ಬೆಂಗಳೂರು : ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraj Bommai) ಪುತ್ರನಿಗೆ ಅಂತರಾಷ್ಟ್ರೀಯ ಬಿಸಿನೆಸ್ ಆವಾರ್ಡ್ (Titan Business Award) ಲಭಿಸಿದೆ.ಯುವ ಉದ್ಯಮಿ ಭರತ್ ಬಿ ಬೊಮ್ಮಾಯಿ(Bharat B Bommai)ಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಟೈಟಾನ್ ಬಿಸಿನೆಸ್ ಆವಾರ್ಡ್ 2022 (Titan Business Award) ದೊರಕಿದೆ. ಇವರು ಈ ವರ್ಷದ ಉತ್ಪಾದನೆ ವಿಭಾಗದಲ್ಲಿ ಜಾಗತಿಕ ವಾಣಿಜ್ಯೋದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಉದ್ಯಮಿ ಭರತ್ ಬಿ. ಬೊಮ್ಮಾಯಿ ಅಶ್ವ ಎನರ್ಜಿ ಮತ್ತು ವಾಲ್ಟಿಕ್ ಎಂಬ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ಇದರ ಕುರಿತಾಗಿ ಟೈಟಾನ್ ಬಿಸಿನೆಸ್ ಆವಾರ್ಡ್ ಆಯೋಜಕರಾದ ಇಂಟರ್ ನ್ಯಾಷನಲ್ ಆವಾರ್ಡ್ಸ್ ಅಸೋಸಿಯೇಟ್ (IAA) ಪ್ರಕಟಣೆಯನ್ನು ಹೊರಡಿಸಿತ್ತು. ಅದರಲ್ಲಿ ವಿಶ್ವದಾದ್ಯಂತ ಬಂದಿದ್ದ ಸಾವಿರಾರು ಪ್ರವೇಶಗಳನ್ನು ಪರಿಶೀಲಿಸಿದೆ. ನಂತರ ಸ್ಪರ್ಧೆಯಲ್ಲಿ ಭಾಗವಹಿಸಿದ ಭರತ್ ಬಿ ಬೊಮ್ಮಾಯಿ(Bharat B Bommai) ಪ್ರವೇಶವನ್ನು ಟೈಟನ್ ಪ್ರಶಸ್ತಿಗೆ ಅರ್ಹರು ಎಂದು ತೀರ್ಪುಗಾರರು ಪರಿಗಣಿಸಿ ತಿಳಿಸಿದ್ದಾರೆ.
(CM Basavaraj Bommai)ಸೀಸನ್ 2ರ ಸ್ಪರ್ಧೆಯಲ್ಲಿ ಯುಎಸ್‌ಎ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ, ಕೆನಡಾ, ಚೀನಾ, ಭಾರತ, ಓಮನ್, ಫಲಿಪೈನ್ಸ್, ಪೋರ್ಚುಗಲ್, ಯುಎಇ ಸೇರಿದಂತೆ ಸುಮಾರು 55 ದೇಶದಿಂದ 1000 ಹೆಚ್ಚಿನ ಪ್ರವೇಶಗಳು ಬಂದಿದ್ದವು. ವಾಣಿಜ್ಯೋದ್ಯಮಿಗಳು, ಎಸ್‌ಎಮ್‌ಇ ಗಳು ಹಾಗೂ ದೊಡ್ಡ ಸಂಸ್ಥೆಗಳಿಗೆ ಸ್ಪರ್ಧೆ ಏರ್ಪಡಿಸುವ ಪ್ರವೇಶವನ್ನು ತೆರೆಯಲಾಗಿತ್ತು. ಮಾರುಕಟ್ಟೆಯಲ್ಲಿ ಲಭ್ಯವಿದ್ದ ಎಲ್ಲಾ ಉದ್ಯಮಗಳಿಗೂ ಪ್ರವೇಶ ಸ್ಪರ್ಧೆಯನ್ನು ಮುಕ್ತಗೊಳಿಸಲಾಗಿತ್ತು.
