BS Yeddyurappa corruption case : ಚುನಾವಣೆ ಹೊತ್ತಲ್ಲೇ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಸಂಕಟ: ಭ್ರಷ್ಟಾಚಾರ ಪ್ರಕರಣ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು : (BS Yeddyurappa corruption case) ಒಂದೆಡೆ ಬಿಜೆಪಿ ಹೈಕಮಾಂಡ್ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮುನ್ನುಗ್ಗಲು ಸಿದ್ಧತೆ ನಡೆಸಿದೆ. ಆದರೆ ಬಿಎಸ್ವೈ ಓಟವನ್ನು ಕಟ್ಟಿ ಹಾಕಲು ಈಗ ಕಾನೂನು ಕ್ರಮಗಳ‌ಮೊರೆ ಹೋಗಲಾಗ್ತಿದ್ದು, ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್ವೈ ಕುಟುಂಬದ ವಿರುದ್ಧ ಪ್ರಕರಣಗಳ ಮರು ವಿಚಾರಣೆಗೆ ಹೈಕೋರ್ಟ್ ಅಸ್ತು ಎಂದಿದೆ. ಇದರಿಂದ ಬಿ.ಎಸ್.ಯಡಿಯೂರಪ್ಪ ಹಾಗೂ ಕುಟುಂಬ ಚುನಾವಣೆ ಹೊತ್ತಿನಲ್ಲಿ ಸಂಕಷ್ಟಕ್ಕೆ ಸಿಲುಕಿದೆ.

ಬಿ.ಎಸ್.ಯಡಿಯೂರಪ್ಪ, ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಮರುಜೀವ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ವಿಚಾರಣೆಗೆ ಹೈಕೋರ್ಟ್ ಆದೇಶ ಹೊರಡಿಸಿದೆ. ನ್ಯಾ. ಸುನೀಲ್ ದತ್ ಯಾದವ್ ಅವರಿದ್ದ ಪೀಠದಿಂದ ಆದೇಶ ನೀಡಿದ್ದು, ಸದ್ಯದಲ್ಲೇ ಪ್ರಕರಣದ ತನಿಖೆ ಪುನನಾರಂಭವಾಗಲಿದೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಪೂರ್ವಾನುಮತಿ ಸಿಗದಿದ್ದಕ್ಕೆ ಕೇಸ್ ವಜಾಗೊಂಡಿತ್ತು. ಆದರೆ ಈಗ ವಿಚಾರಣಾ ನ್ಯಾಯಾಲಯದ ವಜಾ ಆದೇಶ ರದ್ದುಪಡಿಸಿದ ಹೈಕೋರ್ಟ್ ಮತ್ತೊಮ್ಮೆ ತನಿಖೆಗೆ ಆದೇಶ ನೀಡಿದೆ.

ಬಿ.ಎಸ್ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ,‌ ಶಶಿಧರ ಮರಡಿ,ಸಂಜಯ್ ಶ್ರೀ, ಚಂದ್ರಕಾಂತ ರಾಮಲಿಂಗಮ್, ಎಸ್.ಟಿ.ಸೋಮಶೇಖರ್ ಡಾ.ಜಿ.ಸಿ.ಪ್ರಕಾಶ್, ಕೆ.ರವಿ, ವಿರುಪಾಕ್ಷಪ್ಪ ಯಮಕನಮರಡಿ ವಿರುದ್ಧದ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ ವೆಂಕಟೇಶ್ ಅರಬಟ್ಟಿ ವಾದ ಮಂಡನೆ ಮಾಡಿದ್ದರು. ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಂ ಬಳಿ 12.5 ಕೋಟಿ ಲಂಚ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಟಿ.ಜಿ.ಅಬ್ರಹಾಂ ಖಾಸಗಿ ದೂರು ಸಲ್ಲಿಸಿದ್ದರು.

ಈ ಹಿಂದೆ ಟಿ.ಜೆ.ಅಬ್ರಹಾಂ ಬಿಎಸ್ವೈ ಹಾಗೂ ಕುಟುಂಬದ ವಿರುದ್ಧ ಸಿಬಿಐ ಅಥವಾ ಎಸ್ ಐ ಟಿ ತನಿಖೆಗೆ ಕೋರಿ ನ್ಯಾಯಾಲಯ ಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಬಳಿಕ ತಾಂತ್ರಿಕ ಕಾರಣದ ನೆಪವೊಡ್ಡಿ ಟಿ.ಜೆ.ಅಬ್ರಹಾಂ ಈ ಅರ್ಜಿಯನ್ನು ಹಿಂಪಡೆದಿದ್ದರು. ಈ ಪ್ರಕರಣದಲ್ಲಿ ಬಿಎಸ್ವೈ ಹಾಗೂ ಕುಟುಂಬಸ್ಥರ ವಿರುದ್ಧ ಪ್ರಾಸಿಕ್ಯೂಶನ್ ಗೆ ರಾಜ್ಯಪಾಲರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ದೂರನ್ನು ವಜಾಗೊಳಿಸಿತ್ತು‌.‌ಇದನ್ನು ಪ್ರಶ್ನಿಸಿ ಟಿ.ಜೆ.ಅಬ್ರಹಾಂ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ನ್ಯಾಯಾಲಯ ತನಿಖೆಗೆ ಆದೇಶಿಸಿದ್ದು, 2023 ರ ಚುನಾವಣೆ ವೇಳೆಯಲ್ಲಿ ಬಿಎಸ್ವೈ ಕುಟುಂಬಕ್ಕೆ ಮತ್ತೊಮ್ಮೆ ಭ್ರಷ್ಟಾಚಾರದ ಸಂಕಷ್ಟ ಕಾಡಲಾರಂಭಿಸಿದೆ.

ಇದನ್ನೂ ಓದಿ : PV Shashikanth: ಕರ್ನಾಟಕ ರಣಜಿ ತಂಡಕ್ಕೆ ಪಿ.ವಿ ಶಶಿಕಾಂತ್ ಹೆಡ್ ಕೋಚ್

ಇದನ್ನೂ ಓದಿ : Praveen’s murder : ಪ್ರವೀಣ್ ಹತ್ಯೆ- ಎನ್.ಐ.ಎ ತನಿಖೆಯಲ್ಲಿ ಹಲವು ಸ್ಫೋಟಕ ಅಂಶ ಬಹಿರಂಗ

Distress to BS Yeddyurappa family just before elections High Court gives green signal to investigate corruption cas

Comments are closed.