ಭಾನುವಾರ, ಏಪ್ರಿಲ್ 27, 2025
Homepoliticshd kumaraswamy : ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ಜೆಡಿಎಸ್​​ ಪ್ರದರ್ಶನದ ಬಗ್ಗೆ ಹೆಚ್​ಡಿಕೆ ಸಮರ್ಥನೆ

hd kumaraswamy : ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ಜೆಡಿಎಸ್​​ ಪ್ರದರ್ಶನದ ಬಗ್ಗೆ ಹೆಚ್​ಡಿಕೆ ಸಮರ್ಥನೆ

- Advertisement -

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಜೆಡಿಎಸ್​​ಗೆ ತೀವ್ರ ಮುಖಭಂಗವಾಗಿದೆ. ಪಟ್ಟಣ ಪಂಚಾಯತ್​ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿರುವ ಜೆಡಿಎಸ್​​ ಪುರಸಭೆ ಚುನಾವಣೆಯಲ್ಲಿ ಕೇವಲ 1 ಕಡೆ ಮಾತ್ರ ಗೆಲುವಿನ ನಗೆ ಬೀರಿದೆ. ಆದರೆ ಈ ಸೋಲನ್ನು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ (HD Kumaraswamy) ಈ ರೀತಿಯಾಗಿ ಸಮರ್ಥಿಸಿಕೊಂಡಿದ್ದಾರೆ.

ಬಿಡದಿ ಪುರಸಭಾ ಚುನಾವಣೆ ಫಲಿತಾಂಶದ ಬಳಿಕ ಮಾತನಾಡಿದ ಹೆಚ್​ಡಿಕೆ ರಾಜಕೀಯವಾಗಿ ನನಗೆ ಜನ್ಮ ನೀಡಿದ ಬಿಡದಿ ಕ್ಷೇತ್ರದ ಜನತೆ ನನ್ನನ್ನು ಆಶೀರ್ವದಿಸಿದ್ದಾರೆ. ಪುರಸಭೆಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ನೀಡುವ ಮೂಲಕ ನಮಗೆ ಮಾನಸಿಕವಾಗಿ ಶಕ್ತಿ ತುಂಬಿದ್ದಾರೆ. 2023ರ ಗುರಿ ಸಾಧಿಸಲು ನಮ್ಮನ್ನು ಸನ್ನದ್ಧರನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗುರಿ ತಲುಪಲು ಎಲ್ಲಾ ರೀತಿಯ ಪ್ರಯತ್ನ ಮಾಡಲಿದ್ದೇವೆ. ಸಂಕ್ರಾಂತಿ ಬಳಿಕ 1 ವರ್ಷಗಳ ಕಾಲ ಜನರ ವಿಶ್ವಾಸವನ್ನು ಸಂಪಾದಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ. ಜೆಡಿಎಸ್​ ಮುಳುಗಿ ಹೋಯ್ತು ಎನ್ನುವವರಿಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂದು ಹೇಳಿದರು. ಬಿಡದಿ ಪುರಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿತ್ತು. ಕಾಪುವಿನಲ್ಲಿ ಜೆಡಿಎಸ್​ ಖಾತೆ ತೆರೆದಿದೆ ಎಂಬುದೇ ಸಂತಸ ತಂದಿದೆ. ವಿಜಯಪುರ, ಚಿಕ್ಕಮಗಳೂರು, ರಾಯಚೂರು, ಶಿರಾದಲ್ಲಿಯೂ ಜೆಡಿಎಸ್​ ಉತ್ತಮ ಪೈಪೋಟಿ ನೀಡಿದೆ ಎಂದು ಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ 2021 : ಕಾಂಗ್ರೆಸ್​​​ಗೆ ಮೇಲುಗೈ, ಮುಖಭಂಗ ಅನುಭವಿಸಿದ ಬಿಜೆಪಿ

ಮೂರೂ ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವೆನಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಡಿಸೆಂಬರ್​ 27ರಂದು ಚಿಕ್ಕಮಗಳೂರು, ಗದಗ-ಬೆಟಗೇರಿ, ತುಮಕೂರು ಜಿಲ್ಲೆಯ ಶಿರಾ, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ ಹಾಗೂ ವಿಜಯಪುರ ಜಿಲ್ಲೆಯ ಹೊಸಪೇಟೆ ನಗರಸಭೆಯ ಫಲಿತಾಂಶ ಹೊರಬಿದ್ದಿದ್ದು ಯಾವ್ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲುವಿನ ನಗೆ ಬೀರಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

