cm basavaraj bommai :ರಾಜ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ತಿಳಿದಿದೆ : ವಿಪಕ್ಷಗಳಿಗೆ ಬೊಮ್ಮಾಯಿ ಟಾಂಗ್​

ಉಡುಪಿ : ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪುನರ್​ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ, ರಥೋತ್ಸವ , ಚತುಃಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಸಿಎಂ ಬಸವರಾಜ ಬೊಮ್ಮಾಯಿ(cm basavaraj bommai) ಇಂದು ಉಡುಪಿಗೆ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಹಿಂಸೆಗೆ ಇಳಿಯುವುದನ್ನು ನಮ್ಮ ಸರ್ಕಾರ ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.


ಉಡುಪಿಯ ಹೆಲಿಪ್ಯಾಡ್​ನಲ್ಲಿ ಬಂದಿಳಿಯುತ್ತಿದ್ದಂತೆಯೇ ಮಂಗಳೂರಿನಲ್ಲಿ ಲವ್​ ಜಿಹಾದ್​ ಟಾಸ್ಕ್​ ಫೋರ್ಸ್ ನಿರ್ಮಾಣದ ವಿಚಾರವಾಗಿ ಮಾತನಾಡಿದ ಅವರು ಕಾನೂನು ಪ್ರಕಾರ ನಡೆಯುವುದು ಹಾಗೂ ಕಾನೂನನ್ನು ರಕ್ಷಿಸುವುದು ನಮ್ಮ ಕೆಲಸವಾಗಿದೆ. ಪ್ರತಿಯೊಂದಕ್ಕೂ ನಮ್ಮಲ್ಲಿ ಕಾನೂನಿದೆ. ಕೆಲವು ಕಾನೂನುಗಳು ಹಿಂದಿನ ಸರ್ಕಾರಗಳಿಂದ ರಚಿಸಲ್ಪಟ್ಟಿದೆ. ನಾವು ಹಳೆಯ ಕಾನೂನುಗಳನ್ನು ನಿರ್ಲಕ್ಷಿಸುತ್ತಿಲ್ಲ. ಕಾನೂನನ್ನು ರಕ್ಷಿಸುವ ಕಾರ್ಯವನ್ನೇ ಮಾಡುತ್ತಿದ್ದೇವೆ ಎಂದು ಹೇಳಿದರು.


ಸಂವಿಧಾನ ಬದ್ಧವಾಗಿ ರಚನೆಯಾದ ನಮ್ಮ ಸರ್ಕಾರವು ಕಾನೂನು ಸುವ್ಯವಸ್ಥೆ ಹಾಗೂ ಸಮಾನತೆಯ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಹೀಗಾಗಿ ನಿಮ್ಮ ವಿಚಾರಧಾರೆಗಳನ್ನು ಪ್ರಚಾರ ಮಾಡಿದರೆ ನಮಗೆ ಯಾವುದೇ ತೊಂದರೆ ಇಲ್ಲ. ಆದರೆ ವಿಚಾರದ ಪ್ರಚಾರದ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗದುಕೊಂಡಲ್ಲಿ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.


ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸಿಎಂ ಮೌನ ವಹಿಸಿದ್ದಾರೆ ಎಂಬ ಆರೋಪಕ್ಕೂ ಉತ್ತರಿಸಿದ ಅವರು, ನಾವು ಹೆಚ್ಚು ಮಾತನಾಡಬಾರದು. ನಮ್ಮ ಕೆಲಸಗಳು ಮಾತನಾಡುವಂತಿರಬೇಕು. ಯಾವ ಸಂದರ್ಭದಲ್ಲಿ ಎಂತಹ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ತಿಳಿದಿದೆ. ವಿಪಕ್ಷಗಳಿಂದ ನಮಗೆ ಕಲಿಯಬೇಕಾದ್ದು ಏನೂ ಇಲ್ಲ. ನಮ್ಮ ರಾಜ್ಯವನ್ನ ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ ಎಂದು ಟಾಂಗ್​ ನೀಡಿದ್ರು.

ಇದನ್ನು ಓದಿ : congress leader mallikarjuna kharge : ಇಡಿ ವಿಚಾರಣೆಗೆ ಹಾಜರಾದ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ

ಇದನ್ನೂ ಓದಿ : Doctorate for Actor Ravichandran : ನಟ ರವಿಚಂದ್ರನ್​​ಗೆ ಗೌರವ ಡಾಕ್ಟರೇಟ್​ ಘೋಷಣೆ

govt wont tolerate violence if law is taken into its own hands cm basavaraj bommai

Comments are closed.