ಸೋಮವಾರ, ಏಪ್ರಿಲ್ 28, 2025
HomekarnatakaHDK VS DKS War : ತಾರಕಕ್ಕೇರಿದ ಡಿಕೆಶಿ, ಎಚ್ ಡಿಕೆ ವಾರ್ : ಡಿಕೆಯನ್ನು...

HDK VS DKS War : ತಾರಕಕ್ಕೇರಿದ ಡಿಕೆಶಿ, ಎಚ್ ಡಿಕೆ ವಾರ್ : ಡಿಕೆಯನ್ನು ಕಲ್ಲು ಬಂಡೆ ನುಂಗಿದ ರಾಕ್ಷಸ ಎಂದ ಕುಮಾರಸ್ವಾಮಿ

- Advertisement -

ಬೆಂಗಳೂರು : ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಆಯೋಜಿಸಿರುವ ಪಾದಯಾತ್ರೆ ಮಾಜಿಸಿಎಂ ಹಾಗೂ ಜೆಡಿಎಸ್ ನಾಯಕ ಎಚ್‌ .ಡಿ.ಕುಮಾರಸ್ವಾಮಿ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದ ಒಂದು ವಾರದಿಂದ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ (HDK VS DKS Tweet War) ಮಾಡುತ್ತಲೇ ಬಂದಿರುವ ಎಚ್ ಡಿಕೆ ಈಗ ಮತ್ತೆ ಸರಣಿ ಟ್ವೀಟ್ ಗಳ ಮೂಲಕ ಹರಿಹಾಯ್ದಿದ್ದಾರೆ.

ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದ್ದು, ಮೇಕೆದಾಟು ಪಾದಯಾತ್ರೆಗೆ ಕುಮಾರಸ್ವಾಮಿ ಯವರು ಭಾಗವಹಿಸಬಹುದು ಎಂದಿರೋ ಡಿಕೆಶಿ ಹೇಳಿಕೆಗೆ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಡಿಕೆಶಿ, ನನ್ನನ್ನು ಸೇರಿಸಿ, 83 ತಾಲ್ಲೂಕುಗಳ ಜನರಿಗೆ ಮೇಕೆದಾಟು ಮಕ್ಮಲ್ ಟೋಪಿ ಹಾಕ್ತಿದ್ದಾರೆ. ಮೇಕೆದಾಟು ಮೂಲ ರೂವಾರಿ ದೇವೇಗೌಡರು. ಆದರೆ ಅವರನ್ನು ಮರೆತ ಕೈ ನಾಯಕರು, ಸತ್ಯಕ್ಕೆ ಸಮಾಧಿ ಕಟ್ಟುತ್ತಿದ್ದಾರೆ. ನೆಲದ ಮಣ್ಣಿನ ಮಕ್ಕಳ ನಂಬಿಕೆಯನ್ನೇ ಕಾಂಗ್ರೆಸ್ ಬುಲ್ಡೋಜ್ ಮಾಡುತ್ತಿದೆ.

ಹಿಂದೆ ಪಿ ವಿ ನರಸಿಂಹರಾವ್ ಪ್ರಧಾನಿ ಆಗಿದ್ದಾಗ ತಮಿಳುನಾಡಿನ ಒತ್ತಡಕ್ಕೆ ಮಣಿದು, ಬೆಂಗಳೂರಿನ ನ್ಯಾಯಯುತ ನೀರನ್ನು ತಡೆದಿದ್ರು.*ಕನ್ನಡಿಗರ ಕನಸುಗಳಿಗೆ ಕೊಳ್ಳಿ ಇಟ್ಟ ಅದೇ ಪಕ್ಷ ಈಗ ಸತ್ಯಗಳನ್ನು ಹೂತು ಮುಜುಗರ ವಿಲ್ಲದೇ ಮತಯಾತ್ರೆಗೆ ಹೊರಟಿದೆ ಎಂದು ಎಚ್ ಡಿಕೆ ಆರೋಪಿಸಿದ್ದಾರೆ. ಬೆಂಗಳೂರಿಗೆ ಕಾವೇರಿ ನೀರು ಕೊಟ್ಟವರು ದೇವೇಗೌಡರು ಎಂದಿರುವ ಕುಮಾರಸ್ವಾಮಿ, ಜೀವಜಲ ತಂದು ಬವಣೆ ನೀಗಿಸಿದವರು ಅವರೇ,ಈ ಭಗೀರಥನನ್ನೇ ಮರೆತ ಕಾಂಗ್ರೆಸ್ ಕೃತಘ್ನ ರಾಜಕಾರಣಕ್ಕೆ ಏನು ಹೇಳುವುದು..? ಹಿಂದೆ 5 ವರ್ಷ ಸಿದ್ದು ಹಸ್ತರೇ ಸಿಎಂ ಆಗಿದ್ದರು, ಅವಾಗ ಕೇಂದ್ರದ ಮುಂದೆ ಪ್ರತಾಪ ತೋರಬಹುದಿತ್ತು- ಬರೀ ಮಾತಿನ ಉತ್ತರ ಪೌರುಷ ಎಂದು ಟೀಕಿಸಿದ್ದಾರೆ.

