Students are sick :ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

ಮಂಡ್ಯ : Students are sick : ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ ಮಾಡಲಾಗಿದೆ. ಆದ್ರೆ ಕೆಲ ಶಾಲೆಗಳಲ್ಲಿ ಬಿಸಿಯೂಟ ತಯಾರಿ ಸಂದರ್ಭ ನಿರ್ಲಕ್ಷ್ಯ ವಹಿಸಿದ ಪರಿಣಾಮ ಒಂದೊಂದು ಅವಾಂತರ ನಡೆಯುತ್ತಿರದೆ. ಇದೀಗ ಮಂಡ್ಯ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಹಲ್ಲಿ ಬಿದ್ದ ಬಿಸಿಯೂಟ ಸೇವನೆ ಮಾಡಿ 29 ಮಕ್ಕಳು ಅಸ್ವಸ್ಥರಾದ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಮಧ್ಯಾಹ್ನದವರೆಗೆ ಪಾಠ ಕೇಳಿದ್ದ ವಿದ್ಯಾರ್ಥಿಗಳು ಊಟದ ಹೊತ್ತಿನಲ್ಲಿ ಬಿಸಿಯೂಟ ಸೇವನೆಗೆಂದು ತೆರಳಿದ್ದಾರೆ. ಈ ಸಂದರ್ಭ ಬಿಸಿಯೂಟ ಸೇವಿಸುತ್ತಿದ್ದ ಮಕ್ಕಳು ಅಸ್ವಸ್ಥರಾಗುತ್ತ ಬಂದಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಶಾಲಾ ಶಿಕ್ಷಕರು ಬಿಸಿಯೂಟ ತಯಾರಿ ಕೊಠಡಿಗೆ ತೆರಳಿದ್ದಾರೆ. ಈ ಸಂದರ್ಭ ಬಿಸಿಯೂಟಕ್ಕೆ ಹಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಬಿಸಿಯೂಟ ವಿತರಣೆಯನ್ನು ನಿಲ್ಲಿಸಿದ್ದಾರೆ.

ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ಸುಮಾರು 29 ಮಕ್ಕಳು ಅಸ್ವಸ್ಥರಾಗಿದ್ದಾರೆ. ಇದರಲ್ಲಿ 19 ಹೆಣ್ಣು ಮಕ್ಕಳಿದ್ದು 10 ಗಂಡು ಮಕ್ಕಳು ಒಳಗೊಂಡಿದ್ದಾರೆ. ಈ ಮಕ್ಕಳು ವಾಂತಿ ಮಾಡಿ ಅಸ್ವಸ್ಥಗೊಂಡಿದ್ದರು. ತಕ್ಷಣ ಅಸ್ವಸ್ಥಗೊಂಡ ಮಕ್ಕಳನ್ನು ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಿಮ್ಸ್ ಮಕ್ಕಳ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆ.ಎಂ ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲಿ ಬಿದ್ದಿರುವುದನ್ನು ಕಂಡು ವಿದ್ಯಾರ್ಥಿಗಳು ಸಮೂಹ ಸನ್ನಿಯಂತೆ ವಾಂತಿ ಮಾಡುವುದಕ್ಕೆ ಶುರು ಮಾಡಿದ್ದಾರೆ. ಸದ್ಯ ಘಟನೆಯಲ್ಲಿ ಯಾರಿಗೂ ಗಂಭೀರ ಆರೋಗ್ಯ ಸಮಸ್ಯೆಯಾಗಿಲ್ಲ‌. ಆದ್ರೂ ಕೂಡಾ ಅಸ್ವಸ್ಥಗೊಂಡ ವಿದ್ಯಾರ್ಥಿಗಳ‌ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ. ಈ ಘಟನೆಯಿಂದಾಗಿ ಬಿಸಿಯೂಟ ತಯಾರಿ ಕೊಠಡಿಯಲ್ಲಿ ಸುರಕ್ಷತಾ ಕ್ರಮ ಅನುಸರಿಸಬೇಕು, ವಿದ್ಯಾರ್ಥಿಗಳಿಗೆ ಊಟ ನೀಡುವ ಮೊದಲು ಪರೀಕ್ಷಿಸಿಕೊಳ್ಳಬೇಕು ಎಂಬುದು ಸ್ಪಷ್ಟ. ಒಟ್ಟಿನಲ್ಲಿ ಈ ಘಟನೆಯಲ್ಲಿ ಯಾರ ನಿರ್ಲಕ್ಷ್ಯ ಇದೆಯೋ ಗೊತ್ತಿಲ್ಲ. ಆದ್ರೆ ಅಸ್ವಸ್ಥಗೊಂಡ ವಿದ್ಯಾರ್ಥಿಗಳ‌ ಆರೋಗ್ಯ ಆದಷ್ಟು ಬೇಗ ಸುಧಾರಿಸುವಂತಾಗಲಿ.

ಇದನ್ನು ಓದಿ : Mark Boucher MI Head Coach : ದಕ್ಷಿಣ ಆಫ್ರಿಕಾದ ದಿಗ್ಗಜ ಮುಂಬೈ ಇಂಡಿಯನ್ಸ್ ಕೋಚ್ ; ಮಾರ್ಕ್ ಬೌಷರ್ ಹೆಗಲೇರಿದ ಮುಂಬೈ ಗುರು ಪಟ್ಟ

ಇದನ್ನೂ ಓದಿ : Mysore Yuva Dussehra :ವಿದ್ಯಾರ್ಥಿ ದಿನಗಳಲ್ಲಿ ಮೈಸೂರು ದಸರಾದಲ್ಲಿ ಈ ಕೆಲಸ ಮಾಡ್ತಾ ಇದ್ರಂತೆ ಡಾಲಿ ಧನಂಜಯ

Students are sick after eating food contaminated with lizards

Comments are closed.