woman shoots at boyfriend : ಪ್ರೀತಿಯಲ್ಲಿ ಹೆಚ್ಚಿದ ಅಂತರ; ಪ್ರಿಯತಮೆಯಿಂದಲೇ ಪ್ರಿಯತಮನ ಮೇಲೆ ಫೈರಿಂಗ್​..!

ಪ್ರೀತಿ ಮಾಯೆ ಹುಷಾರು ಅಂತಾರೆ . ಈ ಮಾತು ನಿಜ ಕೂಡ ಹೌದು. ಪ್ರೀತಿಯಲ್ಲಿ ಕೊಂಚ ಯಾಮಾರಿದ್ರೂ ಜೀವನವೇ ಹಾಳಾಗುವ ಸಾಧ್ಯತೆ ಇರುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿರುವ ಪ್ರಕರಣವೊಂದರಲ್ಲಿ ಸ್ವತಃ ಪ್ರಿಯತಮೆಯೇ ತನ್ನ ಪ್ರಿಯತಮನನ್ನು ಕೊಲೆ ಮಾಡಲು(Woman shoots at boyfriend ) ಮುಂದಾಗಿದ್ದಾಳೆ..!

ಹೌದು..! ಬಾಯ್​ಫ್ರೆಂಡ್​ ತನ್ನನ್ನು ಮೊದಲಿನಂತೆ ಪ್ರೀತಿಸುತ್ತಿಲ್ಲ ಎಂದು ಮನನೊಂದ ಯುವತಿಯು ಆತನ ಫೈರಿಂಗ್​ ನಡೆಸಿದ ಆಘಾತಕಾರಿ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ಕಾಟ್ವಾ ಪೊಲೀಸ್​ ಠಾಣಾ ವ್ಯಾಪ್ತಿ ಕೇಶಿಯಾ ಎಂಬಲ್ಲಿ ನಡೆದಿದೆ. ಅಂದಹಾಗೆ ಇವರಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಇಬ್ಬರಿಗೂ ಈಗ 22 ವರ್ಷ ವಯಸ್ಸು.ಬಾಯ್​ಫ್ರೆಂಡ್​ ತನ್ನ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದಾನೆ ಎಂಬ ಕೊರಗು ಪ್ರಿಯತಮೆಗಿತ್ತು ಎನ್ನಲಾಗಿದೆ.

ಒಂದು ದಿನ ತನ್ನ ಪ್ರಿಯತಮನನ್ನು ಭೇಟಿಯಾಗಲೆಂದು ಆತನನ್ನು ಹತ್ತಿರದ ಸರ್ಕಸ್​ ಮೈದಾನಕ್ಕೆ ಬರುವಂತೆ ಹೇಳಿದ್ದಾಳೆ. ಪ್ರಿಯತಮೆ ಹೇಳಿದ ಮಾತಿಗೆ ಬೆಲೆ ಕೊಟ್ಟು ಆತ ಕೂಡ ಸ್ಥಳಕ್ಕೆ ಆಗಮಿಸಿದ್ದಾನೆ. ಪ್ರಿಯತಮನನ್ನು ಜೋರಾಗಿ ತಬ್ಬಿಕೊಂಡ ಈಕೆ ಬಳಿಕ ಆತನಿಗೆ ಚುಂಬಿಸಿದ್ದಾಳೆ. ಇಷ್ಟು ಸಾಲದು ಎಂಬಂತೆ ಆತನ ಜೊತೆ ಸಿಗರೇಟ್​ ಕೂಡ ಸೇದಿದ್ದಾಳೆ.

ಆದರೆ ಇಷ್ಟಕ್ಕೆ ಕತೆ ಮುಗಿಯಲಿಲ್ಲ. ಆತನಿಗೆ ಚುಂಬಿಸಿದ ಬಳಿಕ ಬ್ಯಾಗಿನಿಂದ ಪಿಸ್ತೂಲ್​ ಹೊರತೆಗೆದ ಪ್ರಿಯತಮೆ ಆತನ ಮೇಲೆ ಫೈರಿಂಗ್​ ನಡೆಸಿದ್ದಾಳೆ. ಅದೃಷ್ಟವಶಾತ್​ ಗುಂಡು ಯುವಕನ ಹೊಟ್ಟೆ ತರುಚಿಕೊಂಡು ಹೋಗಲಷ್ಟೇ ಶಕ್ತವಾಗಿದೆ. ಹೀಗಾಗಿ ಆತನ ಬದುಕುಳಿದಿದ್ದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾನೆ. ಯುವಕನ ಮೇಲೆ ಫೈರಿಂಗ್​ ನಡೆಸಿ ಎಸ್ಕೇಪ್​ ಆಗಿದ್ದ ಯುವತಿಯ ಹುಡುಕಾಟ ಆರಂಭಿಸಿದ ಪೊಲೀಸರು ಕೊನೆಗೂ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆಯ ವೇಳೆ ಯುವತಿಯು ಕೊಲೆ ಪ್ರಯತ್ನದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾಳೆ. ತನಿಖೆಗೆ ಚುರುಕು ನೀಡಲಾಗಿದೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : Pet Dog Died :ಪೊಲೀಸರ ವಿರುದ್ಧ ಸಾಕು ನಾಯಿ ಕೊಂದ ಆರೋಪ ಹೊರಿಸಿದೆ ಈ ಕುಟುಂಬ..!

ಇದನ್ನೂ ಓದಿ : Bill Against family politics : ಕುಟುಂಬ ರಾಜಕಾರಣದ ವಿರುದ್ಧ ಮಸೂದೆ ತನ್ನಿ: ಕೈ, ಕಮಲ‌ ಪಾಳಯಕ್ಕೆ ಎಚ್.ಡಿ.ರೇವಣ್ಣ ಸವಾಲು

West Bengal: 22-year-old woman shoots at boyfriend over ‘increasing distance’ in relationship

Comments are closed.