ಮಂಗಳವಾರ, ಏಪ್ರಿಲ್ 29, 2025
HomekarnatakaCongress secret deal : ಪಕ್ಷಕ್ಕಾಗಿ ಮಹಾತ್ಯಾಗ 2023 ರಲ್ಲೂ ಸಿಎಂ ಆಗಲ್ವಾ ಡಿ.ಕೆ.ಶಿವಕುಮಾರ್‌ :...

Congress secret deal : ಪಕ್ಷಕ್ಕಾಗಿ ಮಹಾತ್ಯಾಗ 2023 ರಲ್ಲೂ ಸಿಎಂ ಆಗಲ್ವಾ ಡಿ.ಕೆ.ಶಿವಕುಮಾರ್‌ : ಏನಿದು ಕಾಂಗ್ರೆಸ್‌ ರಹಸ್ಯ ಒಪ್ಪಂದ

- Advertisement -

ಬೆಂಗಳೂರು : ರಾಜ್ಯದಲ್ಲಿ ಸಮರ್ಥ ವಿರೋಧ ಪಕ್ಷವಾಗಿ ನಿಂತಿರೋ ಕಾಂಗ್ರೆಸ್ ಮುಂದಿನ ವಿಧಾನಸಭಾ ಎಲೆಕ್ಷನ್ ನಲ್ಲಿ ಅಧಿಕಾರದ ಗದ್ದುಗೆ ಹಿಡಿಯೋ ಕನಸಿನಲ್ಲಿದೆ. ಅಷ್ಟೇ ಅಲ್ಲ ಪಕ್ಷವನ್ನು ಅಧಿಕಾರಕ್ಕೆ ತಂದು ಕನಕಪುರ ಬಂಡೆ ಡಿಕೆಶಿ ಸಿಎಂ ಆಗೋ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಸಿಎಂ ಕನಸಿನಲ್ಲಿದ್ದ ಡಿ.ಕೆ.ಶಿವಕುಮಾರ್‌ (DK Sivakumar) ಈಗ ಹೊಂದಾಣಿಕೆ ರಾಜಕೀಯಕ್ಕೆ ಮುಂದಾಗಿದ್ದು ಅಧಿಕಾರ ಪಕ್ಷದ ಕೈತಪ್ಪಬಾರದು ಎಂದು ಸ್ವಯಂ ಸಂಧಾನಕ್ಕೆ ಮುಂದಾಗಿದ್ದಾರೇ (Congress secret deal) ಎಂಬ ಎಕ್ಸಕ್ಲೂಸಿವ್ ಮಾಹಿತಿ‌ ನ್ಯೂಸ್ ನೆಕ್ಸ್ಟ್ ಗೆ ಲಭ್ಯವಾಗಿದೆ.

ಹೌದು, ದೇವನಹಳ್ಳಿಯಲ್ಲಿ ನಡೆಯುತ್ತಿರೋ ಕಾಂಗ್ರೆಸ್‌ (Congress) ಚಿಂತನಾ ಶಿಬಿರದಲ್ಲಿರೋ ಡಿ.ಕೆ.ಶಿವಕುಮಾರ್‌ (DK Sivakumar) ಪಕ್ಷದ ನಾಯಕರ ಸಮ್ಮುಖದಲ್ಲಿ ಸ್ವಯಂ ಸಂಧಾನ ತಂತ್ರವನ್ನು ಅನುಸರಿಸಿದ್ದು, ಸಿಎಂ ಸ್ಥಾನ ಅಥವಾ ಅಧಿಕಾರ ಮುಖ್ಯವಲ್ಲ. ಪಕ್ಷವನ್ನು ಅಧಿಕಾರಕ್ಕೆ ತರೋದು ಮುಖ್ಯ ಎಂಬರ್ಥದಲ್ಲಿ ಮಾತನಾಡಿದ್ದಾರಂತೆ. ಮಾತ್ರವಲ್ಲ ಯಾವುದೇ ತ್ಯಾಗಕ್ಕೂ ಸಿದ್ಧ ಎಂಬ ಮಾತು ಸ್ವತಃ ಡಿ.ಕೆ.ಶಿವಕುಮಾರ್‌ ಬಾಯಿಂದಲೇ ಬಂದಿದ್ದು, ಇದೇ ಕಾರಣಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯನವರ ಜೊತೆ ಡಿ.ಕೆ.ಶಿವಕುಮಾರ್‌ ಗುಪ್ತವಾಗಿ ಮಾತನಾಡಿದ್ದಾರಂತೆ.

