Hindu gods:ಹಿಂದೂ ದೇವರನ್ನು ಆರಾಧಿಸಲಾರೆ ಎಂದ ಆಪ್​ ಸಚಿವ : ಬಿಜೆಪಿ ನಾಯಕರಿಂದ ತರಾಟೆ

ದೆಹಲಿ :Hindu gods :ಚುನಾವಣೆಗಳು ಸಮೀಪಿಸುತ್ತಿರುವುದರಿಂದ ರಾಜಕೀಯ ನಾಯಕರು ಯಾವುದೇ ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆಯಿಂದ ನೀಡುವುದು ಒಳಿತು. ಆದರೆ ಆಮ್​ ಆದ್ಮಿ ಪಕ್ಷದ ಸಚಿವ ರಾಜೇಂದ್ರ ಪಾಲ್​ ಗೌತಮ್​​ ಇತ್ತೀಚೆಗೆ ಸಾಮೂಹಿಕ ಮತಾಂತರ ಕೂಟದಲ್ಲಿ ಭಾಗಿಯಾಗಿದ್ದರು. ಈ ಕೂಟದಲ್ಲಿ ಅವರು ಜನರು ಹಿಂದೂ ದೇವರು ಹಾಗೂ ದೇವತೆಗಳನ್ನು ಪೂಜಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಅಕ್ಟೋಬರ್​ ಐದರಂದು ಭೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ದೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರ ರಾಜಧಾನಿ ದೆಹಲಿಯ ಅಂಬೇಡ್ಕರ್​ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದರು.


ವೈರಲ್​ ಆಗಿರುವ ವಿಡಿಯೋದಲ್ಲಿ ಆಪ್​​ನ ಸಚಿವ ರಾಜೇಂದ್ರ ಪಾಲ್​ ಗೌತಮ್​​ ಸೇರಿದಂತೆ ಇತರರು ಪ್ರಮಾಣ ವಚನ ಸ್ವೀಕರಿಸುವುದನ್ನು ಕಾಣಬಹುದಾಗಿದೆ. ನನಗೆ ಬ್ರಹ್ಮ , ವಿಷ್ಣು ಹಾಗೂ ಮಹೇಶ್ವರನಲ್ಲಿ ನಂಬಿಕೆ ಇಲ್ಲ. ನಾನು ಹಿಂದೂ ದೇವರನ್ನು ಪೂಜಿಸುವುದಿಲ್ಲ. ನನಗೆ ರಾಮನಲ್ಲಿ ನಂಬಿಕೆ ಇಲ್ಲ. ಹಾಗೂ ರಾಮನ ಅವತಾರ ಎಂದು ಹೇಳಲಾಗುವ ಕೃಷ್ಣನನ್ನೂ ನಾನು ಆರಾಧಿಸುವುದಿಲ್ಲ ಎಂದಿದ್ದಾರೆ.


ಈ ಸಂಬಂಧ ರಾಜೇಂದ್ರಪಾಲ್​ ಟ್ವೀಟ್​ ಮಾಡಿದ್ದು, ಬುದ್ಧನ ಕಡೆಗಿನ ಮಿಷನ್​ನ್ನು ಜೈ ಭೀಮ್​ ಎಂದು ಕರೆಯೋಣ. ಇಂದು ವಿಜಯ ದಶಮಿಯಂದು ಮಿಷನ್​ ಜೈ ಭೀಮ್​ ಅಡಿಯಲ್ಲಿ 10 ಸಾವಿರಕ್ಕೂ ಹೆಚ್ಚು ಬುದ್ಧಿ ಜೀವಿಗಳು ಜಾತಿ ಮತ್ತು ಅಸ್ಪೃಶ್ಯ ಮುಕ್ತ ಭಾರತವನ್ನು ನಿರ್ಮಿಸೋಣ ಎಂದು ಬರೆದುಕೊಂಡಿದ್ದಾರೆ.


