wool fever :ಕೊರೊನಾ ವೈರಸ್​ ಬಳಿಕ ರಾಜ್ಯದಲ್ಲಿ ಮತ್ತೊಂದು ಆತಂಕ : ಉಣ್ಣೆ ಜ್ವರದಿಂದ ಬಳಲಿದ ಮಕ್ಕಳು

ವಿಜಯನಗರ : wool fever : ಕೊರೊನಾ ವೈರಸ್ ಲಗ್ಗೆಯಿಟ್ಟ ಬಳಿಕ‌ ಇದೀಗ ಸಾಮೂಹಿಕವಾಗಿ ಯಾವುದೇ ಅನಾರೋಗ್ಯ ಸಮಸ್ಯೆ ಕಾಡಿದ್ರು ಜನ ಬೆಚ್ಚಿ‌ ಬೀಳುತ್ತಿದ್ದಾರೆ. ಈಗಾಗಲೇ ಮಂಗನ ಕಾಯಿಲೆ, ಚಿಕನ್ ಗುನ್ಯಾ, ಟೊಮ್ಯಾಟೊ ಜ್ವರ, ಡೆಂಗ್ಯೂ, ಮಲೇರಿಯಾ, ಇಲಿ ಜ್ವರ ಈ ರೀತಿಯ ಹಲವು ಜ್ವರಗಳಿಂದ ಜನ ಭಯಭೀತರಾಗಿರುವ ಸಮಯದಲ್ಲೇ ಇದೀಗ ಹೊಸದಾದ ಜ್ವರವೊಂದು ಆತಂಕ ಸೃಷ್ಟಿಸಿದೆ.

ವಿಜಯನಗರ ಜಿಲ್ಲೆಯ ಮಕ್ಕಳಲ್ಲಿ ಹೊಸ ಜ್ವರದ ಲಕ್ಷಣ ಪತ್ತೆಯಾಗುತ್ತಿದೆ. ಮಕ್ಕಳಿಗೆ ಉಣ್ಣೆ ಜ್ವರದ ಆತಂಕ ಕಂಡು ಬರುತ್ತಿದ್ದು ವಿಜಯನಗರದ ನಾನಾ ಕಡೆ ಉಣ್ಣೆ ಜ್ವರ ಕಂಡು ಬರುತ್ತಿದೆ. ಈ ಹಿಂದೆ ವಿಜಯಪುರ, ಬಾಗಲಕೋಟೆ ಸೇರಿದಂತೆ ನಾನಾ ಕಡೆ ಮಕ್ಕಳಲ್ಲಿ ಈ ಉಣ್ಣೆ ಜ್ವರ ಕಂಡು ಬಂದಿತ್ತು.‌ಆದ್ರೆ ಇದೀಗ ವಿಜಯನಗರ ಜಿಲ್ಲೆಗೂ ಈ ಉಣ್ಣೆ ಜ್ವರ ಲಗ್ಗೆ ಇಟ್ಟಿದೆ.

ವೈರಲ್ ಫೀವರ್ ಜತೆ ಜತೆಗೆ ಈ ಉಣ್ಣೆ ಜ್ವರ ಕಾಣಿಸಿಕೊಳ್ಳುತ್ತಿದೆ. ಮಕ್ಕಳಿಗೆ ಜ್ವರದ ಜತೆಗೆ ಮೈ ಮೇಲೆ ನಾನ ಆಕಾರದ ಗುಳ್ಳೆಗಳು ಕಂಡು ಬರುತ್ತಿದೆ. ಸದ್ಯ ಕಂಡು ಬರುತ್ತಿರುವ ರೋಗ ಲಕ್ಷಣಗಳು ಉಣ್ಣೇ ಜ್ವರದ ಲಕ್ಷಣ ಎಂದು ಮಕ್ಕಳ‌ ತಜ್ಞರು ಹೇಳುತ್ತಿದ್ದಾರೆ. ಇನ್ನು ಮೇಲ್ನೂಟದಿಂದ ಈ ಜ್ವರ ಅಧಿಕೃತವಾಗಿ ಪತ್ತೆ ಹಚ್ಚೋದು ಕಷ್ಟ ಸಾಧ್ಯ. ಹೀಗಾಗಿ ರಕ್ತ ಪರೀಕ್ಷೆಗೆ ಒಳಪಡಿಸಿದಾಗ ಉಣ್ಣೆ ಜ್ವರದ ಲಕ್ಷಣಗಳು ಪತ್ತೆಯಾಗುತ್ತಿದೆ.

ಕಳೆದ ಎರಡು ವರ್ಷಗಳ ಹಿಂದೆ ಹೊಸಪೇಟೆಯ ಗ್ರಾಮೀಣ ಭಾಗದಲ್ಲಿ ಈ ಉಣ್ಣೆ ಜ್ವರ ಬಂದಿದ್ದ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ‌ ನೀಡಿದೆ. ಸದ್ಯ ವಿಜಯನಗರ ಜಿಲ್ಲೆಯ ಹೊಸಪೇಟೆಯ ಮರಿಯಮ್ಮನ ಹಳ್ಳಿ ಭಾಗದಲ್ಲಿ ಈ ಉಣ್ಣೆ ಜ್ವರ ಕಂಡು ಬಂದಿದೆ. ಇಷ್ಟೆಲ್ಲಾ ಇದ್ದರೂ ಇನ್ನೊಂದು ನೆಮ್ಮದಿಯ ಸಂಗತಿ‌ ಅಂದರೆ ಇದು ಮಾರಣಾಂತಿಕ ಕಾಯಿಲೆ ಅಲ್ಲಾ. ಮಾರಣಾಂತಿಕ‌‌ ಅಲ್ಲದೇ ಇದ್ದರೂ ಪೋಷಕರು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

ಇದನ್ನು ಓದಿ : Panchmasali 2A reservation : ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ಪಂಚಮಸಾಲಿ 2ಎ ಮೀಸಲಾತಿ ಹೋರಾಟ : ನಾಳೆ ಸಿಎಂ ನಿವಾಸದೆದುರು ಧರಣಿ

ಇದನ್ನೂ ಓದಿ : Kumar Bangarappa :ಸೊರಬ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ: ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ದ ಅಸಮಾಧಾನ

Another worry in the state after Corona virus: children suffering from wool fever

Comments are closed.