ಮೈತ್ರಿ ಸರ್ಕಾರ ಪತನಗೊಳಿಸಿದ ಬಿಜೆಪಿ ಸೇರ್ಪಡೆಯಾದಾಗಿನಿಂದಲೂ ಬಿಜೆಪಿ ನಾಯಕರ ವಿರುದ್ಧವೇ ಹೇಳಿಕೆ ನೀಡುತ್ತಿರುವ ಹಳ್ಳಿ ಹಕ್ಕಿ ಹೆಚ್. ವಿಶ್ವನಾಥ್ (H VISHWANATH)ಇಂದೂ ಕೂಡ ತಮ್ಮ ಈ ಅಭ್ಯಾಸವನ್ನು ಮುಂದುವರಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಆವರು ಬೆಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ವಿರುದ್ಧ ಹೇಳಿಕೆ ನೀಡಿದ್ದ ಸಚಿವ ಎಸ್.ಟಿ ಸೋಮಶೇಖರ್ ವಿರುದ್ಧವೇ ಹರಿಹಾಯ್ದಿದ್ದಾರೆ.
ಕೆಜಿಎಫ್ ಬಾಬು ಮೇಲೆ ಎಸ್.ಟಿ ಸೋಮಶೇಖರ್ ವೈಯಕ್ತಿಕ ಟೀಕೆ ಮಾಡಿದ್ದು ಸರಿಯಲ್ಲ. ಇದರಿಂದ ಬಾಬು ಮನೆಯವರಿಗೆ ಎಷ್ಟು ನೋವಾಗಿರಬೇಡ. ಮಂತ್ರಿಯಾಗಿ ಎಸ್.ಟಿ ಸೋಮಶೇಖರ್ ಈ ರೀತಿ ಮಾತನಾಡಿದ್ದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ರು.
ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆಗೆ ತಂತ್ರದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗೋಪಾಲ ಕೃಷ್ಣ ಹಾಗೂ ವಿಶ್ವನಾಥ್ ರಿಯಲ್ ಎಸ್ಟೇಟ್ ಗಿರಾಕಿಗಳು. ಅವರಿಬ್ಬರದು ಏನೇನು ಇದೆಯೋ ಯಾರಿಗೆ ಗೊತ್ತು..? ಅದನ್ನೆಲ್ಲ ರಾಜಕೀಯಕ್ಕೆ ಎಳೆತಂದು ಏನೇನೋ ಮಾತನಾಡುತ್ತಿದ್ದಾರೆ ಎಂದು ಗುಡುಗಿದ್ರು.
ಇನ್ನು ಇದೇ ವೇಳೆ ಸಿದ್ದರಾಮಯ್ಯ, ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ವಿರುದ್ಧವೂ ಆಕ್ರೋಶ ಹೊರ ಹಾಕಿದ ಅವರು, ಬಜಾರ್ ಅಂದರೆ ಏನು ಅಂತಾ ಸದಸ್ಯರು ಕೇಳಿದ್ದಾರೆ. 50 ಸಾವಿರ ಮಂಡ್ಯದಲ್ಲಿ, ಹಾಸನದಲ್ಲಿ 1 ಲಕ್ಷ ಅಂತಾರೆ. ಮೈಸೂರಿನಲ್ಲಿ ಎಷ್ಟು ಅಂತಾ ಕೇಳ್ತಿದ್ದಾರೆ. ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಕೇವಲ ಕೆಲಸಕ್ಕೆ ಬಾರದ ಮಾತುಗಳನ್ನೇ ಆಡುತ್ತಿದ್ದಾರೆ. ಇವೆಲ್ಲ ರಾಜ್ಯದ ಮೂವರು ಮುಖ್ಯ ಮುಖಂಡರು ಆಡುವ ಮಾತುಗಳಾ..? ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಕಿವಿಹಿಂಡಿದ್ರು.
ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಪರಸ್ಪರ ಭೇಟಿ ವಿಚಾರವಾಗಿ ಮಾತನಾಡಿದ ವಿಶ್ವನಾಥ್, ಮೋದಿ ಕುಟುಂಬ ರಾಜಕಾರಣವನ್ನು ಗೆದ್ದಲಿನ ರೀತಿ ಕಾಡುತ್ತಿದ್ದಾರೆ ಎಂದರು. ಹಾಲಿ ಪ್ರಧಾನಿ ಹಾಗೂ ಮಾಜಿ ಪ್ರಧಾನಿ ಸೌಜನ್ಯಯುತವಾಗಿ ಭೇಟಿಯಾಗಿದ್ದಾರೆ. ಇದನ್ನೂ ರಾಜಕಾರಣ ಮಾಡ್ತಿದ್ದಾರೆ. ಕೆಲವರು ಮೋದಿಯಿಂದ ಸೌಜನ್ಯದ ಪಾಠ ಕಲಿಯಬೇಕಿದೆ. ಸುಮ್ಮನೇ ಏಕವಚನದಲ್ಲಿ ಮಾತನಾಡೋದಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ರು.
H Vishwanath, outraged against political leaders
ಇದನ್ನು ಓದಿ :Tawar Chand Gehlot : ಉಡುಪಿ ಶ್ರೀ ಕೃಷ್ಣ, ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್
