ಸೋಮವಾರ, ಏಪ್ರಿಲ್ 28, 2025
Homepoliticsದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾದ ಖಡಕ್ ಖಾಕಿ…! ಅಣ್ಣಾಮಲೈ ಹಾದಿ ಹಿಡಿದ್ರಾ ಐಪಿಎಸ್ ರವಿ.ಡಿ.ಚನ್ನಣ್ಣನವರ್…!!

ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾದ ಖಡಕ್ ಖಾಕಿ…! ಅಣ್ಣಾಮಲೈ ಹಾದಿ ಹಿಡಿದ್ರಾ ಐಪಿಎಸ್ ರವಿ.ಡಿ.ಚನ್ನಣ್ಣನವರ್…!!

- Advertisement -

ಬೆಂಗಳೂರು : ಕರ್ನಾಟಕದ‌ ಸಿಂಗಂ ಖ್ಯಾತಿಯ ಅಣ್ಣಾಮಲೈ ಖಾಕಿ ತೊರೆದು ಬಿಜೆಪಿ ಸೇರಿದ್ದು ಈಗ ಇತಿಹಾಸ. ಮತ್ತೊಮ್ಮೆ ಇದೇ ಇತಿಹಾಸ ಮರುಕಳಿಸುವ ಮುನ್ಸೂಚನೆ ಸಿಕ್ಕಿದ್ದು ಕರ್ನಾಟಕದ ಅಪ್ಪಟ ಕನ್ನಡಿಗ ಖಡಕ್ ಖಾಕಿ ಆಫೀಸರ್ ರವಿ ಡಿ ಚನ್ನಣ್ಣನವರ್ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ.

ದೆಹಲಿಯಲ್ಲಿ ಬೀಡುಬಿಟ್ಟಿರುವ ರವಿ.ಡಿ.ಚನ್ನಣ್ಣನವರ್ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಪೋಟೋ ಎಲ್ಲೆಡೆ ವೈರಲ್ ಆಗಿದ್ದು, ರವಿ ಬಿಜೆಪಿ ಸೇರಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಗದಗ ಮೂಲದ 36 ವರ್ಷದ ರವಿ.ಡಿ.ಚೆನ್ನಣ್ಣನವರ್ ಪರಿಶ್ರಮದಿಂದ ಬೆಳೆದು ಬಂದು ಐಪಿಎಸ್ ಪಾಸ್ ಮಾಡಿ ಖಾಕಿ ತೊಟ್ಟವರು.

ಹೀಗಾಗಿ ರವಿಗೆ ರಾಜ್ಯದಾದ್ಯಂತ ಅಭಿಮಾನಿಗಳ ಸಂಖ್ಯೆ ಲಕ್ಷದಷ್ಟಿದೆ. ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲೂ ರವಿ ಡಿ ಚನ್ನಣ್ಣನವರ್ ಫ್ಯಾನ್ಸ್ ಸಂಖ್ಯೆ ಲಕ್ಷಗಟ್ಟಲೇ ಇದೆ. ಈ ಎಲ್ಲ ಅಭಿಮಾನವನ್ನು ಮತವಾಗಿ ಪರಿವರ್ತಿಸಲು ಬಿಜೆಪಿ ಚಿಂತನೆ ನಡೆಸಿದ್ದು ಅದಕ್ಕಾಗಿ ರವಿ ಚನ್ನಣ್ಣನವರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದೆ. ಇದರ ಫಲವಾಗಿಯೇ ರವಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ದೆಹಲಿಯ ಅಶೋಕ ರಸ್ತೆಯ ನಂಬರ್ 9 ರ ನಿವಾಸದಲ್ಲಿ ಸಂತೋಷ ಅವರನ್ನು ರವಿ ಚನ್ನಣ್ಣನವರ್ ಭೇಟಿ ಮಾಡಿದ್ದು ಬಿಜೆಪಿ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಬಿಜೆಪಿಯ ಒಪ್ಪಿಗೆಯೂ ಇದೆ. ರಾಜ್ಯ ನೂತನ ಸಿಎಂ ಬೊಮ್ಮಾಯಿ ಸಂಪುಟ ರಚನೆಯ ಸರ್ಕಸ್ ನಡೆಯುತ್ತಿದ್ದ ವೇಳೆಯೇ ರವಿ ಡಿ ಚನ್ನಣ್ಣನವರ್ ಕೂಡ ದೆಹಲಿಯಲ್ಲಿದ್ದು ಈ ಮಾತುಕತೆ ನಡೆಸಿದ್ದಾರೆ.

ಇದಕ್ಕೂ ಮುನ್ನವೇ ರವಿ ಚೆನ್ನಣ್ಣನವರ್ ಕರ್ನಾಟಕದ ಬಹುತೇಕ ಮಠ ಮಾನ್ಯಗಳ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು. ಆ ವೇಳೆಯಲ್ಲಿಯೇ ರವಿ ಚನ್ನಣ್ಣನವರ್ ರಾಜಕೀಯಕ್ಕೆ ಬರುತ್ತಾರೆ ಎಂಬ ಚರ್ಚೆ ಜೋರಾಗಿತ್ತು. ಈಗ ಬಹುತೇಕ ಈ ವಿಚಾರ ಖಚಿತ ಎನ್ನಲಾಗಿದ್ದು ಬಿಜೆಪಿ ಸೇರ್ಪಡೆಗೊಳ್ಳಲಿರುವ ರವಿ ಮೈಸೂರು ಅಥವಾ ನೆಲಮಂಗಲ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರಂತೆ.

RELATED ARTICLES

Most Popular