SM Krishna : ಮಾಜಿ ಸಿಎಂ ಎಸ್.ಎಂ.ಕೃಷ್ಣ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

ಬೆಂಗಳೂರು : ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ಮುಖಂಡ ಎಸ್.‌ಎಂ.ಕೃಷ್ಣ( SM Krishna) ಅವರ ಆರೋಗ್ಯದಲ್ಲಿಏರುಪೇರು ಉಂಟಾಗಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೀವ್ರ ಜ್ವರದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕೃಷ್ಣ ಅವರಿಗೆ ತೀವ್ರ ತಲೆನೋವು, ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎಸ್.ಎಂ.ಕೃಷ್ಣ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಯಾವುದೇ ಆತಂಕವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಜ್ವರ ಕಡಿಮೆಯಾದ ನಂತರದಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿಂದೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸ ಲಾಗಿದೆ ಎಂದು ತಿಳಿದು ಬಂದಿದೆ. 2009 ರಿಂದ 2012 ರ ವರೆಗೆ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಎಸ್.ಎಂ.ಕೃಷ್ಣ ಎಂದು ಕರೆಯಲ್ಪಡುವ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು ರಾಜ್ಯಸಭೆಯಿಂದ ಸಕ್ರಿಯ ಸದಸ್ಯರಾಗಿದ್ದಾರೆ ಮತ್ತು 16 ನೇ ಮುಖ್ಯಮಂತ್ರಿಯೂ ಆಗಿದ್ದರು.

ರಾಜ್ಯಸಭೆಯಿಂದ ಸಕ್ರಿಯ ಸದಸ್ಯರಾಗಿದ್ದಾರೆ ಮತ್ತು ಕರ್ನಾಟಕದ 16 ನೇ ಮುಖ್ಯಮಂತ್ರಿಯೂ ಆಗಿದ್ದರು. ಈ ಎಲ್ಲದರ ಜೊತೆಗೆ, ಅವರು ಮಹಾರಾಷ್ಟ್ರದ 19 ನೇ ರಾಜ್ಯಪಾಲ ರಾಗಿದ್ದರು ಮತ್ತು 2004 ರಿಂದ 2008 ರವರೆಗೆ ಅಧಿಕಾರವನ್ನು ಹೊಂದಿದ್ದರು. ಕೃಷ್ಣ ಅವರು 1962 ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದೊಂದಿಗೆ ರಾಜಕೀಯಕ್ಕೆ ಪ್ರವೇಶಿಸಿದರು. ನಂತರ 1983-84 ಅವಧಿಯಲ್ಲಿ, ಅವರು ಕಾಂಗ್ರೆಸ್ ಪಕ್ಷದಿಂದ ಹೆಚ್ಚು ಪ್ರಭಾವಿತರಾಗಿದ್ದರು ಮತ್ತು ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಮತ್ತು ನಂತರ 1984 ಮತ್ತು 1985 ರ ನಡುವೆ ರಾಜೀವ್ ಗಾಂಧಿಯವರೊಂದಿಗೆ ಪಕ್ಷಕ್ಕೆ ಸೇರಿದರು. ಕೃಷ್ಣ ಅವರು ಜನವರಿ 2017 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದರು ಮತ್ತು ಮಾರ್ಚ್‌ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.

ಇದನ್ನೂ ಓದಿ : ಮಂಗಳೂರಿನ ಹಾಸ್ಟೆಲ್​ನಿಂದ ವಿದ್ಯಾರ್ಥಿನಿಯರು ಎಸ್ಕೇಪ್​ ಪ್ರಕರಣ ಸುಖಾಂತ್ಯ

ಇದನ್ನೂ ಓದಿ : PAYCM ಅಭಿಯಾನ ; ಕಾಂಗ್ರೆಸ್ ನಿಂದ PAYTM ಅಧಿಕೃತ ಟ್ರೇಡ್ ಮಾರ್ಕ್ ಉಲ್ಲಂಘನೆ ?

Former CM SM Krishna admitted to hospital

Comments are closed.