ಶಿವಮೊಗ್ಗ : Kumar Bangarappa : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈಗಾಗಲೇ ಮೂರು ಪಕ್ಷದಲ್ಲಿಯೂ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ನಡುವೆ ಶಿವಮೊಗ್ಗದ ಸೊರಬ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧವೇ ಬಿ.ಜೆ.ಪಿ ಮುಖಂಡರು, ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಈ ಅಸಮಾಧಾನ ವ್ಯಕ್ತವಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ನಮೋ ಸೊರಬ ವೇದಿಕೆ ಎಂದು ಆರಂಭಿಸಿ ಮೂಲ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭರ್ಜರಿ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ನಮೋ ವೇದಿಕೆಗೆ ಚಾಲನೆ ನೀಡಲಾಗಿದೆ. ಸೊರಬದ ಹೊಸಪೇಟೆ ಬಡಾವಣೆಯ ಗಿರಿಜಾ ಶಂಕರ್ ಸಭಾಭಣದಲ್ಲಿ ಈ ಸಭಾ ಕಾರ್ಯಕ್ರಮ ನಡೆದಿದೆ. ಫಾಣಿ ರಾಜಪ್ಪ, ಬಿಜೆಪಿಯ ಮಾಜಿ ರಾಜ್ಯ ಪರಿಷತ್ ಸದಸ್ಯರು, ನವೋ ವೇದಿಕೆಯ ಅಧ್ಯಕ್ಷರು,
ಗಜಾನನ ರಾವ್, ಸೊರಬ ಬಿಜೆಪಿ ಕೋರ್ ಕಮೀಟಿ ಸದಸ್ಯರು, ಸಾಗರ ಕ್ಷೇತ್ರದ ಪ್ರಭಾರಿ ಎಲ್ ಎಲ್ ಅರವಿಂದ್, ಬಿಜೆಪಿ ಸೊರಬ ಪ್ರಭಾರಿ, ಗುರುಪ್ರಸನ್ನ ಗೌಡ ಬಾಸೂರು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಿರಂಜನ್, ಬಿಜೆಪಿ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ, ಸೊರಬ ಬಿಜೆಪಿ ಮುಖಂಡರಾದ ಆನಂದಪ್ಪ, ರಾಜಶೇಖರ್, ಸತೀಶ್ ಸೇರಿದಂತೆ ಸೊರಬ ತಾಲೂಕು ಬಿಜೆಪಿ ಮುಖಂಡರು ಭಾಗಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧವೇ ಬಿಜೆಪಿ ಮುಖಂಡ ಪದ್ಮನಾಭ್ ಭಟ್ ವಾಗ್ದಾಳಿ ನಡೆಸಿದ್ದಾರೆ. ಸೊರಬದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ಹಿರಿಯರಾದ ಪದ್ಮನಾಭ್ ಭಟ್ ಅವರು ಕುಮಾರ್ ಬಂಗಾರಪ್ಪ ಅವರ ತಂದೆ ತಾಯಿಯನ್ನು ನೋಡಿಕೊಳ್ಳದ ಶಾಸಕ. ಇನ್ನೂ ಇವರು ಬಿಜೆಪಿ ಕಾರ್ಯಕರ್ತರನ್ನು ನೋಡಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ನನ್ನ ವಿರುದ್ಧ ಪಕ್ಷವೂ ಯಾವುದೇ ಕ್ರಮ ಕೈಗೊಂಡರೇ ಕೈಗೊಳ್ಳಲಿ ಎಂದು ಹೇಳಿರುವ ಅವರು ನಾನೊಬ್ಬ ಬಿಜೆಪಿಯ ಪಕ್ಷದ ಹಿರಿಯ ಕಾರ್ಯಕರ್ತನಾಗಿ ಅನೇಕ ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದೇನೆ. ತಂದೆ ತಾಯಿಯನ್ನು ಮದ್ಯರಾತ್ರಿಯೇ ಮನೆಯಿಂದ ಹೊರಹಾಕಿದ ವ್ಯಕ್ತಿ ಶಾಸಕ ಕುಮಾರ್ ಬಂಗಾರಪ್ಪ ಎಂದು ಕಿಡಿ ಕಾರಿದ್ದಾರೆ.
ಇಂತಹ ವ್ಯಕ್ತಿ ನಮ್ಮನ್ನು ಹೇಗೆ ನೋಡಿಕೊಳ್ಳುತ್ತಾನೆಂದು ತಮಗೆ ಹೊಳೆಯಲೇ ಇಲ್ಲ ಎಂದು ಹೇಳಿರುವ ಅವರು ನಮೋ ವೇದಿಕೆಯ ಕಾರ್ಯಕರ್ತನಿಗೆ ಬಿಜೆಪಿ ಮುಂದಿನ ದಿನ ಸೊರಬ ಕ್ಷೇತ್ರದ ಟಿಕೇಟ್ ನೀಡಬೇಕು ಎಂದರು.
ಪಾಣಿ ರಾಜಪ್ಪ ಹಣ ಪಡೆದಿದ್ದಾರೆ ಎನ್ನುವ ಆರೋಪವನ್ನು ಕುಮಾರ್ ಬಂಗಾರಪ್ಪ ಮಾಡಿದ್ದು ಹೀಗಾಗಿ ನವೋ ವೇದಿಕೆಯ ಅಧ್ಯಕ್ಷರಾಗಿರುವ ಪಾಣಿ ರಾಜಪ್ಪ ವೇದಿಕೆಯ ಮೇಲೆ ಕಣ್ಣೀರು ಹಾಕಿದರು. ನಾನು ಕಾರ್ಯಕರ್ತರನ್ನು ಸಂಘಟನೆ ಮಾಡಿರುವೆ ಹೊರತು ನೈಯಾ ಪೈಸೆ ಯಾರಿಂದಲೂ
ಪಡೆದಿಲ್ಲವೆಂದು ತಮ್ಮ ನೋವನ್ನು ಪಾಣಿ ರಾಜಪ್ಪ ಕಾರ್ಯಕರ್ತರ ಮುಂದೆ ಹೊರಹಾಕಿದರು. ಸಂಸದ ಬಿ.ವೈ ರಾಘವೇಂದ್ರ ಎಲ್ಲದಕ್ಕೂ ಸ್ಪಂಧಿಸಿ ಗೌರವ ನೀಡುತ್ತಾರೆ. ಆದ್ರೆ ಶಾಸಕರು ಮಾತ್ರ ವಿನಾಕಾರಣ ನಮ್ಮ ಮೇಲೆ ಆರೋಪ ಮಾಡುತ್ತಾರೆ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಪಾಣಿ ರಾಜಪ್ಪ ಬೇಸರ ಹೊರಹಾಕಿದರು. ಒಟ್ಟಿನಲ್ಲಿ ಚುನಾವಣೆ ಮುನ್ನವೇ ಸೊರಬದಲ್ಲಿ ಬಿ.ಜೆ.ಪಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಬಿ.ಜೆ.ಪಿ ನಾಯಕರು, ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದು ಮುಂದೆ ಇದು ಯಾವ ಬೆಳವಣಿಗೆಗೆ ಕಾರಣವಾಗುತ್ತೆ ಎಂದು ಕಾದು ನೋಡಬೇಕಾಗಿದೆ.
ಇದನ್ನು ಓದಿ : Melukote MLA C.S. Puttaraju :ಸುಮಲತಾರ ಆಣೆ – ಪ್ರಮಾಣದ ಸವಾಲ್ ಸ್ವೀಕರಿಸಿದ ಮೇಲುಕೋಟೆ ಶಾಸಕ ಸಿ.ಎಸ್ ಪುಟ್ಟರಾಜು
ಇದನ್ನೂ ಓದಿ : Panchmasali 2A reservation : ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ಪಂಚಮಸಾಲಿ 2ಎ ಮೀಸಲಾತಿ ಹೋರಾಟ : ನಾಳೆ ಸಿಎಂ ನಿವಾಸದೆದುರು ಧರಣಿ
erupts in Soraba BJP: Resentment against BJP MLA Kumar Bangarappa