Congress secret deal DK Sivakumar not CM in 2023

ಚಿಂತನಾ ಶಿಬಿರದಿಂದ ಸಿದ್ಧರಾಮಯ್ಯನವರ ಜೊತೆ ರಹಸ್ಯ ಮಾತುಕತೆಗೆ ಡಿ.ಕೆ.ಶಿವಕುಮಾರ್‌ ತೆರಳಿದ್ದಾರೆ. ರಹಸ್ಯ ಸ್ಥಳದಲ್ಲಿ ಉಭಯ ನಾಯಕರು ಅರ್ಧ ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದ್ದು, ಪಕ್ಷವನ್ನು ಅಧಿಕಾರಕ್ಕೆ ತರೋಣ. ಬಳಿಕ‌ ನೀವೆ ಸಿಎಂ ಸ್ಥಾನವನ್ನು ಅಲಂಕರಿಸಿ ಎಂದು ಸ್ವತಃ ಡಿ.ಕೆ.ಶಿವಕುಮಾರ್‌ ಸಿದ್ದುಗೆ ಹೇಳಿದ್ದಾರಂತೆ. ಅಲ್ಲದೇ ಎರಡೂವರೆ ವರ್ಷ ಸಿದ್ಧರಾಮ್ಯ ಸಿಎಂ ಆಗಿ ಕಾರ್ಯನಿರ್ವಹಿಸಲಿದ್ದು ಇನ್ನುಳಿದ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್‌ ಸಿಎಂ ಸ್ಥಾನಕ್ಕೇರುವಂತೆ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ.

Congress secret deal DK Sivakumar not CM in 2023

ಮೂಲಗಳ ಮಾಹಿತಿ ಪ್ರಕಾರ ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ನಡೆಯುತ್ತಿರೋ ಒಳಜಗಳದಿಂದಾಗಿ ಮತದಾರರು ಕಾಂಗ್ರೆಸ್ ನಿಂದ ದೂರವಾಗೋ ಸಾಧ್ಯತೆ ಇದೆ‌ . ಅಲ್ಲದೇ ಡಿ.ಕೆ.ಶಿವಕುಮಾರ್‌ಗೆ ಈಗಾಗಲೇ ಇಡಿ ಐಟಿ ಸಮನ್ಸ್ ಗಳು ಬರ್ತಿರೋದರಿಂದ ಡಿ.ಕೆ.ಶಿವಕುಮಾರ್‌ ಸಿಎಂ ಕ್ಯಾಂಡಿಡೇಟ್ ಎಂದು ಬಿಂಬಿಸೋದು ವಿಪಕ್ಷಗಳಿಗೆ ಅಸ್ತ್ರ ಒದಗಿಸಿದಂತಾಗಲಿದೆ ಎಂಬುದು ಸೇರಿದಂತೆ ಹಲವು ಕಾರಣಕ್ಕಾಗಿ ಡಿಕೆಶಿ ತಮ್ಮನ್ನು ತಾವು ಸಿಎಂ ಸ್ಥಾನದ ಆಕಾಂಕ್ಷೆಯಿಂದ ದೂರವಿಟ್ಕೊಂಡು ಪಕ್ಷಕ್ಕಾಗಿ ದುಡಿಯಲು ಸಿದ್ಧವಾಗಿದ್ದಾರಂತೆ‌

Congress secret deal DK Sivakumar not CM in 2023

ಅದಕ್ಕಾಗಿಯೇ ಡಿ.ಕೆ.ಶಿವಕುಮಾರ್‌ ಚಿಂತನ ಸಭೆಯಲ್ಲಿ ತ್ಯಾಗದ ಮಾತನಾಡಿದ್ದು, ಕಿತ್ತಾಟ ಮಾಡಿಕೊಂಡರೇ 2023 ರಲ್ಲಿ ಅಧಿಕಾರ ಬೇರೆಯವರ ಕೈಗೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ನಾನು ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಾಮಯ್ಯ ಎನ್ನುವ ಮೂಲಕ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‌ ಸಿಎಂ ಸ್ಥಾನಾಕಾಂಕ್ಷೆಯಿಂದ ದೂರವಾಗುವ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಈ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.

ಇದನ್ನೂ ಓದಿ : ಕರ್ನಾಟಕಕ್ಕೆ ಮತ್ತೆ ಕೊರೊನಾ ಭಯ : ಆರೋಗ್ಯ ಸಚಿವ ಡಾ.ಸುಧಾಕರ್‌ಗೆ ಕೊರೊನಾ ಸೋಂಕು ದೃಢ

ಇದನ್ನೂ ಓದಿ : ಆರ್‌ಎಸ್‌ಎಸ್‌ ವಿರುದ್ಧ ಮುಂದುವರಿದ ಸಮರ : ಪ್ರತಿಯೊಬ್ಬ ಭಾರತಿಯನಿಗೂ RSS ಅಂದ್ರೆ ಭಯ ಎಂದ ಸಿದ್ದರಾಮಯ್ಯ

Congress secret deal DK Sivakumar not CM in 2023

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular