ಸೋಮವಾರ, ಏಪ್ರಿಲ್ 28, 2025
Homekarnatakaಪತ್ನಿ ಭವಾನಿಗೆ ಟಿಕೇಟ್ ನೀಡದಿದ್ದರೇ ಎಚ್.ಡಿ.ರೇವಣ್ಣ ಬಂಡಾಯ: ಎಚ್.ಡಿ.ಕುಮಾರಸ್ವಾಮಿ ಮಾದರಿಯಲ್ಲೇ ಎರಡು ಕ್ಷೇತ್ರದಲ್ಲಿ ಸ್ಪರ್ಧೆ

ಪತ್ನಿ ಭವಾನಿಗೆ ಟಿಕೇಟ್ ನೀಡದಿದ್ದರೇ ಎಚ್.ಡಿ.ರೇವಣ್ಣ ಬಂಡಾಯ: ಎಚ್.ಡಿ.ಕುಮಾರಸ್ವಾಮಿ ಮಾದರಿಯಲ್ಲೇ ಎರಡು ಕ್ಷೇತ್ರದಲ್ಲಿ ಸ್ಪರ್ಧೆ

- Advertisement -

ಹಾಸನ : ರಾಜಕೀಯ ಅಂದ್ರೇ ಅದು ತಂತ್ರ ಹಾಗೂ ಪ್ರತಿತಂತ್ರಗಳ ಆಟ. ಅದರಲ್ಲೂ ಚುನಾವಣೆ, ಟಿಕೇಟ್, ಸ್ಥಾನಮಾನ ಅಂತ ಬಂದಾಗ ಎಲ್ಲರೂ ಚಾಣಾಕ್ಯರಂತೆ ದಾಳ ಉರುಳಿಸೋದು ಕಾಮನ್. ಈಗ ಈ ಸಾಲಿಗೆ ಮಾಜಿ ಸಚಿವ ಹಾಗೂ ದೇವೆಗೌಡರ ಪುತ್ರ ಎಚ್.ಡಿ.ರೇವಣ್ಣ (HD Revanna) ಕೂಡ ಹೊರತಲ್ಲ. ಪತ್ನಿ ಟಿಕೇಟ್ ಗಾಗಿ ಪಟ್ಟು ಹಿಡಿದಿರೋ ರೇವಣ್ಣ ಸೀಟು ಸಿಗದಿದ್ದರೇ ಎಚ್ಡಿಕೆ ಹಾದಿಯನ್ನೇ ತುಳಿಯಲು ನಿರ್ಧರಿಸಿದ್ದಾರೆ. ಹಾಗಿದ್ದರೇ ರೇವಣ್ಣ ತಲೆಯಲ್ಲಿ ಓಡ್ತಿರೋ ಪ್ಲ್ಯಾನ್ ಏನು ? ಇಲ್ಲಿದೆ ಡಿಟೇಲ್ಸ್.

ಮಾಜಿ ಸಚಿವ ರೇವಣ್ಣ ಈ ಭಾರಿ ತವರು ಜಿಲ್ಲೆ ಹಾಸನದಿಂದ ಪತ್ನಿ ಭವಾನಿ ರೇವಣ್ಣ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕರೆತರಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ ಫ್ಯಾಮಿಲಿ ಪಕ್ಷ, ಕುಟುಂಬ ರಾಜಕೀಯ ಎಂಬ ಹೇಳಿಕೆಗಳಿಂದ ಬೇಸತ್ತಿರೋ ಜೆಡಿಎಸ್ ಹಾಗೂ ಎಚ್ಡಿಕೆ ಈ ಭಾರಿ ಭವಾನಿ ರೇವಣ್ಣ ಅವರಿಗೆ ಹಾಸನ ಕ್ಷೇತ್ರದ ಟಿಕೇಟ್ ನೀಡಲು ನಿರಾಕರಿಸುತ್ತ ಬಂದಿದ್ದಾರೆ.

