ಮಂಗಳೂರು: (Congress social Media ) : 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಕಾಂಗ್ರೆಸ್ ನಲ್ಲಿ ಅತ್ಯುತ್ತಮ ಸಾಧನೆಗೆ ಪಾತ್ರವಾಗಿ ದಕ್ಷಿಣ ಕನ್ನಡದ ಬಿಜೆಪಿಗೆ ಭಯ ಹುಟ್ಟಿಸಿದ್ದ ದಕ್ಷಿಣ ಕನ್ನಡದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಕ್ಕೆ ಈಗ ಗ್ರಹಣ ಹಿಡಿದಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಒಂದು ವರ್ಷಗಳಿಂದ ಬಿಜೆಪಿಯ ಯಾವುದೇ ಗುರುತರ ವಿಷಯಗಳನ್ನು ಬೆಳಕಿಗೆ ತರದೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಏನು ಮಾಡದೆ ಈಗ ಚುನಾವಣಾ ಸಂದರ್ಭದಲ್ಲಿ ಒದ್ದಾಡುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಅಚ್ಚರಿ ಎಂಬುವಂತೆ ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಸಂಚಾಲಕರಗಳ ಬದಲಾವಣೆಯನ್ನು ದಕ್ಷಿಣ ಕನ್ನಡದ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ಕಂಡುಕೊಂಡಿದೆ. ನಿತ್ಯಾನಂದ ಶೆಟ್ಟಿ ಬದಲಾವಣೆಯ ನಂತರ ಪುತ್ತೂರಿನ ಪೂರ್ಣೇಶ್ ಭಂಡಾರಿ ಕೇವಲ 17 ದಿನಗಳ ಕಾಲ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಕೆಲಸ ಮಾಡಿದ್ದರು.
ಮಾಜಿ ಸಚಿವ ರಮನಾಥ ರೈ ಒತ್ತಡ:17 ದಿನಕ್ಕೆ ಪೂರ್ಣೇಶ್ ಭಂಡಾರಿ ಬದಲಾವಣೆ
ಪುತ್ತೂರು ಮೂಲದ ಪೂರ್ಣೇಶ್ ಭಂಡಾರಿಯವರನ್ನು ಜಿಲ್ಲಾ ಕಾಂಗ್ರೆಸ್ ಸಹಮತದ ಮೇರೆಗೆ ನೇಮಕ ಮಾಡಲಾಗಿತ್ತು. ಆದರೆ ಶಕುಂತಲಾ ಶೆಟ್ಟಿ ಅವರ ಬೆಂಬಲಿಗ ಎಂಬ ಆಧಾರದ ಮೇಲೆ ಪೂರ್ಣೇಶ್ ಭಂಡಾರಿ ಅವರನ್ನು 17ನೇ ದಿನಕ್ಕೆ ಡಿಕೆ ಶಿವಕುಮಾರ್ ಅವರ ಮೇಲೆ ಒತ್ತಡ ಹಾಕಿ ಮಾಜಿ ಸಚಿವ ರಮನಾಥ ರೈ ಅವರನ್ನು ತೆಗೆದುಹಾಕಿದ್ದರು. ನಂತರ ಅವರ ಸ್ಥಾನಕ್ಕೆ ಸಚಿನ್ ಕುಮಾರ್ ಶೆಟ್ಟಿ ರವರನ್ನು ನೇಮಕ ಮಾಡಲಾಗಿತ್ತು.
ಈಗ ಕೆಪಿಸಿಸಿ ಸಚಿನ್ ಕುಮಾರ್ ಶೆಟ್ಟಿ ಅವರನ್ನು ಕೂಡಾ ವಜಾ ಮಾಡಿದೆ. ಅವರ ಸ್ಥಾನಕ್ಕೆ ಹೊಸಬರ ನೇಮಕಕ್ಕೆ ಜಿಲ್ಲಾ ಕಾಂಗ್ರೆಸ್ಗೆ ಹೆಸರುಗಳನ್ನು ಕಳಿಸಲು ಕೆಪಿಸಿಸಿ ಆದೇಶ ಮಾಡಿದೆ ಎಂದು ತಿಳಿದುಬಂದಿದೆ. ಮಿಥುನ್ ರೈ, ಯುಟಿ ಖಾದರ್, ಹರೀಶ್ ಕುಮಾರ್ ಪೂರ್ಣೇಶ್ ಭಂಡಾರಿ ಬದಲಾವಣೆಯನ್ನು ವಿರೋಧಿಸಿದ್ದರು ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ, ಕೆಪಿಸಿಸಿ ಮೆಚ್ಚುಗೆಗೆ ಪಾತ್ರವಾಗಿದ್ದ ದಕ್ಷಿಣ ಕನ್ನಡದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಬಿಜೆಪಿಯ ಮುಂದೆ ಮುಂಡಿಯೂರಿ ಕುಳಿತುಕೊಂಡಿದೆ ಎಂದು ರಾಜಕೀಯ ವಿಶ್ಲೇಷಕರು ಸ್ಪಷ್ಟವಾಗಿ ಅಭಿಪ್ರಾಯ ಪಡುತ್ತಾರೆ. ಯಾವುದೇ ಬಿಜೆಪಿಯ ವಿಷಯಗಳನ್ನು ಸಮರ್ಥವಾಗಿ ಎತ್ತಿಕೊಳ್ಳದ ಕಾಂಗ್ರೆಸ್ ಈಗ ಜಿಲ್ಲೆಯಲ್ಲಿ ಚುನಾವಣಾ ಸಂದರ್ಭದಲ್ಲಿ ಒತ್ತಡಕ್ಕೆ ಸಿಲುಕಿದೆ ಎಂದು ಆಂತರಿಕ ಮೂಲಗಳಿಂದ ತಿಳಿದುಬಂದಿದೆ.
ಒಂದು ಮೂಲಗಳ ಪ್ರಕಾರ ಕೆಪಿಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥರು ಸಹ ಈ ಬೆಳವಣಿಗೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಸಂಚಾಲಕರುಗಳನ್ನು ಕಂಡಿದ್ದ ದಕ್ಷಿಣ ಕನ್ನಡ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ಈಗ ನಾಲ್ಕನೇ ಸಂಚಾಲಕರ ಹುದ್ದೆಗೆ ಹುಡುಕಾಟ ಆರಂಭಿಸಿದ್ದು ದುರಂತ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.ಲೋಕಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆಗೆ ಕೆಪಿಸಿಸಿಯ ಶ್ಲಾಘನೆಗೆ ಪಾತ್ರವಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಹಿನ್ನಡೆಯಿಂದ ಮುಂದಿನ ಚುನಾವಣೆಯಲ್ಲಿ ಬಹಳಷ್ಟು ತೊಂದರೆ ಉಂಟಾಗಲಿದೆ ಎಂದು ಮೂಡಬಿದ್ರೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ : ಮುಸ್ಲಿಂ ಮತಬುಟ್ಟಿಗೆ ಕೈಹಾಕಿದ ಪ್ರಧಾನಿ ಮೋದಿ
ಇದನ್ನೂ ಓದಿ : Tripura-Gateway of Asia: “ತ್ರಿಪುರಾ ದಕ್ಷಿಣ ಏಷ್ಯಾದ ‘ಗೇಟ್‌ವೇ’ ಆಗಲಿದೆ”: ಪ್ರಧಾನಿ ಮೋದಿ
DK District Congress eclipsed social Media 3 moderators changed in 4 years