ಬೆಂಗಳೂರು : former cm yadiyurappa: ನಿನ್ನೆ ಶಿಕಾರಿಪುರದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಘೋಷಣೆ ಮಾಡಿದ್ದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ತಮಗೆ ರಾಜಕೀಯವಾಗಿ ಜನ್ಮ ನೀಡಿದ ಶಿಕಾರಿಪುರ ಕ್ಷೇತ್ರವನ್ನು ತಮ್ಮ ಪುತ್ರ ಬಿ.ವೈ ವಿಜಯೇಂದ್ರರಿಗೆ ಬಿಟ್ಟುಕೊಡ್ತಿರೋದಾಗಿ ಹೇಳಿದ್ದರು. ಬಿ.ಎಸ್ ಯಡಿಯೂರಪ್ಪರ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.
ಇಂದು ಈ ವಿಚಾರವಾಗಿ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸ್ಪಷ್ಟನೆ ನೀಡಿರುವ ಬಿ.ಎಸ್ ಯಡಿಯೂರಪ್ಪ , ನಾನು ನಿನ್ನೆ ನೀಡಿದ ಹೇಳಿಕೆಯ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿರುವುದು ನನ್ನ ಗಮನಕ್ಕೆ ಬಂದಿದ್ದೆ. ಆ ಮಾತನ್ನು ನಾನು ಹೇಳಿದ್ದಲ್ಲ. ಶಿಕಾರಿಪುರದ ಜನರು ನನಗೆ ಒತ್ತಾಯ ಮಾಡಿದ್ದಕ್ಕೆ ಆ ಹೇಳಿಕೆ ನೀಡುವಂತಾಯ್ತು. ಪಕ್ಷದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ .
ಮುಂದಿನ ರಾಜ್ಯ ವಿಧಾನಸಭೆಯಲ್ಲಿ ನೀವು ಶಿಕಾರಿಪುರದಿಂದಲೇ ಸ್ಪರ್ಧೆ ಮಾಡಿ ಅಂತಾ ಜನರು ಒತ್ತಾಯ ಮಾಡುತ್ತಿದ್ದರು. ಅದಿಕ್ಕೆ ನಾನು ಮುಂದಿನ ಚುನಾವಣೆಯಿಂದ ನಾನು ಸ್ಫರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದೆ. ಬಳಿಕ ನನ್ನ ಬದಲು ನನ್ನ ಪುತ್ರ ಈ ಕ್ಷೇತ್ರದಿಂದ ನಿಲ್ಲುತ್ತಾರೆ ಎಂದು ಹೇಳಿದ್ದು ಕೇವಲ ಸಲಹೆ ಮಾತ್ರ. ಇದೇ ಅಂತಿಮ ನಿರ್ಧಾರವಲ್ಲ. ಜನರ ಒತ್ತಾಯಕ್ಕೆ ಮಣಿದು ಆ ರೀತಿ ಮಾತನಾಡಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.
ಬಿ.ವೈ ವಿಜಯೇಂದ್ರ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದರೂ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಅವರಿಗೆ ಹಳೆ ಮೈಸೂರಾದರೂ ಓಕೆ, ಶಿಕಾರಿಪುರದಲ್ಲೇ ಟಿಕೆಟ್ ಸಿಕ್ಕರೂ ಓಕೆ. ಹೀಗಾಗಿ ಶಿಕಾರಿಪುರದ ಟಿಕೆಟ್ ಯಾರಿಗೆ ಸಿಗುತ್ತೆ ಅನ್ನೋದು ಹೈಕಮಾಂಡ್ಗೆ ಬಿಟ್ಟ ವಿಚಾರ. ನಾನು ನಾಳೆ ಅಥವಾ ನಾಡಿದ್ದಿಂದ ನಾನು ರಾಜ್ಯಾದ್ಯಂತ ಪ್ರವಾಸ ಆರಂಭಿಸಲಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನಗಳನ್ನು ಗೆಲ್ಲುವಂತೆ ಮಾಡುವುದೇ ನನ್ನ ಗುರಿ ಎಂದು ಹೇಳಿದರು.
ಇದನ್ನು ಓದಿ : poonam pandey : ರಣವೀರ್ ಸಿಂಗ್ ನನ್ನ ಆಟದಲ್ಲಿ ನನ್ನನ್ನೇ ಸೋಲಿಸಿಬಿಟ್ಟರು ಎಂದ ಪೂನಂ ಪಾಂಡೆ
ಇದನ್ನೂ ಓದಿ : Minister Dr. K Sudhakar : ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಗೊಂದಲ : ನಮ್ಮ ಪಕ್ಷ ನೋಡಿ ಕಲಿತುಕೊಳ್ಳಿ ಎಂದ ಸುಧಾಕರ್
former cm yadiyurappa statement about vijayendra in banglore