಿಕಾರಿ ಗಳ ಜೊತೆ ಸಿಎಂ ಸಭೆ ಆರಂಭಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ರಿಂದ ಮಹತ್ವದ ಸಭೆ ಆರಂಭವಾಗಲಿದ್ದು ಗುರುವಾರದವರೆಗೂ ಹಲವು ಹಂತದಲ್ಲಿ ಮಹತ್ವದ ಸಭೆ ನಡೆಯಲಿದೆ.

ಇದನ್ನೂ ಓದಿ : Nadoja Dr G Shankar : ವಿಧಾನ ಪರಿಷತ್‌ಗೆ ನಾಡೋಜಾ ಡಾ.ಜಿ.ಶಂಕರ್‌ ?

ಮಾತು ಕೊಟ್ಟಂತೆ ಗ್ಯಾರಂಟಿ ಭರವಸೆ ಜಾರಿ ಮಾಡುವ ಬಗ್ಗೆ ತೀರ್ಮಾನಿಸಲು ಮುಖ್ಯವಾಗಿ ಸಿಎಂ ಹಣಕಾಸು ಇಲಾಖೆಯ ಅಧಿಕಾರಿ ಗಳ ಜೊತೆ ಸಮಗ್ರ ಚರ್ಚೆ ನಡೆಸಿದ್ದು ಭರವಸೆಗಳಿಗೆ ಹಣ ಹೊಂದಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರಂತೆ. ಅಷ್ಟೇ ಅಲ್ಲ ಲಭ್ಯವಿರುವ ಹಣದ ಮೂಲಕ ಗ್ಯಾರಂಟಿ ಜಾರಿಗೆ ಸಿದ್ದತೆ ನಡೆದಿದೆ. ಬಿಪಿಎಲ್ ಕಾರ್ಡ್ ನವರಿಗೆ ಗ್ಯಾರಂಟಿ ಕೊಡುವ ಬಗ್ಗೆ ತೀರ್ಮಾನ ಹೊರಬೀಳುವ ನೀರಿಕ್ಷೆ ಇದ್ದು, ಕೆಲ ಕಂಡಿಷನ್ ಆಧಾರದಲ್ಲೇ ಗ್ಯಾರಂಟಿ ಗಳನ್ನು ಕೊಡಲು ಪ್ಲಾನ್ ಮಾಡಲಾಗಿದೆ‌. ಅಂತಿಮವಾಗಿ ಗುರುವಾರದ ಕ್ಯಾಬಿನೆಟ್ ನಲ್ಲಿ ಜಾರಿ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದ್ದು, ಗ್ಯಾರಂಟಿ ನಂಬಿ ಕಾಂಗ್ರೆಸ್ ಮತ ನೀಡಿದ ಸಾವಿರಾರು ಕಾರ್ಯಕರ್ತರು, ಸಾರ್ವಜನಿಕರು ಗುರುವಾರದ ಸಂಪುಟದತ್ತ ನೀರಿಕ್ಷೆ ದೃಷ್ಟಿ ನೆಟ್ಟಿದ್ದಾರೆ.

Congress Guarantee Card: CM Siddaramaiah DK has started back to back meetings to implement the guarantee.

Comments are closed.