ದುರ್ಬಲ ವಿರೋಧಪಕ್ಷ ! ಮೈಮೆರೆತ ಆಡಳಿತ ಪಕ್ಷ ! ಕೊರೊನಾ ನಡುವೆ ಜನರು ಹೈರಾಣ..!

ಬೆಂಗಳೂರು : ಕರ್ನಾಟಕದ ಹಿಂದಿನ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸಲು ಆಡಳಿತ ಮತ್ತು ವಿರೋಧ ಪಕ್ಷಗಳು ವಿಫಲವಾಗಿವೆ ಎಂಬ ಆರೋಪ ಕೇಳಿಬಂದಿದೆ.

ಹೊಂದಾಣಿಕೆ ರಾಜಕಾರಣಕ್ಕೆ ಜನರು ಹೈರಾಣಾಗಿದ್ದಾರೆ ಎಂಬುದಕ್ಕೆ ರಾಜ್ಯವೇ ಸ್ಪಷ್ಟ ಉದಾಹರಣೆ. ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ನಿಜವಾದ ವಿರೋಧ ಪಕ್ಷವಾಗಿ ವರ್ತಿಸುತ್ತಿಲ್ಲ. ಕಾಟಾಚಾರಕ್ಕೆ ಸರ್ಕಾರ ದ ವಿರುದ್ಧ ಮಾತನಾಡುತ್ತಿದೆ ಹೊರತು ಸರಕಾರವನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತಿಲ್ಲ. ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವ ಕುಮಾರ್ ಹೊಂದಾಣಿಕೆ ರಾಜಕಾರಣದಲ್ಲಿ ಹೆಚ್ಚು ಆಸಕ್ತಿ ಹೊಂದಿ ದ್ದಾರೆ ಅನ್ನೋ ಆರೋಪವೂ ಇದೆ.

ಜನಪರ ಕಾಳಜಿಯ ಬೆಂಬಲಿಗರನ್ನು ಇಟ್ಟುಕೊಳ್ಳದ ಡಿಕೆಶಿ ವ್ಯವಹಾರ ಸ್ಥ ರಾಗಿ ವರ್ತಿಸುತ್ತಿದ್ದಾರೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ ಕಾಳಜಿ ಹೊಂದಿದ್ದಾರೆನ್ನುವ ಮಾತಿದೆಯಾದ್ರೂ, ಅವರ ಸುತ್ತಮುತ್ತ ಲಿರುವವರೇ ಅವರನ್ನು ದಾರಿ ತಪ್ಪಿಸುತ್ತಿ ದ್ದಾರೆ ಎಂದು ಜನರ ಆರೋಪವೂ ಇದೆ. ಇನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಜನ ಕಾಳಜಿ ಬಗ್ಗೆ ಜನರಿಗೆ ಸಂಶಯವಿಲ್ಲ. ಆದರೆ ಭವಿಷ್ಯದ ಪಕ್ಷದ ಹಿತದೃಷ್ಟಿಯಿಂದ ಕೆಲವೊಂದು ಬಾರಿ ಅವರು ವರ್ತಿಸುತ್ತಾರೆ ಎಂಬುದು ಜನರ ಅಭಿಪ್ರಾಯ.

ಒಟ್ಟಿನಲ್ಲಿ ಕರ್ನಾಟಕದ ವಿರೋಧ ಪಕ್ಷಗಳು ಒಂದಲ್ಲೊಂದು ದುರ್ಬಲತೆಯನ್ನು ಹೊಂದಿವೆ. ಈ ವಿರೋಧ ಪಕ್ಷ ನಾಯಕರುಗಳ ದುರ್ಬಲತೆಯ ಸಂಪೂರ್ಣ ಲಾಭ ಎತ್ತಿದ ಬಿಜೆಪಿ ಮೈಮರೆತಿದೆ. ಸಿಎಂ ಯಡಿಯೂರಪ್ಪಗೆ ಜನ ಕಾಳಜಿ ಇದ್ದರು, ಭ್ರಷ್ಟಾಚಾರ ನಡೆಯುತ್ತಿ ದ್ದರೂ ಕೂಡ ಕಂಡು ಸುಮ್ಮನಾಗಿದಂತಿದೆ. ರಾಜ್ಯದಲ್ಲಿ ಕೊರೋನ ನಿಯಂತ್ರಣದ ವಿಚಾರದಲ್ಲಿ ಕಳೆದ ಒಂದು ವರ್ಷಗಳಿಂದ ನಾಟಕಗಳು ನಡೆಯುತ್ತಿದೆ ಅ‌ನ್ನೋ ಆರೋಪವೂ ಇದೆ.