ಟೈಟಾನ್ ಬ್ಯುಸಿನೆಸ್ ಆವಾರ್ಡ್(Titan Business Award)ನ ಮುಖ್ಯ ಉದ್ದೇಶ ವಿಶ್ವದಾದ್ಯಂತ ಇರುವ ಎಲ್ಲಾ ಉದ್ಯಮಿ ಹಾಗೂ ಸಂಸ್ಥೆಗಳ ಸಾಧನೆಗಳನ್ನು ಗುರುತಿಸುವುದಾಗಿದೆ. ಪ್ರವೇಶ ಸ್ಪರ್ಧೆಗಳಲ್ಲಿ ಮಾರುಕಟ್ಟೆಯ ಸಣ್ಣ ಮತ್ತು ದೊಡ್ಡ ಉದ್ಯಮಿಗಳೆಂದು ವಿಂಗಡಿಸಲಾಗಿತ್ತು. ಇವರು ಗಳಿಸಿದ ನಿಷ್ಪಕ್ಷಪಾತ ಶ್ರೇಷ್ಠತೆ ಮಟ್ಟದ ಆಧಾರದ ಮೇಲೆ ಮಾತ್ರ ಗೌರವಿಸಲಾಗಿತ್ತು. ಇದರಲ್ಲಿ ಅರ್ಹತೆಯನ್ನು ಪಡೆದವರು ಮಾತ್ರ ಗೌರವಾನ್ವಿತ ಟೈಟನ್ ಆಗಬಹುದಾಗಿತ್ತು. ಈ ಸ್ಪರ್ಧೆಯಲ್ಲಿ ತೀರ್ಪುಗಾರರು ಅನುಭವಿ ವೃತ್ತಿಪರರಾಗಿದ್ದು, ತಮ್ಮ ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ನಿಷ್ಪಕ್ಷಪಾತ ಹಾಗೂ ಕಟ್ಟುನಿಟ್ಟಾದ ಮಾನದಂಡವನ್ನು ಅನುಸರಿಸಿದ್ದಾರೆ.
ಇದನ್ನೂ ಓದಿ : Pramod Muthalik contest in Udupi : ಯುಪಿ ಮಾದರಿ ಆಡಳಿತ; ಉಡುಪಿಯಿಂದ ಚುನಾವಣಾ ಕಣಕ್ಕೆ ಪ್ರಮೋದ್ ಮುತಾಲಿಕ್ ?
ಇದನ್ನೂ ಓದಿ : BJP CONG FIGHT : ವಾಮ ಮಾರ್ಗದಲ್ಲಿ ಸರ್ಕಾರ ರಚನೆ ಎಂದ ಸಿಎಂ ಬೊಮ್ಮಾಯಿ.. ಕಾಂಗ್ರೆಸ್ ಬಿಜೆಪಿ ಮಧ್ಯೆ ಫೇಕ್ ಫೈಟ್
ಇದನ್ನೂ ಓದಿ : ರಾಜ್ಯ ಸರಕಾರಿ ನೌಕರರಿಗೆ ಗುಡ್ ನ್ಯೂಸ್ : ‘ತುಟ್ಟಿಭತ್ಯೆ’ ಹೆಚ್ಚಳಕ್ಕೆ ಸಿಎಂ ಬೊಮ್ಮಾಯಿ ಅನುಮೋದನೆ
ಅತ್ಯುತ್ತಮ ಪ್ರವೇಶಗಳನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡುವ ಜವಾಬ್ದಾರಿಯನ್ನು ತೀರ್ಪುಗಾರರಿಗೆ ನೀಡಲಾಗಿತ್ತು. ಟೈಟನ್ ಸಂಸ್ಥೆಯು ತೀರ್ಪು ನೀಡಲು 15 ದೇಶಗಳಿಂದ 27 ವೃತ್ತಿಪರ ತೀರ್ಪುಗಾರರನ್ನು ನೇಮಕ ಮಾಡಲಾಗಿತ್ತು. ಇದರ ಉದ್ದೇಶ ತೀರ್ಪುಗಾರರು ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ವೈವಿಧ್ಯಮಯ ದೃಷ್ಟಿಕೋನವನ್ನು ಹೊಂದಲು ಟೈಟನ್ ಪ್ರಾಮುಖ್ಯತೆಯನ್ನು ನೀಡಿದೆ. ಅನೇಕ ಪ್ರತಿಷ್ಠಿತ ಸಂಸ್ಥೆಗಳ ನಡುವೆ ನಡೆದ ಸ್ಪರ್ಧೆಯ ಎಲ್ಲಾ ಕಠಿಣ ಹಂತಗಳನ್ನು ದಾಟಿದ ಮೇಲೆ ಭರತ್ ಬಿ ಬೊಮ್ಮಾಯಿ (Bharat B Bommai)ಸೀಸನ್ 2ರ ಟೈಟಾನ್ ಆವಾರ್ಡ್ 2022ರಲ್ಲಿ ವಿಜಯರಾಗಿ ಹೊರಹೊಮ್ಮಿದ್ದಾರೆ.
International Business Award to CM Bommai’s son Bharat Bommai