Android 13 Features Leak : ಆ್ಯಂಡ್ರಾಯ್ಡ್ 13ರ ಫೀಚರ್‌ಗಳು ಲೀಕ್; ಹೊಸ ಅಪ್‌ಡೇಟ್‌ನಲ್ಲಿ ಇರುವ ವೈಶಿಷ್ಟ್ಯಗಳನ್ನು ತಿಳಿಯಿರಿ

ಅನೇಕ ಸ್ಮಾರ್ಟ್‌ಫೋನ್‌ಗಳಿಗೆ ಇನ್ನೂ ಆ್ಯಂಡ್ರಾಯ್ಡ್ 12 (Android 12) ಅಪ್ಡೇಟ್ ಬಂದಿಲ್ಲ. ಆದರೂ ಸಹ ಆ್ಯಂಡ್ರಾಯ್ಡ್(Android 13) ಗೆ ಸಂಬಂಧಿಸಿದ ವಿವರಗಳು ಆನ್‌ಲೈನ್‌ನಲ್ಲಿ ಲೀಕ್ ಆಗಲು ಪ್ರಾರಂಭಿಸಿವೆ. ಎಕ್ಸ್‌ಡಿಎ ಡೆವಲಪರ್‌ಗಳು ಹಂಚಿಕೊಂಡಿರುವ ಲೀಕ್ ಸ್ಕ್ರೀನ್‌ಶಾಟ್‌ಗಳು (Android 13 Features Leak) ಮುಂದಿನ ಆ್ಯಂಡ್ರಾಯ್ಡ್ ಆವೃತ್ತಿಗೆ (Next Android Update) ಬರಬಹುದಾದ ಪ್ರಮುಖ ಹೊಸ ವೈಶಿಷ್ಟ್ಯಗಳನ್ನು ತೋರಿಸುತ್ತವೆ.

ಆ್ಯಂಡ್ರಾಯ್ಡ್ 13ರಲ್ಲಿ ನೋಟಿಫಿಕೇಶನ್‌ಗಳನ್ನು ಪರ್ಮಿಷನ್ ಸೆಕ್ಷನ್‌ನಲ್ಲಿ ಸೇರಿಸಬಹುದಾಗಿದೆ. ಆಂಡ್ರಾಯ್ಡ್ 13 ನಲ್ಲಿ ಹೊಸ ಅಪ್ಲಿಕೇಶನ್‌ಗಳನ್ನು ಇನ್ಸ್ಟಾಲ್ ಮಾಡಿದಾಗ ಮತ್ತು ಮೊದಲ ಬಾರಿಗೆ ಲಾಂಚ್ ಮಾಡಿದಾಗ, ಕ್ಯಾಮರಾ, ಮೈಕ್,ಲೋಕೇಶನ್, ಸ್ಟೋರೇಜ್, ಕಾಂಟ್ಯಾಕ್ಟ್, ಫೋನ್ ಮತ್ತು ಕ್ಯಾಲೆಂಡರ್ ಅನ್ನು ಬಳಸಲು ಅಪ್ಲಿಕೇಶನ್‌ಗಳು ಪರ್ಮಿಷನ್ ಕೇಳುವಂತೆಯೇ ಅವರು ನೋಟಿಫಿಕೇಶನ್ ಕಳುಹಿಸಲು ಬಳಕೆದಾರರು ಅನುಮತಿಯನ್ನು ರಿಕ್ವೆಸ್ಟ್ ಮಾಡಬಹುದು.

ಆ್ಯಂಡ್ರಾಯ್ಡ್ 12 ವರೆಗೆ, ಅಪ್ಲಿಕೇಶನ್‌ಗಳು ಬಳಕೆದಾರರ ಪ್ರಾಂಪ್ಟ್ ಇಲ್ಲದೆ ನೋಟಿಫಿಕೇಶನ್ ಕಳುಹಿಸಬಹುದಾಗಿತ್ತು.ಯೂಸರ್ಸ್ ತಮ್ಮ ಮೊಬೈಲ್ ನೋಟಿಫಿಕೇಶನ್ ಸೆಟಿಂಗ್ಸ್ ಮೂಲಕ ನೋಟಿಫಿಕೇಶನ್ ಹೈಡ್ ಮಾಡಬಹುದಿತ್ತು. ಆದರೆ ಅಪ್ಲಿಕೇಶನ್ ನೋಟಿಫಿಕೇಶನ್ ರಿಸ್ಟ್ರಿಕ್ಟ್ ಮಾಡಲು ಸಾಧ್ಯವಿರಲಿಲ್ಲ.

