Rakhi Sawant-Adil Khan: ರಾಖಿ ಸಾವಂತ್ ಗಂಡನ ವಿರುದ್ಧ ರೇಪ್ ಕೇಸ್ ದಾಖಲಿಸಿದ ಇರಾನ್ ಯುವತಿ!

ನಟಿ ರಾಖಿ ಸಾವಂತ್ (Actress Rakhi Sawant Marriage Latest News) ಗಂಡ ಮೈಸೂರು ಮೂಲಕದ ಆದಿಲ್ (Rakhi Sawant Husband Adil Khan case) ಮೇಲೆ ಮೈಸೂರಿನಲ್ಲಿ‌ಎಫ್ಐಆರ್ ದಾಖಲಾಗಿದೆ. ಇರಾನ್ ಮೂಲದ ಮೈಸೂರಿಗೆ ವಿದ್ಯಾಭ್ಯಾಸಕ್ಕೆಂದು ಬಂದಿದ್ದ ಯುವತಿಯೋರ್ವಳು ಆದಿಲ್ ಖಾನ್ (Adil Khan) ತನ್ನನ್ನು ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸ್ ದೂರು ಸಲ್ಲಿಸಿದ್ದಾಳೆ.


ಕಳೆದ ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿ ನಟಿ ರಾಖಿ ಸಾವಂತ್ ಸುದ್ದಿಯಾಗಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಮೈಸೂರು ಮೂಲದ ಆದಿಲ್ ಖಾನ್ ಜೊತೆ ಮದುವೆಯಾದ ರಾಖಿ ಸಾವಂತ್ ಮತ್ತೆ ಸುದ್ದಿಯಲ್ಲಿದ್ದರು. ರಾಖಿ ಸಾವಂತ್ ತಮ್ಮ ಗಂಡನ ವಿರುದ್ಧವೇ ದೂರು ನೀಡಿದ್ದರು. ವಿವಾಹೇತರ ಸಂಬಂಧ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ಹಲವು ರೀತಿಯ ಆರೋಪಗಳನ್ನು ತಮ್ಮ ಗಂಡನ ಮೇಲೆ ರಾಖಿ ಸಾವಂತ್ ಹೊರಿಸಿದ್ದಾರು. ಆದಿಲ್​ನನ್ನು ಪೊಲೀಸರು ಬಂಧಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಈ ಬಂಧನ ಪ್ರಕ್ರಿಯೆಯ ವೇಳೆ ಪೊಲೀಸ್ ಠಾಣೆಯ ಬಳಿ ರಾಖಿ ಸಾವಂತ್ ಪ್ರಜ್ಞೆ ತಪ್ಪಿ ಬಿದ್ದಿದ್ದು ಭಾರೀ ವೈರಲ್ ಆಗಿತ್ತು.

ಗಂಡನಿಂದಲೇ ಬೆತ್ತಲೆ ವಿಡಿಯೋ ಮಾರಾಟ!

ನನ್ನ ಗಂಡ ಮೈಸೂರು ಮೂಲದ ಆದಿಲ್ ಖಾನ್ ನನ್ನ ನಗ್ನ ವಿಡಿಯೋಗಳನ್ನು ತೆಗೆದು ಮಾರಾಟ ಮಾಡಿದ್ದಾನೆ ಎಂಬುದು ರಾಖಿ ಸಾವಂತ್ ದೂರಾಗಿತ್ತು. ಈ ಕುರಿತು ಸೈಬರ್ ಕ್ರೈಂ ಇಲಾಖೆಯಲ್ಲಿ ನನ್ನ ಕೇಸ್ ದಾಖಲಿಸಿದ್ದೇನೆ. ಇದೀಗ ತನು ಎಂಬ ಯುವತಿಯನ್ನು 3ನೇ ಬಾರಿಗೆ ಮದುವೆಯಾಗಲು ಮುಂದಾಗಿದ್ದಾನೆ ಎಂದು ರಾಖಿ ಆರೋಪ ಮಾಡಿದ್ದಾಗಿ ವರದಿಯಾಗಿತ್ತು.

ಇದೀಗ ರಾಖಿ ಸಾವಂತ್ ಗಂಡ ನ್ಯಾಯಾಂಗ ಬಂಧನದಲ್ಲಿ ಇರುವಾಗಲೇ ಆತನ ವಿರುದ್ಧ ಇನ್ನೊಂದು ಪ್ರಕರಣ ದಾಖಲಾಗಿದೆ.

ನಟನೆಗಿಂತ ವಿವಾದಕ್ಕೀಡಾಗಿದ್ದೇ ಹೆಚ್ಚು!

ರಾಖಿ ಸಾವಂತ್ ಅಲಿಯಾಸ್ ಫಾತಿಮಾ ಆದಿಲ್ ಖಾನ್ ದುರನ್ನಿ  ನಟನೆಯ ಮೂಲಕ ಎಷ್ಟು ಫೇಮಸ್ಸೋ ಅದಕ್ಕಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿ ಮಾಡಿದವರು. ನೃತ್ಯಗಾರ್ತಿ, ರೂಪದರ್ಶಿ, ನಟಿ ಮತ್ತು ದೂರದರ್ಶನ ಟಾಕ್ ಶೋ ನಿರೂಪಕಿಯಾಗಿಯೂ ತೆರೆಮೇಲೆ ಕಾಣಿಸಿಕೊಂಡ ಅವರು ಇತ್ತೀಚಿಗಂತೂ ಮದುವೆ-ಗಂಡ ಎಂದೇ ಮಾಧ್ಯಮಗಳಲ್ಲಿ ವೈರಲ್ ಆಗ್ತಿದ್ದಾರೆ.

ಹೆಸರೇ ಮಾದಕತೆಯ ವ್ಯಾಖ್ಯಾನ!

೨೦೦೬ರಲ್ಲಿ ನಡೆದ ಬಿಗ್ ಬಾಸ್ 1 ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಮುನ್ನೆಲೆಗೆ ಬಂದ ರಾಖಿ ಬಿಗ್ ಬಾಸ್ 14 ರಲ್ಲಿ ಫೈನಲಿಸ್ಟ್ ಆಗಿದ್ದರು. ರಾಖಿ ಸಾವಂತ್ ಎಂಬ ಹೆಸರು ಕೇಳಿದರೇ ಮಾದಕ ನೋಟವೊಂದು ಕಣ್ಮುಂದೆ ಬರುವಂತೆ ವ್ಯಕ್ತಿತ್ವ ರೂಪಿಸಿಕೊಂಡ ಸ್ಟಾರ್ ಈಕೆ.

2010 ರಲ್ಲಿ ರಾಖಿ ಇಮ್ಯಾಜಿನ್ ಟಿವಿಯಲ್ಲಿ ಪ್ರಸಾರವಾದ ಟಾಕ್ ಶೋ ರಾಖಿ ಕಾ ಇನ್ಸಾಫ್ ಮೂಲಕವೇ ಭಾರೀ ಸುದ್ದಿಯಾಗಿದ್ದರು. ಈ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದ ಸ್ಪರ್ಧಿಯೋರ್ವನನ್ನು ರಾಖಿ ನಪುಂಸಕ ಎಂದು ಕರೆದಿದ್ದಲ್ಲದೇ, ಆ ಸ್ಪರ್ಧಿ ಮೃತಪಟ್ಟು ಭಾರೀ ವಿವಾದವಾಗಿತ್ತು.

Comments are closed.