ಜನನಾಯಕರುಗಳಿಗೆ ವಿರೋಧ ಪಕ್ಷಗಳು ದುರ್ಬಲವಾಗಿರುವುದ ರಿಂದ, ಏನೇ ಮಾಡಿದರೂ ಮೋದಿ ಹೆಸರಿನಲ್ಲಿ ಆಯ್ಕೆ ಆಗುತ್ತಿವೆಂಬ ಭ್ರಮೆಯಲ್ಲಿ ಇದ್ದಂತಿದೆ. ಪ್ರಧಾನಿ ಮೋದಿ ಹೆಸರನ್ನು ಹೇಳಿಕೊಂಡು ಆಯ್ಕೆಯಾಗುವ ಈ ನಾಯಕರುಗಳು ಭ್ರಷ್ಟಾಚಾರಕ್ಕೆ ಹೆದರದೆ, ಜನ ಕಾಳಜಿ ಮರೆತು ವರ್ತಿಸುತ್ತಿದ್ದಾರೆ ಅಂತಾ ಜನರು ಮಾತನಾಡಿ ಕೊಳ್ಳುತ್ತಿದ್ದಾರೆ. ಅಷ್ಟೇ ಯಾಕೆ ಸ್ವತಃ ಬಿಜೆಪಿ ಕಾರ್ಯಕರ್ತರೇ ತಮ್ಮ ಪಕ್ಷದ  ನಾಯಕರ ಈ ದೋರಣೆಯ ವಿರುದ್ಧ ಒಳಗಿಂದಲೇ ಅಸಮಾ ಧಾನಗೊಂಡಿದ್ದಾರೆ. ಮೋದಿಯ ಮುಖ ನೋಡಿ ವೋಟು ಹಾಕಿದ್ದೇವೆ ಹೊರತು ಈ ನಾಯಕರುಗಳ ಮುಖ ನೋಡಿ ಅಲ್ಲ, ಆದರೆ ಇವರು ಈಗ ನಿಜವಾದ ಜನ ಕಾಳಜಿಯನ್ನು ಮರೆತಿದ್ದಾರೆ ಎಂಬುದು ಬಿಜೆಪಿ ಕಾರ್ಯಕರ್ತರ ಅನಿಸಿಕೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಚರ್ಚೆಯೂ ನಡೆಯುತ್ತಿದೆ.

ಕಾಂಗ್ರೆಸ್ ಪಕ್ಷದ  ದುರ್ಬಲತೆ ಕೆಲವು ಬಿಜೆಪಿ ಕಾರ್ಯಕರ್ತರಿಗೂ ಸಮಸ್ಯೆ ಉಂಟಾಗಿದೆ. ಜನರ ಸಮಸ್ಯೆಯನ್ನು ಯಾರ ಬಳಿ ಹೇಳುವು ದೆಂಬ ಗೊಂದಲದಲ್ಲಿ ಬಿಜೆಪಿ ಕಾರ್ಯಕರ್ತರು ಇದ್ದಾರೆ.‌ ಸಮರ್ಥ ವಿರೋಧ ಪಕ್ಷ ಒಂದು ದೇಶ, ಒಂದು ಪ್ರಜಾಪ್ರಭುತ್ವಕ್ಕೆ ಏಕೆ ಅವಶ್ಯಕ ಎಂಬುದು ಈ ಕೊರೊನಾ ವಿಪತ್ತಿನ ಸಂದರ್ಭದಲ್ಲಿ ಅರಿವಾಗುತ್ತಿದೆ. ಒಟ್ಟಾರೆ ಕರ್ನಾಟಕದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ವೈಫಲ್ಯದಿಂದ ಜನರು ಹೈರಾಣಾಗಿದ್ದಾರೆ ಎಂಬುದು ಅಷ್ಟೇ ಸತ್ಯ.

Comments are closed.