19, ಪುರಸಭೆ ಹಾಗೂ 34 ಪಟ್ಟಣ ಪಂಚಾಯ್ತಿಗಳಿಗೆ ಒಟ್ಟು 1185 ವಾರ್ಡ್​ಗಳಲ್ಲಿ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಒಟ್ಟು 4,961 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. 34 ಪಟ್ಟಣ ಪಂಚಾಯ್ತಿ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್​ 16 ಕಡೆಗಳಲ್ಲಿ ಗೆಲುವಿನ ನಗೆ ಬೀರಿದೆ. ಆರು ಕಡೆಗಳಲ್ಲಿ ಕಮಲ ಅರಳಿದರೆ 14 ಕಡೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ದಿಗ್ವಿಜಯ ಸಾಧಿಸಿದ್ದಾರೆ. ಪಟ್ಟಣ ಪಂಚಾಯ್ತಿ ಚುನಾವಣೆಯ ಒಂದೇ ಒಂದು ಕಡೆಯಲ್ಲಿಯೂ ಗೆಲುವು ಸಾಧಿಸಿದ ಜೆಡಿಎಸ್​ ತೀವ್ರ ಮುಖಭಂಗ ಅನುಭವಿಸಿದೆ.

ಇನ್ನು ಇತ್ತ 19 ಪುರಸಭೆ ಚುನಾವಣಾ ಫಲಿತಾಂಶದಲ್ಲಿಯೂ ಕಾಂಗ್ರೆಸ್​ ಮೇಲುಗೈ ಸಾಧಿಸಿರೋದು ವಿಶೇಷ. ಹೌದು..! ಕಾಂಗ್ರೆಸ್​ 8 ಕಡೆಗಳಲ್ಲಿ ವಿಜಯದ ಮಾಲೆ ಹಾಕಿಸಿಕೊಂಡರೆ ಬಿಜೆಪಿ ಆರು , ಜೆಡಿಎಸ್​ 1 ಹಾಗೂ 4 ಕಡೆಗಳಲ್ಲಿ ಅತಂತ್ರ ಫಲಿತಾಶ ವರದಿಯಾಗಿದೆ.

ಇನ್ನು 5 ನಗರಸಭೆಗಳಿಗೂ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಮೂರು ಕಡೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ 2 ಕಡೆಗಳಲ್ಲಿ ಅಂದರೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆ, ತುಮಕೂರು ಜಿಲ್ಲೆಯ ಶಿರಾ ನಗರಸಭೆ ಫಲಿತಾಶ ಅತಂತ್ರವಾಗಿದೆ. ಇನ್ನುಳಿದಂತೆ ಬೆಂಗಳೂರಿನ ಹೆಬ್ಬಗೋಡಿ, ಚಿಕ್ಕಮಗಳೂರು ಹಾಗೂ ಗದಗ – ಬೆಟಗೇರಿ ನಗರಸಭೆಗಳಲ್ಲಿ ಕೇಸರಿ ಬಾವುಟ ಹಾರಿದೆ.

34 ಪಟ್ಟಣ ಪಂಚಾಯ್ತಿಗಳ ಪೈಕಿ 8 ಪಟ್ಟಣ ಪಂಚಾಯ್ತಿಗಳ 19 ವಾರ್ಡ್​ಗಳಲ್ಲಿ ಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.ಹುಬ್ಬಳ್ಳಿಯ ಅರಬಾವಿ ಪಟ್ಟಣದ 1 ವಾರ್ಡ್​, ನಲತವಾಡದ 2 ವಾರ್ಡ್​ಗಳಲ್ಲಿ ಇಬ್ಬರು ಹಾಗೂ ಹುಬ್ಬಳ್ಳಿ ಪಟ್ಟಣದಲ್ಲಿಯೇ 3 ವಾರ್ಡ್​ಗಳಲ್ಲಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಕೊಪ್ಪಳದ ತಾವರೆಗೇರಾದ 2ವಾರ್ಡ್, ಭಾಗ್ಯ ನಗರದ 2 ವಾರ್ಡ್​, ಜಾಲಿ, ಕಮತಗಿ ಹಾಗೂ ಬೆಳಗಲಿಯಲ್ಲಿ ಒಂದೊಂದು ವಾರ್ಡ್​ಗಳಲ್ಲಿ ಅವಿರೋಧ ಆಯ್ಕೆಯಾಗಿದೆ.

ಇದನ್ನು ಓದಿ: Mukesh Ambani : ರಿಲಯನ್ಸ್​ ಕಂಪನಿಗೆ ಶೀಘ್ರದಲ್ಲೇ ಹೊಸ ಮುಖ್ಯಸ್ಥ: ಮಹತ್ವದ ಸುಳಿವು ನೀಡಿದ ಮುಕೇಶ್​ ಅಂಬಾನಿ

ಇದನ್ನೂ ಓದಿ : Arun singh warns ministers : ರಾಜ್ಯದ ಸಚಿವರುಗಳಿಗೆ ಖಡಕ್​ ವಾರ್ನಿಂಗ್​ ಕೊಟ್ಟ ಅರುಣ್​ ಸಿಂಗ್​..!

hd kumaraswamy statement about local body election result

RELATED ARTICLES

Most Popular