HDK couple :ಬಿಜೆಪಿ ಆಡಳಿತವಿದ್ದರೂ ವಿಶೇಷ ಅನುದಾನ ಪಡೆಯುವಲ್ಲಿ ಸಕ್ಸಸ್ ಆದ ಎಚ್ಡಿಕೆ ದಂಪತಿ

HDK couple : ಮಾಜಿ ಸಿ.ಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ ರಾಮನಗರ ಹಾಗೂ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರೋದು ನಿಮಗೆ ಗೊತ್ತೆ ಇದೆ. ಆದ್ರೆ ಇದೀಗ ಎಚ್.ಡಿ.ಕೆ ದಂಪತಿ ತಮ್ಮ ಕ್ಷೇತ್ರಗಳಿಗೆ ತಲಾ ಐದು ಕೋಟಿ ರೂ.ಗಳ ವಿಶೇಷ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಅಭಿವೃದ್ಧಿ ವಿಚಾರದಲ್ಲಿ ಬಿ.ಜೆ.ಪಿ ಎಂ.ಎಲ್.ಸಿ ಸಿ.ಪಿ ಯೋಗೇಶ್ವರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ನಡುವೆ ವಾಕ್ಸಮರವೇ ನಡೆಯುತ್ತಿರುವುದರಿಂದ ಇದೀಗ ಈ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಕೈಗೊಳ್ಳಬೇಕಾದ ಕಟ್ಟಡಗಳು ಹಾಗೂ ಇತರ ಕಾಮಗಾರಿಗಳಿಗೆ ರಾಜ್ಯದ 23 ವಿಧಾನಸಭಾ ಕ್ಷೇತ್ರಗಳಿಗೆ ಸರಕಾರ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಒಟ್ಟು 93.25 ಕೋಟಿ ರೂ. ಫಂಡ್ ಇದರಲ್ಲಿದ್ದು, ಈ ಅನುದಾಗಳ ಪಟ್ಟಿಯಲ್ಲಿ ಎಚ್‌ಡಿಕೆ ದಂಪತಿ ಪ್ರತಿನಿಧಿಸುತ್ತಿರುವ ರಾಮನಗರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಐದು ಕೋಟಿ ರೂ. ಅನುದಾನ ನೀಡಲಾಗಿದೆ. ಹೀಗಾಗಿ ತಮ್ಮ ಸರ್ಕಾರ ಇಲ್ಲದಿದ್ದರೂ ಬಿಜೆಪಿಯ ಆಡಳಿತದಲ್ಲಿ ತಮ್ಮ ಕ್ಷೇತ್ರಕ್ಕೆ ವಿಶೇಷ ಅನುದಾನ ತರುವಲ್ಲಿ ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಸಫಲಗೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ಈ ವಿಶೇಷ ಅನುದಾನವನ್ನು ಸ್ಥಳೀಯ ಶಾಸಕರಿಂದ ಕಾಮಗಾರಿಯ ಪ್ರಸ್ತಾವನೆ ಪಡೆದು ಅದರಂತೆ ಕಾಮಗಾರಿಗೆ ಟೆಂಡರ್‌ ಕರೆಯಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಇದರ ಜೊತೆ ಈ ಅನುದಾನವನ್ನು ಶಾಸಕರು ಸೂಚಿಸಿದ ಕಾಮಗಾರಿಗಳನ್ನು ಆರಂಭಿಸಲು ಮಾತ್ರ ಅವಕಾಶವಿದೆ‌. ಹೀಗಾಗಿ ಈ ಅನುದಾನದಿಂದ ನಡೆಯುವ ಕಾಮಗಾರಿಯ ಕ್ರೆಡಿಟ್‌ ಸ್ಥಳೀಯ ಶಾಸಕರಿಗೆ ಸಿಗಲಿದೆ. ಸದ್ಯ ಸಿ.ಪಿ‌ ಯೋಗೇಶ್ವರ್ ಹಾಗೂ ಎಚ್.ಡಿ.ಕೆ ಮಧ್ಯೆ ಅಭಿವೃದ್ಧಿಯ ಟಾಕ್ ವಾರ್ ಇರುವುದರಿಂದ ಈ ವಿಶೇಷ ಅನುದಾನ ಬಿಡುಗಡೆಗೆ ಸಿ.ಪಿ.ವೈ‌ ಮುನಿಸಿಗೆ ಕಾರಣವಾಗಿದೆ ಎಂಬ ಚರ್ಚೆಯೂ ನಡೆಯುತ್ತಿದೆ.

ಬಿಜೆಪಿ ಸರಕಾರ ಇದ್ದರೂ ಸಹ ಎಚ್.ಡಿ.ಕೆ ತಮ್ಮ ಕ್ಷೇತ್ರಕ್ಕೆ ಅನುದಾನವನ್ನು ತರುತ್ತಲೆ ಇದ್ದಾರೆ. ಮುಖ್ಯಮಂತ್ರಿಗಳಿಂದ ಹಲವು ವಿಶೇಷ ಅನುದಾನಗಳನ್ನು ಅವರು ಪಡೆಯುವಲ್ಲಿ ಸಫಲ ಆಗಿದ್ದಾರೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ 5 ಕೋಟಿ ರೂ, ಅಂಬೇಡ್ಕರ್‌ ಭವನಗಳ ನಿರ್ಮಾಣಕ್ಕೆ 5 ಕೋಟಿ ರೂ, ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 25 ಕೋಟಿ ರೂ. ವಿಶೇಷ ಅನುದಾನವನ್ನು ಪಡೆಯುವಲ್ಲಿ ಕುಮಾರಸ್ವಾಮಿ ಸಕ್ಸಸ್ ಆಗಿದ್ದಾರೆ.

ಒಟ್ಟಿನಲ್ಲಿ ಕುಮಾರಸ್ವಾಮಿ ಹಾಗೂ ಬಿ.ಜೆ.ಪಿ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳು ಇದ್ದರೂ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಎರಡು ಕಡೆಯಿಂದ ಪೂರಕ ಕೆಲಸ ಆಗಿದೆ. ಹೀಗಿದ್ದರೂ ವಿಶೇಷ ಅನುದಾನವನ್ನು ಎಚ್.ಡಿ.ಕೆ ದಂಪತಿಗಳ ಕ್ಷೇತ್ರಕ್ಕೆ ನೀಡಿರುವುದರಿಂದ ಬಿ.ಜೆ.ಪಿಯಲ್ಲಿ ಆಂತರಿಕವಾಗಿ ಕೆಲವರ ಅಸಮಾಧಾನಕ್ಕೂ ಕಾರಣವಾಗಿದೆ ಎಂದು ಹೇಳಲಾಗಿದೆ.

ಇದನ್ನು ಓದಿ : Mysore Yuva Dussehra :ವಿದ್ಯಾರ್ಥಿ ದಿನಗಳಲ್ಲಿ ಮೈಸೂರು ದಸರಾದಲ್ಲಿ ಈ ಕೆಲಸ ಮಾಡ್ತಾ ಇದ್ರಂತೆ ಡಾಲಿ ಧನಂಜಯ

ಇದನ್ನೂ ಓದಿ : Mark Boucher MI Head Coach : ದಕ್ಷಿಣ ಆಫ್ರಿಕಾದ ದಿಗ್ಗಜ ಮುಂಬೈ ಇಂಡಿಯನ್ಸ್ ಕೋಚ್ ; ಮಾರ್ಕ್ ಬೌಷರ್ ಹೆಗಲೇರಿದ ಮುಂಬೈ ಗುರು ಪಟ್ಟ

HDK couple who were successful in getting special grant despite BJP rule

Comments are closed.