ಸೋಂಕಿತರು ಮನೆಗೆ ಬಂದು ಬೆಡ್ ಕೇಳ್ತಾರೆ ..! ಮನೆಯ ರಸ್ತೆಯನ್ನೇ ಬಂದ್ ಮಾಡಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದಾಗಿ ಜನರಿಗೆ ಬೆಡ್ ಸಿಗುತ್ತಿಲ್ಲ. ಇದರಿಂದ ದಾರಿ ತೋಚದ ಜನಸಾಮಾನ್ಯರು ಸಿಎಂ ಮನೆಗೆ ತೆರಳಿ ಬೆಡ್ ನೀಡುವಂತೆ ಅಂಗಲಾಚುತ್ತಿ ದ್ದಾರೆ. ಆದ್ರೀಗ ಸಿಎಂ ಯಡಿಯೂರಪ್ಪ ಮನೆ ಮುಂಭಾಗದ ರಸ್ತೆಯನ್ನೇ ಬಂದ್ ಮಾಡಿಸಿದ್ದಾರೆ.

ನಿಜಕ್ಕೂ ರಾಜ್ಯದಲ್ಲಿನ ಜನಸಾಮಾನ್ಯರ ಸ್ಥಿತಿ ಶೋಚನೀಯವಾಗಿದೆ. ಸಿಲಿಕಾನ್ ಸಿಟಿಯ ಮಂದಿ ಕ್ಷಣ ಕ್ಷಣಕ್ಕೂ ಬೆಚ್ಚಿ ಬೀಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಕೊರೊನಾ ಸೋಂಕಿತರು ರಸ್ತೆಯಲ್ಲಿಯೇ ಪ್ರಾಣ ಬಿಡುತ್ತಿದ್ದಾರೆ. ಇದರಿಂದ ಬೇಸತ್ತ ಜನರೀಗ ಸಿಎಂ ಮನೆಗೆ ತೆರಳಿ ಬೆಡ್ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ. ಸಿಎಂ ಮನೆಯ ಮುಂಭಾಗದಲ್ಲಿ ಜನರು ಜಮಾಯಿಸಿ ಧರಣಿ, ಪ್ರತಿಭಟನೆ ಆರಂಭವಾಗುತ್ತಲೇ ಸಿಎಂ ಅಧಿಕೃತ ನಿವಾಸಿ ಕೃಷ್ಣ ಹಾಗೂ ಕಾವೇರಿಯ ಮುಂಭಾಗದ ರಸ್ತೆಯನ್ನೇ ಬಂದ್ ಮಾಡಿಸಿದ್ದಾರೆ.

ದಾರಿ ಕಾಣದೆ ಮುಖ್ಯಮಂತ್ರಿಗಳಲ್ಲಿ ಜನರು ಅಂಗಲಾಚುವುದಕ್ಕೂ ಅವಕಾಶ ಇಲ್ಲದಂತಾಗಿದೆ. ಸಿಎಂ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಯಲ್ಲಿಯೂ ಬ್ಯಾರಿಕೇಡ್ ಗಳನ್ನು ಅಳವಡಿಸಿ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇದರಿಂದಾಗಿ ಸಿಎಂ ನಿವಾಸಕ್ಕೆ ಜನರು ತೆರಳುವುದಕ್ಕೆ ಸಾಧ್ಯವೇ ಇಲ್ಲ.

ರಾಜ್ಯ ಸರಕಾರ ಜನರಿಗೆ ಆರೋಗ್ಯ ಸೌಲಭ್ಯವನ್ನು ಒದಗಿಸುವಲ್ಲಿ ವಿಫಲವಾಗಿದೆ. ಇನ್ನೊಂದೆಡೆ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ನಿರ್ಲಕ್ಷ್ಯವನ್ನು ತಾಳುತ್ತಲೇ ಇದೆ. ಜನರು ಬೀದಿಯಲ್ಲಿ ಸಾಯುತ್ತಿದ್ದರೂ ಮುಖ್ಯಮಂತ್ರಿ, ಸಚಿವರು ಗಾಢ ನಿದ್ದೆಯಿಂದ ಎಂದತ್ತಿಲ್ಲ. ಕೇವಲ ಸಭೆಗಳನ್ನು ಮಾಡುವುದಕ್ಕಷ್ಟೇ ಸೀಮಿತವಾಗಿರುವ ಸಿಎಂ ಯಡಿಯೂರಪ್ಪ ಇದೀಗ ತನ್ನ ಮನೆಯ ದಾರಿಯನ್ನೂ ಸಾರ್ವಜನಿಕರಿಗೆ ಬಂದ್ ಮಾಡಿಸಿದ್ದಾರೆ. ಜನರಿಗೆ ಬೆಡ್ ಕೊಡಲಾಗದ ಸಿಎಂ ತನ್ನ ಮನೆಗೆ ಸಾರ್ವಜನಿಕರ ಸಂಪರ್ಕವನ್ನೇ ಕಡಿತ ಮಾಡಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Comments are closed.