ಬೆಂಗಳೂರು : ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ( Ex- Central Minister RL Jalappa) ಅವರು ವಿಧಿವಶರಾಗಿದ್ದಾರೆ. ಹಲವು ಸಮಯದಿಂದಲೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಕೋಲಾರದ ಜಾಲಪ್ಪ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರಿಗೆ ೯೮ ವರ್ಷ ವಯಸ್ಸಾಗಿತ್ತು. ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ.
ಚಿಕ್ಕಬಳ್ಳಾಪುರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಜಾಪ್ಪ ಅವರು ದೊಡ್ಡಬಳ್ಳಾಪುರದ ತೂಬಗೆರೆಯ ನಿವಾಸದಲ್ಲಿ ವಾಸವಾಗಿದ್ದರು. ಕಳೆದ ಫೆಬ್ರವತಿ ತಿಂಗಳಲ್ಲಿ ಜಾಲಪ್ಪ ಅವರು ಪಾಶ್ಚವಾಯು ಸಮಸ್ಯೆಗೆ ಯುತ್ತಾಗಿದ್ದರು. ಇದರಿಂದಾಗಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ನಾಲ್ಕು ಬಾರಿ ಸಂಸದರಾಗಿದ್ದ ಜಾಲಪ್ಪ ಅವರು ಕೇಂದ್ರ ಸಚಿವರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ರಾಜ್ಯದ ಪ್ರಭಾವಿ ರಾಜಕೀಯ ಮುಖಂಡರಾಗಿಯೂ ಅವರು ಗುರುತಿಸಿ ಕೊಂಡಿದ್ದರು. ಆರ್ಥಿಕ, ಶೈಕ್ಷಣಿಕ ಹಾಗೂ ಕೃಷಿಯಲ್ಲಿನ ಸುಧಾರಣೆ ಸಾಕಷ್ಟು ಪ್ರಯತ್ನಿಸಿದ್ದರು. ಇದೀಗ ಜಾನಪ್ಪ ಅವರ ನಿಧನಕ್ಕೆ ಹಲವರು ಕಂಬನಿ ಮಿಡಿಸಿದ್ದಾರೆ. ಕಳೆದ ಐದು ದಿನಗಳ ಹಿಂದೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿದ್ದರು.
ಜಾಲಪ್ಪ ಅವರ ರಾಜಕೀಯ ಜೀವನ
1980-83 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
1983-96 ಸದಸ್ಯರು, ಕರ್ನಾಟಕ ವಿಧಾನಸಭೆ
1983-84 ಮತ್ತು 1985-86 ಮಂತ್ರಿ, ಸಹಕಾರ, ಕರ್ನಾಟಕ ಸರ್ಕಾರ
1986-87 ಮಂತ್ರಿ, ಗೃಹ ವ್ಯವಹಾರಗಳ, ಕರ್ನಾಟಕ ಸರ್ಕಾರ
1995-96 ಸಚಿವ, ಕಂದಾಯ, ಕರ್ನಾಟಕ ಸರ್ಕಾರ
1996 11 ನೇ ಲೋಕಸಭೆಗೆ ಚುನಾಯಿತ ಜವಳಿ
1996-98 ಕೇಂದ್ರ ಜವಳಿ ಸಚಿವ
1998 12 ನೇ ಲೋಕಸಭೆ ಮರುಚುನಾಯಿತರಾದವರು(2 ನೇ ಪದ)
1998-99 ಸದಸ್ಯರು, ಹಣಕಾಸು ಸಮಿತಿ ಸದಸ್ಯ, ಸಂಸತ್ತಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸದಸ್ಯರು ಸಮಿತಿ , ಸಲಹಾ ಸಮಿತಿಯ ಸದಸ್ಯರು ಕೃಷಿ ಸಚಿವಾಲಯ.
1999 ಮರುಚುನಾಯಿತರಾದವರು 13 ನೇ ಲೋಕಸಭೆ (3 ನೇ ಪದ)
1999-2000 ಸದಸ್ಯರು, ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಮಿತಿ ಸದಸ್ಯರು.
2004 ಮರುಚುನಾಯಿತರಾದವರು 14 ಲೋಕಸಭೆ (4ನೇ ಅವಧಿಗೆ),
2006 ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯ ಸದಸ್ಯರು.
ಇದನ್ನೂ ಓದಿ : Ramesh Kumar apologies: ಸದನದಲ್ಲಿ ‘ರೇಪ್’ ಹೇಳಿಕೆಗೆ ಕ್ಷಮೆಯಾಚಿಸಿದ ಕಾಂಗ್ರೆಸ್ ಶಾಸಕ ರಮೇಶ್ಕುಮಾರ್..!
ಇದನ್ನೂ ಓದಿ : ಮಾಜಿ ಸರ್ವಾಧಿಕಾರಿ ಪುಣ್ಯಸ್ಮರಣೆ ನಿಮಿತ್ತ ವಿಚಿತ್ರ ನಿರ್ಬಂಧ..! ಉ. ಕೊರಿಯಾದ ಪ್ರಜೆಗಳಿಗೆ ನಗದಂತೆ ಆದೇಶ
Indian National Congress Senior Leader Ex- Central Ministe RL Jalappa No More