ಇದರಿಂದ ಕಂಗೆಟ್ಟಿರುವ ರೇವಣ್ಣ ಪತ್ನಿಗಾಗಿ ಪ್ಲ್ಯಾನ್ ಬಿ ಯೋಚನೆಯಲ್ಲಿದ್ದಾರೆ. ಅಂದ್ರೇ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದ ಹಾಸನ ಹಾಗೂ ತಮ್ಮ ಸ್ವಕ್ಷೇತ್ರ ಹೊಳೆನರಸೀಪುರ ಹೀಗೆ ಎರಡೂ ಕಡೆಗಳಲ್ಲೂ ತಾವೇ ಸ್ಪರ್ಧಿಸಲು ನಿರ್ಧರಿಸಿದ್ದಾರಂತೆ. ಈ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ರಾಮನಗರ ಹಾಗೂ ಚೆನ್ನಪಟ್ಟಣ ಎರಡೂ ಕಡೆ ತಾವೇ ಸ್ಪರ್ಧಿಸಿದ್ದರು. ಸ್ಪರ್ಧಿಸಿ ಗೆದ್ದ ಬಳಿಕ ಒಂದು ಸ್ಥಾನವನ್ನು ಪತ್ನಿಗೆ ಬಿಟ್ಟುಕೊಟ್ಟಿದ್ದರು. ಈ ವೇಳೆ ಯಾವುದೇ ಆಕ್ಷೇಪ ಅಥವಾ ವಿರೋಧ ಕೇಳಿಬಂದಿರಲಿಲ್ಲ.

ಹೀಗಾಗಿ ಇದೇ ಮಾದರಿಯನ್ನು ಅನುಸರಿಸಲು ರೇವಣ್ಣ ಮುಂದಾಗಿದ್ದಾರಂತೆ. ಈಗಾಗಲೇ ರೇವಣ್ಣ ಪತ್ನಿ ಭವಾನಿಗೆ ಟಿಕೇಟ್ ನೀಡುವಂತೆ ಎಚ್ಡಿಕೆ ಅವರನ್ನು ಕೇಳಿದ್ದು, ಆದರೆ ಕುಟುಂಬ ರಾಜಕಾರಣದ ನೆಪವೊಡ್ಡಿ ಕುಮಾರಸ್ವಾಮಿ ಟಿಕೇಟ್ ನೀಡಲು ನಿರಾಕರಿಸಿದ್ದಾರಂತೆ. ಅಲ್ಲದೇ ಎಚ್.ಪಿ.ಸ್ವರೂಪ್ ಗೆ ಟಿಕೇಟ್ ನೀಡುವುದಾಗಿಯೂ ಎಚ್ಡಿಕೆ ಹೇಳಿದ್ದಾರಂತೆ.
ಇದೇ ಕಾರಣಕ್ಕೆ ರೇವಣ್ಣ ಪ್ಲ್ಯಾನ್ ಎ ಬದಲು ಬಿ ಗೆ ಬಂದಿದ್ದಾರೆ ಎನ್ನಲಾಗ್ತಿದೆ. ಆದರೆ ರೇವಣ್ಣ ಪತ್ನಿಗೆ ಒಂದು ವಿಧಾನಸಭಾ ಕ್ಷೇತ್ರವನ್ನೇ ಬಿಟ್ಟುಕೊಡಲು ಸಿದ್ಧವಾಗದ ಎಚ್ ಡಿಕೆ ರೇವಣ್ಣನವರು ಎರಡೆರಡು ಕ್ಷೇತ್ರ ದಿಂದ ಸ್ಪರ್ಧಿಸೋದನ್ನು ಒಪ್ಪಿಕೊಳ್ಳುತ್ತಾ? ಅವಕಾಶ ನೀಡುತ್ತಾ ಅನ್ನೋದು ಸದ್ಯದ ಕುತೂಹಲ. ಒಟ್ಟಿನಲ್ಲಿ ಈ ಭಾರಿ ಶತಾಯ ಗತಾಯ ಅಧಿಕಾರ ಹಿಡಿಯೋ ಕನಸಿನಲ್ಲಿರೋ ಜೆಡಿ ಎಸ್ ಗೆ ಫ್ಯಾಮಿಲಿ ಪಾಲಿಟಿಕ್ಸ್ ಮುಳುವಾಗೋ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ.

ಇದನ್ನೂ ಓದಿ : H D Kumaraswamy :ಕುಮಾರಸ್ವಾಮಿ ಪ್ರಲ್ಹಾದ್ ಜೋಶಿಯನ್ನುದ್ದೇಶಿಸಿ ಹೇಳಿದ ದೇಶಸ್ಥ ಬ್ರಾಹ್ಮಣರು ಅಂದ್ರೆ ಯಾರು?

ಇದನ್ನೂ ಓದಿ : BS Yeddyurappa : ಮತ್ತೆ ಬಿಜೆಪಿ ಗೆ ಅನಿವಾರ್ಯವಾದ ಬಿ.ಎಸ್.ಯಡಿಯೂರಪ್ಪ: ಪ್ರಚಾರದ ಹೊಣೆ ರಾಜಾಹುಲಿ ಹೆಗಲಿಗೆ

HD Revanna contest two constituencies like HD Kumaraswamy for Giving MLA Ticket Bhavani Revanna

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular