ಬೆಂಗಳೂರು : ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ದ ಮುನಿಸಿಕೊಂಡಿರುವ ಆನಂದ್ ಸಿಂಗ್ ಸಿಎಂ ಕರೆಗೂ ಡೋಂಟ್ ಕೇರ್ ಎಂದಿದ್ದಾರೆ.
ಬಸವರಾಜ್ ಬೊಮ್ಮಾಯಿ ಅವರ ರಾಜ್ಯದ ಮುಖ್ಯಮಂತ್ರಿಯಾಗುತ್ತಲೇ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಆನಂದ್ ಸಿಂಗ್ ಪ್ರಬಲ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದರು. ಆದರೆ ಇಂಧನ ಅಥವಾ ಲೋಕೋಪಯೋಗಿ ಇಲಾಖೆ ಸಿಗುತ್ತೆ ಅಂತಾ ಅಂದುಕೊಂಡಿದ್ದ ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನು ನೀಡಲಾಗಿತ್ತು. ಆದರೆ ಸಿಎಂ ಬಳಿಯಲ್ಲಿ ಖಾತೆ ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರು. ಆದರೆ ಸಿಎಂ ಬೊಮ್ಮಾಯಿ ಸದ್ಯಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ಸಿಎಂ ಹೇಳಿಕೆ ಇದೀಗ ಆನಂದ್ ಸಿಂಗ್ ಕೋಪಕ್ಕೆ ಕಾರಣವಾಗಿದೆ. ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ತಮ್ಮ ಆಪ್ತರ ಜೊತೆಯಲ್ಲಿ ಹೇಳಿಕೊಂಡಿದ್ದರು. ಅಲ್ಲದೇ ಹೊಸಪೇಟೆಯಲ್ಲಿರುವ ತಮ್ಮ ಕಚೇರಿಯ ಬೋರ್ಡ್ ತೆರವುಗೊಳಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಖುದ್ದು ಕರೆ ಮಾಡಿದ್ರೂ ಆನಂದ್ ಸಿಂಗ್ ಕರೆಯನ್ನು ಸ್ವೀಕರಿಸಲಿಲ್ಲ.
ಇದನ್ನೂ ಓದಿ : ಬೊಕ್ಕಸ ತುಂಬಿಸಲು ಬಿಗಿಕ್ರಮ….! ಸರ್ಕಾರಿ ಸಭೆಯಲ್ಲಿ ಹೂಗುಚ್ಛ,ಹಾರ, ತುರಾಯಿಗೆ ಬಿತ್ತು ಬ್ರೇಕ್….!!
ಹೀಗಾಗಿ ಆನಂದ್ ಸಿಂಗ್ ನಡೆ ಇದೀಗ ತೀವ್ರ ಕುತೂಹಲವನ್ನು ಮೂಡಿಸಿದೆ. ಆನಂದ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವ ಜೊತೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡ್ತಾರೆ. ಇಲ್ಲ ಪಕ್ಷದ ಹೈಕಮಾಂಡ್ ಭೇಟಿ ಮಾಡಿ ತಮ್ಮಿಷ್ಠದ ಖಾತೆಯನ್ನು ಧಕ್ಕಿಸಿಕೊಳ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.