ಸೋಮವಾರ, ಏಪ್ರಿಲ್ 28, 2025
HomekarnatakaBJP MLA : ನನ್ನ ಕಾರ್ಯಕರ್ತನ ವಾಹನಕ್ಕೆ ಅಡ್ಡಿಪಡಿಸಬೇಡಿ : ವಿವಾದಕ್ಕೆ ಕಾರಣವಾದ ಬಿಜೆಪಿ ಶಾಸಕನ...

BJP MLA : ನನ್ನ ಕಾರ್ಯಕರ್ತನ ವಾಹನಕ್ಕೆ ಅಡ್ಡಿಪಡಿಸಬೇಡಿ : ವಿವಾದಕ್ಕೆ ಕಾರಣವಾದ ಬಿಜೆಪಿ ಶಾಸಕನ ಶಿಫಾರಸ್ಸು ಪತ್ರ

- Advertisement -

ಬೆಂಗಳೂರು : ಶಾಸಕರು ತಮ್ಮ ಹಿಂಬಾಲಕರಿಗೆ ಹಲವು ಸೌಲಭ್ಯ ಒದಗಿಸಿಕೊಡೋದು ಕಾಮನ್. ಆದರೆ ಇಲ್ಲೊಬ್ಬ ಶಾಸಕರು ಮಾತ್ರ ತಮ್ಮ ಕಾರ್ಯಕರ್ತ , ಹಿಂಬಾಲಕನಿಗಾಗಿ ಪೊಲೀಸರಿಗೆ ಆದೇಶ ಹೊರಡಿಸಿ ವಿವಾದಕ್ಕೆ (BJP MLA recommendation letter controversy )ಸಿಲುಕಿದ್ದಾರೆ. ಶಾಸಕರು ಶಿಫಾರಸ್ಸು ಮಾಡಿದ್ದಾರೆ ಎನ್ನಲಾದ ಪತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬಿಜೆಪಿ ಶಾಸಕನ ಈ ಅವತಾರ ಕಂಡು ಜನರು ವ್ಯಂಗ್ಯವಾಡುತ್ತಿದ್ದಾರೆ.

ಹೌದು, ಗದಗ ಜಿಲ್ಲೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮಪ್ಪ ಎಸ್.ಲಮಾಣಿ ಇಂತಹದೊಂದು ವಿವಾದಕ್ಕೆ ಸಿಲುಕಿದ ಶಾಸಕ. ರಾಮಪ್ಪ ಎಸ್ ಲಮಾಣಿಯವರ ಲೆಟರ್ ಹೆಡ್ ನಲ್ಲಿರೋ ಪೋಟೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪತ್ರವನ್ನು ಎಲ್ಲರೂ ಬಿಜೆಪಿ ಶಾಸಕನ ದರ್ಪ ನೋಡಿ ಎಂದು ಫೇಸ್ ಬುಕ್,ಟ್ವೀಟರ್ ಹಾಗೂ ವಾಟ್ಸಪ್ ನಲ್ಲಿ ಶೇರ್ ಮಾಡ್ತಿದ್ದಾರೆ.

ಶಿಫಾರಸ್ಸು ಪತ್ರದಲ್ಲಿ ಏನಿದೆ ಅನ್ನೋದನ್ನು ಗಮನಿಸೋದಾದರೇ, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳಗಟ್ಟಿ ಗ್ರಾಮದ ಜಿ.ಬಸವರಾಜ್ ನನ್ನ ಮತಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಇವರು ನಮ್ಮ ಪಕ್ಷದ ಕಾರ್ಯಕರ್ತ ಮತ್ತು ನನಗೆ ಚಿರಪರಿಚಿತ. ಇವರು ಮಹೇಂದ್ರ ಬೊಲೆರೋವಾಹನ ( ಎಪಿ 39 ವಿ 3517 ) ಹೊಂದಿದ್ದಾರೆ. ಈ ವಾಹನವನ್ನು ಹಿಡಿಯಬಾರದು ಹಾಗೂ ಮತ್ತು ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದೆಂದು ಈ ಮೂಲಕ ಬರೆದುಕೊಡುವ ಪತ್ರ ಎಂದು ನಮೂದಿಸಲಾಗಿದೆ.

ಈಗ ಈ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಪತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ರೋಶ ವ್ಯಕ್ತವಾಗ್ತಿದ್ದು, ಗದಗದ ಶಾಸಕರ ಕ್ಷೇತ್ರದಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕ್ರಮಕೈಗೊಳ್ಳುವ ಬದಲು ಕಾರ್ಯಕರ್ತರಿಗೆ ಶಿಫಾರಸ್ಸು ಪತ್ರ ಬರೆದುಕೊಡೋದರಲ್ಲಿ ಶಾಸಕರು ಬ್ಯುಸಿಯಾಗಿದ್ದಾರೆ. ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಶಾಸಕರು ಪೊಲೀಸರ ಕರ್ತವ್ಯ ಕ್ಕೂ ಅಡ್ಡಿ ಪಡಿಸುತ್ತಿದ್ದಾರೆ ಎಂದು ಟೀಕಿಸುತ್ತಿದ್ದಾರೆ.

ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಶಾಸಕ ರಾಮಪ್ಪ ಲಮಾಣಿ ಲಭ್ಯವಾಗಿಲ್ಲ. ಆದರೆ ಅವರ ಸಹಾಯಕರು ಪ್ರತಿಕ್ರಿಯೆ ನೀಡಿದ್ದು ಶಾಸಕರು ಈ ರೀತಿ ಪತ್ರ ಬರೆದು ಕೊಟ್ಟಿಲ್ಲ. ಇದೊಂದು ವ್ಯವಸ್ಥಿತ ಸಂಚಾಗಿದ್ದು, ಈ ಬಗ್ಗೆ ನಾಳೆ ಪೊಲೀಸರಿಗೆ ದೂರು ನೀಡಲಾಗುವುದು ಎಂದಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಶಾಸಕರೊಬ್ಬರು ಮತ್ತೊಂದು ವಿವಾದದ ಮೂಲಕ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ : cm asavaraj bommai : ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ಸಿಎಂ ಅಸ್ತು : ಬಿಎಸ್​ವೈ ಆಪ್ತ ಬಣದವರಿಗೆ ಕೊಕ್​​

ಇದನ್ನೂ ಓದಿ : Mallikarjun Kharge Next CM : ಕರ್ನಾಟಕದಲ್ಲಿ ಬಾರಿ ಅತಂತ್ರ ವಿಧಾನಸಭೆ : ಜೆಡಿಎಸ್‌ ಜೊತೆ ಸಂಘರ್ಷ ಬೇಡ ಎಂದ ಹೈಕಮಾಂಡ್, ಖರ್ಗೆ ಸಿಎಂ ?

Don’t disturb my worker’s vehicle, BJP MLA recommendation letter controversy

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular