H.D. Kumaraswamy : YST ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ 30 ಲಕ್ಷ ಲಂಚದ ಆರೋಪ ಮಾಡಿದ ಮಾಜಿಸಿಎಂ ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ವರ್ಗಾವಣೆಯ ದಂಧೆ ನಡೆಯುತ್ತಿದೆ. ಈ ಕುರಿತು ವೈಎಸ್‌ಟಿ ತೆರಿಗೆಯ ಆರೋಪ ಮಾಡಿದ್ದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (H.D. Kumaraswamy) ಅವರು ಇದೀಗ ಸಾಲು ಸಾಲು ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಕಮರ್ಷಿಯಲ್‌ ಟ್ಯಾಕ್ಸ್‌ ಸಿಂಡಿಕೇಟ್‌ ಶುರುವಾಗಿದೆ. ಸಾರಿಗೆ ಇಲಾಖೆಯ ವರ್ಗಾವಣೆಗೆ ಸಿಂಡಿಕೇಟ್‌ ಇದೆ. ಜೊತೆಗೆ ಸಿಎಂ ಕಚೇರಿಯಲ್ಲಿ ಕೆಲಸಕ್ಕಾಗಿ ಸಿಬ್ಬಂದಿಗಳು 30 ಲಕ್ಷ ರೂಪಾಯಿ ಬೇಡಿಕೆ ಇಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವರ್ಗಾವಣೆಗೆ ಸಂಬಂಧಿಸಿದಂತೆ ಸಿಂಡಿಕೇಟ್‌ ಇದೆ. ಕಮರ್ಷಿಯಲ್‌ ಟ್ಯಾಕ್ಸ್‌ ಸಿಂಡಿಕೇಟ್‌ ಶುರುವಾಗಿದೆ. ಸಿಎಂ ಕಚೇರಿಯಲ್ಲಿ ಕೆಲಸ ಮಾಡಿಸಿಕೊಳ್ಳಲು ಶಾಸಕರ ಲೆಟರ್‌ ಹೆಡ್‌ ಕೊಟ್ಟು ಕೆಲಸ ಮಾಡಿಸಿಕೊಡುವಂತೆ ಹೇಳಿದ್ರೆ, ಸಿಎಂ ಹಿಂದೆ ಸುತ್ತುವ ಅಧಿಕಾರಿಗಳೇ ಲೆಟರ್‌ ಕೊಟ್ರೆ ಸಾಕಾಗುವುದಿಲ್ಲ, ಬದಲಾಗಿ 30 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. ಶಾಸಕರ ಪತ್ರ ಕೊಟ್ರೆ ಆಗಲ್ಲ, ಹಣ ಕೊಟ್ರೆ ಮಾತ್ರವೇ ಕೆಲಸ ಆಗುತ್ತೆ ಅಂತಾ ಹೇಳತ್ತಿದ್ದಾರೆ ಎನ್ನುವ ಮೂಲಕ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಕ್ಯೂ ಆರ್‌ ಕೋಡ್‌ ಇಟ್ಟು ಪೇ ಸಿಎಂ ಎಂದು ಹಾಕಿದ್ರಲ್ಲ. ಇದೀಗ ಮಧ್ಯಪ್ರದೇಶದಲ್ಲಿಯೂ ಇಂತಹದ್ದೇ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಅಂದು ಆರೋಪ ಮಾಡುವಾಗ ಕಾಂಗ್ರೆಸ್‌ ನಾಯಕರಿಗೆ ತಾಳ್ಮೆ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ನಾನು ತಾಳ್ಮೆ ಕೆಟ್ಟು ಆರೋಪ ಮಾಡುತ್ತಿಲ್ಲ. ಇರೋದನ್ನು ಹೇಳುತ್ತಿದ್ದೇನೆ. ಸಾಕ್ಷಿ ಕೊಡಿ.. ಸಾಕ್ಷಿ ಕೊಡಿ ಅಂದರೆ ಆಗಲ್ಲ. ದುಡ್ಡುಕೊಟ್ಟವನು ನಾನು ದುಡ್ಡುಕೊಟ್ಟು ಕೆಲಸ ಮಾಡಿಕೊಂಡಿದ್ದೇನೆ ಎಂದು ಹೇಳುತ್ತಾರೆಯೇ? ಮೊನ್ನೆ ಸಿಕ್ಕಿಬಿದ್ದ ತಹಶೀಲ್ದಾರ್‌ ೩ ಕೋಟಿ ಲಂಚ ಕೊಟ್ಟು ಕೆಲಸ ಗಿಟ್ಟಿಸಿಕೊಂಡಿದ್ದ, ಇದೀಗ ೫೦೦ ಕೋಟಿ ಸಾವಿರ ಕೋಟಿ ಹಣ ಸಂಪಾದನೆ ಮಾಡಿದ್ದಾನೆ. ಇದು ನಿರಂತರವಾಗಿ ನಡೆಯುತ್ತಲೇ ಇದೆ. ಎರಡು ರಾಷ್ಟ್ರೀಯ ಪಕ್ಷಗಳು ಈಸ್ಟ್‌ ಇಂಡಿಯಾ ಕಂಪೆನಿ ಇದ್ದಂತೆಯೇ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ : Karnataka Budget Session : ನಾಳೆಯಿಂದ ಕರ್ನಾಟಕ ಬಜೆಟ್ ಅಧಿವೇಶನ ಆರಂಭ : ನಿಷೇಧಾಜ್ಞೆ ಜಾರಿ

ಇದನ್ನೂ ಓದಿ : DK Suresh : ಲೋಕಸಭೆ ಚುನಾವಣೆಯಿಂದ ದೂರ, ರಾಜಕೀಯ ವೈರಾಗ್ಯದ ಮಾತನ್ನಾಡಿದ ಡಿಕೆ ಸುರೇಶ್‌

ಕೆಎಸ್‌ಆರ್‌ಟಿಸಿ ವರ್ಗಾವಣೆಗೆ ಸಿಂಡಿಕೇಟ್‌ ಇದೆ, ಸಬ್‌ ರಿಜಿಸ್ಟ್ರಾರ್‌ ನಲ್ಲಿಯೂ ಸಿಂಡಿಕೇಟ್‌ ಇದೆ. ಇದೀಗ ಹೊಸದಾಗಿ ಕಮರ್ಷಿಯಲ್‌ ಟ್ಯಾಕ್ಸ್‌ಗೂ ಸಿಂಡಿಕೇಟ್‌ ಶುರುವಾಗಿದೆ. ಸಬ್‌ ರಿಜಿಸ್ಟ್ರಾರ್‌ ವರ್ಗಾವಣೆ ಹೇಗೆ ಮಾಡಿದ್ದಾರೆ ಎಂದು ಸಚಿವ ದೇಶಪಾಂಡೆ ಅವರು ಹೇಳಬೇಕು. ಇನ್ನು ಗ್ರಾಮೀಣ ಭಾಗದ ರೈತರಿಗೆ ಅನುಕೂಲ ಕಲ್ಪಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಹಾಲು ಉತ್ಪಾದಕರ ಜಿಲ್ಲಾ ಸಂಘಗಳು ಗ್ರಾಹಕರಿಗೆ ಕೊಡುತ್ತಿರುವ ಹಣವನ್ನು ಕಡಿಮೆ ಮಾಡಿದ್ದಾರೆ. ಈಗಾಗಲೇ ಕಾರಣಕೊಟ್ಟು ಬೆಂಗಳೂರಿನ ಹಾಲು ಉತ್ಪಾದಕರ ಸಂಘ 2 ರೂಪಾಯಿ ಕಡಿಮೆ ಮಾಡಿದೆ ಎಂದು ಆರೋಪಿಸಿದ್ದಾರೆ.

H.D. Kumaraswamy: Former CM HD Kumaraswamy accused of 30 lakhs bribe in CM’s office right after YST.

Comments are closed.