ಆ್ಯಂಡ್ರಾಯ್ಡ್ 13ರ ಇನ್ನೊಂದು ದೊಡ್ಡ ವಿಶೇಷತೆ ಎಂದರೆ, ಇದರಲ್ಲಿ ಲಾಂಗ್ವೇಜ್ ಯುಸೇಜ್ ಕಂಟ್ರೋಲ್ ಮಾಡಬಹುದು. ಈ ಹಿಂದೆ “ಲಾಂಗ್ವೇಜ್ ಅಂಡ್ ಇನ್ಪುಟ್” ಸೆಟಿಂಗ್ಸ್ ಮೂಲಕ ಲಾಂಗ್ವೇಜ್ ಚೇಂಜ್ ಮಾಡಬಹುದಾಗಿತ್ತು. ಆದ್ರೆ ಇನ್ನು ಮುಂದೆ ಪ್ರತಿಯೊಂದು ಅಪ್ಲಿಕೇಶನ್ ಲಾಂಗ್ವೇಜ್ ಸೆಟಿಂಗ್ಸ್ ಆಯಾ ಅಪ್ಲಿಕೇಶನ್ ಮೂಲಕವೇ ಚೇಂಜ್ ಮಾಡಬಹುದು.

ಆ್ಯಂಡ್ರಾಯ್ಡ್ ಅಥೋರಿಟಿ ವರದಿ ಪ್ರಕಾರ, ಆಂಡ್ರಾಯ್ಡ್ 13 ಬ್ಲೂಟೂತ್ ಎಲ್ಇ ಆಡಿಯೋ ಸಪೋರ್ಟ್ ಹೊಂದಲಿದೆ. ಇದು ಹೊಸ ಮಾದರಿಯ ಆಡಿಯೋ ಸಿಸ್ಟಮ್ ಆಗಿದ್ದು, ಹೆವಿ ಬ್ಯಾಟರಿ ಕಂಸಂಶನ್ ಅನ್ನು ತಡೆಯುತ್ತದೆ. ಇದರ ಜೊತೆಗೆ ಹಿಯರಿಂಗ್ ಏಯ್ಡ್ ಹಾಗೂ ಹೆಡ್ ಸೆಟ್ ಜೊತೆ ಪರ್ಫೆಕ್ಟ್ ಆಗಿ ಕನೆಕ್ಟ್ ಆಗಲಿದೆ.

ಸದ್ಯದಲ್ಲೇ ಗೂಗಲ್ ತನ್ನ ಆ್ಯಂಡ್ರಾಯ್ಡ್13 ಆವೃತ್ತಿಯನ್ನು ಮೇ 2022ನಲ್ಲಿ ರಿಲೀಸ್ ಮಾಡಿ ಸೆಪ್ಟೆಂಬರ್ 2022ರಲ್ಲಿ ಲಾಂಚ್ ಮಾಡಲಿದೆ. ಇದರ ಇಂಟರ್ನಲ್ ಕೋಡ್ “TIRAMISU” ಎಂದು ವರದಿ ಹೇಳಿದೆ. ಈಗಾಗಲೇ ಇದರ ಫೀಚರ್ಸ್ ಲೀಕ್ ಆಗಿರುವುದರಿಂದ, ಡೆವಲಪರ್ಸ್ ಲಾಂಚ್ ಮಾಡುವ ಮುನ್ನ ಫೀಚರ್ಸ್ ಚೇಂಜ್ ಮಾಡುವ ಸಾಧ್ಯತೆಗಳಿವೆ.

ಇದನ್ನೂ ಓದಿ: Smartphone Battery life : ಸ್ಮಾರ್ಟ್‌ಫೋನ್ ಚಾರ್ಜ್ ಉಳಿಸಲು ಸ್ಮಾರ್ಟ್ ಸಲಹೆಗಳು

ಇದನ್ನೂ ಓದಿ: Google Map Without Internet : ಇಂಟರ್‌ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಬಹುದು ! ಅದು ಹೇಗೆ ಎಂಬ ಮಾಹಿತಿ ತಿಳಿಯಿರಿ

(Android 13 Features Leak screenshots here is the first look and all specification)

Comments are closed.