ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜನಾರ್ಧನ ಪೂಜಾರಿ ಪುತ್ರ : ದೀಪಕ್‌ ಪೂಜಾರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ

ಮಂಗಳೂರು : ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್‌ ಮುಖಂಡ ಜನಾರ್ಧನ ಪೂಜಾರಿ ಇಂದಿಗೂ ತಮ್ಮ ಪ್ರಭಾವವನ್ನೂ ಉಳಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ, ಕೇಂದ್ರ ಸಚಿವರಾಗಿದ್ದರೂ ಕೂಡ ತಮ್ಮ ಮಕ್ಕಳನ್ನ ಎಂದಿಗೂ ರಾಜಕೀಯಕ್ಕೆ ಕರೆ ತಂದವರಲ್ಲ. ಇದೀಗ ಜನಾರ್ಧನ ಪೂಜಾರಿ (Janardhana Poojary) ಅವರ ಪುತ್ರ ದೀಪಕ್‌ ಪೂಜಾರಿ (Deepak Poojary) ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಎಐಸಿಸಿ ದೀಪಕ್‌ ಪೂಜಾರಿ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಕುದುರೆಮುಖ ಉಕ್ಕಿನ ಕಾರ್ಖಾನೆಯಲ್ಲಿ ಇಂಜಿನಿಯರ್‌ ಆಗಿ ಉದ್ಯೋಗದಲ್ಲಿರುವ ದೀಪಕ್‌ ಪೂಜಾರಿ ಅವರ ಹೆಸರು ಇದೀಗ ಕೆಪಿಸಿಸಿ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಕುತೂಹಲವನ್ನು ಮೂಡಿಸಿದೆ. ಸರಳತೆ, ಸಜ್ಜನ, ಪ್ರಾಮಾಣಿಕ ರಾಜಕಾರಣಿ ಎನಿಸಿಕೊಂಡಿರುವ ಜನಾರ್ಧನ ಪೂಜಾರಿ ಅಂದ್ರೆ ಎಲ್ಲರೂ ಇಂದಿಗೂ ಹೆದರುತ್ತಾರೆ. ನೇರ, ನಿಷ್ಠುರ ಮಾತು ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಕೇಂದ್ರ ಹಣಕಾಸು ಸಚಿವರಾಗುವ ಮೂಲಕ ಸಾಲ ಮೇಳ ಆಯೋಜಿಸಿ ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಕೊಂಡೊಯ್ದವರು.

ಸರಕಾರದ ಉನ್ನತ ಹುದ್ದೆಗೆ ಏರಿದ್ದರೂ ಕೂಡ ಜನಾರ್ಧನ ಪೂಜಾರಿ ಅವರು ಎಂದಿಗೂ ತಮ್ಮ ಸ್ವಾಭಿಮಾನವನ್ನು ಬಿಟ್ಟವರಲ್ಲ. ಜನಾರ್ಧನ ಪೂಜಾರಿ ಅವರು ಕೂಡ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಕರೆತರುತ್ತಾರೆ ಅನ್ನೋ ಕುತೂಹಲ ಸಹಜವಾಗಿತ್ತು. ಆದರೆ ತಾವು ಸಕ್ರೀಯ ರಾಜಕಾರಣದಲ್ಲಿ ಇದ್ದಾಗಲೂ ಒಮ್ಮೆಯೂ ಮಕ್ಕಳನ್ನು ರಾಜಕೀಯಕ್ಕೆ ಕರೆತಂದವರಲ್ಲ. ಆದ್ರೀಗ ಎಐಸಿಸಿ ಜನಾರ್ಧನ ಪೂಜಾರಿ ಅವರ ಪುತ್ರ ದೀಪಕ್‌ ಪೂಜಾರಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಜನಾರ್ಧನ ಪೂಜಾರಿ ಅವರಿಗೆ ಒಟ್ಟು ಮೂವರು ಮಕ್ಕಳು. ಮೊದಲ ಮಗ ವಿಭಾಕರ, ಎರಡನೇ ಮಗ ಸಂತೋಷ್‌ ಅವರು ಈಗಾಗಲೇ ದೆಹಲಿಯಲ್ಲಿ ಚಾರ್ಟೆಡ್‌ ಅಕೌಂಟೆಂಟ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂರನೇ ಮಗ ದೀಪಕ್‌ ಪೂಜಾರಿ ಅವರು ಇಂಜಿನಿಯರಿಂಗ್‌ ಪದವಿ ಪಡೆದು ಕುದುರೆಮುಖ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸ್ತಾರಾ ದೀಪಕ್‌ ಪೂಜಾರಿ ?

ದಕ್ಷಿಣ ಕನ್ನಡ ಜಿಲ್ಲಾ ಸಂಸದರಾಗಿದ್ದ ಜನಾರ್ಧನ ಪೂಜಾರಿ ಅವರು ಸಕ್ರೀಯ ರಾಜಕಾರಣದಿಂದ ದೂರವಾಗಿದ್ದಾರೆ. ಇದೀಗ ಅವರ ಮಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದು ಕೈ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ಮೂಡಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ದೀಪಕ್‌ ಪೂಜಾರಿ ಅವರು ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಹಲವಾರು ವಿಷಯಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿದಾಡುತ್ತಿದೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ : Cabinet Expansion : ಸಂಪುಟ ವಿಸ್ತರಣೆ ಮಾಡಿದರೂ, ಮಾಡದೇ ಇದ್ದರೂ ಸಂಕಷ್ಟ ಸಿ.ಎಂಗೇ?

ಇದನ್ನು ಓದಿ : Yogi Adityanath : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕಚೇರಿಯ ಟ್ವಿಟರ್ ಖಾತೆ ಹ್ಯಾಕ್

Congress Senior Leader Janardhana Poojary Son Deepak Poojary elect KPCC Secretary

Comments are closed.