ಈ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬಳಿಕ ಬಿಜೆಪಿ ನಾಯಕರು ಆಪ್​​ನ ಸಚಿವ ರಾಜೇಂದ್ರ ಪಾಲ್​ ಗೌತಮ್​​ ವಿರುದ್ಧ ಹರಿಹಾಯ್ದಿದ್ದಾರೆ. ಟ್ವಿಟರ್​​ನಲ್ಲಿ ವಿಡಿಯೋ ಶೇರ್​ ಮಾಡಿರುವ ಬಿಜೆಪಿಯ ಅಮಿತ್​ ಮಾಳವಿಯ, ಅರವಿಂದ್​ ಕೇಜ್ರಿವಾಲ್​ ಹಾಗೂ ಸಚಿವ ರಾಜೇಂದ್ರ ಪಾಲ್​ ಬ್ರೇಕಿಂಗ್​ ಇಂಡಿಯಾ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದಾರೆ. ಅರವಿಂದ್​ ಕೇಜ್ರಿವಾಲ್​ ಹಿಂದೂ ದ್ವೇಷದ ಪ್ರಚಾರದ ಪ್ರಧಾನ ಪ್ರಾಯೋಜಕರು ಎಂದು ಗುಡುಗಿದ್ದಾರೆ.

ಇಂದು ಹಿಂದೂ ಹಾಗೂ ಬೌದ್ಧ ಧರ್ಮಕ್ಕೆ ಮಾಡಿದ ಅವಮಾನ. ಆಪ್​ ಸಚಿವರು ಗಲಭೆ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಕೂಡಲೇ ಇಂತಹ ಸಚಿವರನ್ನು ಸಂಪುಟದಿಂದ ಕಿತ್ತೆಸೆಯಬೇಕು. ನಾವು ಅವರ ವಿರುದ್ಧ ದೂರು ಸಲ್ಲಿಸುತ್ತಿದ್ದೇವೆ. ಎಂದು ಬಿಜೆಪಿ ಸಂಸದ ಮನೋಜ್​ ತಿವಾರಿ ಗುಡುಗಿದ್ದಾರೆ.


ಬಿಜೆಪಿಯ ಈ ಆರೋಪಗಳಿಗೆ ತಿರುಗೇಟು ನೀಡಿದ ಸಚಿವ ರಾಜೇಂದ್ರ ಪಾಲ್​ ಗೌತಮ್​, ಬಿಜೆಪಿ ದೇಶ ವಿರೋಧಿ. ನನಗೆ ಬೌದ್ಧ ಧರ್ಮದಲ್ಲಿ ನಂಬಿಕೆ ಇದೆ. ಇದರಲ್ಲಿ ಯಾರಿಗಾದರೂ ತೊಂದರೆ ಉಂಟೇ..? ಅವರು ದೂರು ನೀಡಲಿ. ಸಂವಿಧಾನವು ನಮಗೆ ಸ್ವಾತಂತ್ರ್ಯ ನೀಡಿದೆ. ಯಾವುದೇ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯ ನನಗೆ ಇದೆ. ಬಿಜೆಪಿಯು ಆಪ್​ಗೆ ಹೆದರುತ್ತದೆ. ಅವರ ನಮ್ಮ ವಿರುದ್ಧ ಕೇವಲ ನಕಲಿ ಪ್ರಕರಣವನ್ನು ದಾಖಲಿಸಲು ಮಾತ್ರ ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನು ಓದಿ : Sandeep Lamichhane : ಹದಿಹರೆಯದ ಬಾಲಕಿ ಮೇಲೆ ಅತ್ಯಾಚಾರ ಕೇಸ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಐಪಿಎಲ್ ಆಟಗಾರ ಅರೆಸ್ಟ್

ಇದನ್ನೂ ಓದಿ : Weather Report : ಕರ್ನಾಟಕದಲ್ಲಿ 3 ಬಾರೀ ಮಳೆ : ಇಂದು ಯೆಲ್ಲೋ ಅಲರ್ಟ್

‘Won’t worship Hindu gods’: AAP minister attends mass conversion event in Delhi, BJP hits back

Comments are closed.