ರಾಜ್ಯದ ಹಿತದ ಪ್ರಶ್ನೆ ಬಂದಾಗ ಗೌಡರು ರಾಜಿಯಾದವರಲ್ಲ, ಅವರೊಬ್ಬರಿಂದಲೇ ಮೇಕೆದಾಟು ಯೋಜನೆ ಸಾಕಾರ ಸಾಧ್ಯ ಎಂದಿರುವ ಕುಮಾರಸ್ವಾಮಿ, ಇಲ್ಲಿ 30 ವರ್ಷ ಆಳಿದವರು ಕಾವೇರಿ- ಕೃಷ್ಣಗೆ ಕೊಟ್ಟ ಕೊಡುಗೆ ಏನು..? ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಸ್ಲೋಗನ್ ಹೇಳಿಕೊಂಡು, ಉತ್ತರ ಕರ್ನಾಟಕಕ್ಕೆ ಟೋಪಿ ಹಾಕಿದ್ದಾಗಿದೆ.. ಈಗ ಮೇಕೆದಾಟು ವಿಚಾರದಲ್ಲಿಯೂ ಅದೇ ಆಗಲಿದೆ. ಮೇಕೆದಾಟು ಯೋಜನೆ ತಾಂತ್ರಿಕವಾಗಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಾದ್ರೆ ಕೇಂದ್ರದ ಮೇಲೆ ಒತ್ತಡ ತಂದು, ಯೋಜನೆ ಗೆ ಒಪ್ಪಿಗೆ ಪಡೆಯಬೇಕು.ಅದು ಬಿಟ್ಟು ಹೊಸ ಸ್ಲೋಗನ್ ಅಗತ್ಯತ ಇಲ್ಲ ಎಂದು ಎಚ್ಡಿಕೆ ಹರಿಹಾಯ್ದಿದ್ದಾರೆ.

ಪಾಪ ತೊಳೆಯುವ ತಾಯಿ ಲೋಕಪಾವನಿ ಈಗ ವೋಟಿನ ದಾಳವಾಗುತ್ತಿರುವುದು ನಾಡಿನ ದುರ್ದೈವ ಎಂದಿರುವ ಕುಮಾರಸ್ವಾಮಿ, ಭೂ ತಾಯಿ ಒಡಲಿನ ಮಣ್ಣು ಬಗೆದ, ಕಲ್ಲುಬಂಡೆಗಳನ್ನು ನುಂಗಿದ ರಕ್ಕಸ ರಾಜಕಾರಣದ ಕಾಕದೃಷ್ಠಿ ಈಗ ಮಲತಾಯಿ ಕಾವೇರಿ ಮೇಲೂ ಬಿದ್ದಿದೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ಗೆ ಟಾಂಗ್ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಕೈನಾಯಕರ ಮೇಕೆದಾಟು ಪಾದಯಾತ್ರೆಗೆ‌ ಜೆಡಿಎಸ್ ನಿಂದ ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸರಣಿ ಟ್ವೀಟ್ ನಲ್ಲಿ ತಮ್ಮ ಆಕ್ರೋಶ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Ramesh Jarakiholi disciplinary action : ಶಿಸ್ತುಕ್ರಮದ ಭಯ: ದೆಹಲಿಗೆ ದೌಡಾಯಿಸಿದ ಬೆಳಗಾವಿ ಸಾಹುಕಾರ

ಇದನ್ನೂ ಓದಿ : Arun singh warns ministers : ರಾಜ್ಯದ ಸಚಿವರುಗಳಿಗೆ ಖಡಕ್​ ವಾರ್ನಿಂಗ್​ ಕೊಟ್ಟ ಅರುಣ್​ ಸಿಂಗ್​..!

( HDK VS DKS Tweet War, DK Shivakumar is a demon who swallowed a rock)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular