ಹುಬ್ಬಳ್ಳಿ : ಕರ್ನಾಟಕ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರಿದ ಒಂದು ದಿನದ ಬಳಿಕ, ಅವರು ಮಂಗಳವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರು ಪಕ್ಷದಿಂದ ಹೊರ ನಡೆದಿದ್ದಾರೆ ಮತ್ತು ಕರ್ನಾಟಕ ಘಟಕವನ್ನು ನಾಶಮಾಡಲು ಹೊರಟಿದ್ದಾರೆ ಎಂದು ದೂಷಣೆ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಿಂದ ಸ್ಪರ್ಧಿಸಲು ಮಂಗಳವಾರ ಕಾಂಗ್ರೆಸ್‌ನಿಂದ ನಾಮನಿರ್ದೇಶನಗೊಂಡ ಜಗದೀಶ ಶೆಟ್ಟರ್, ಬಿಜೆಪಿ ಟಿಕೆಟ್ ಪಡೆದಿರುವ ಮಹೇಶ್ ಟೆಂಗಿನಕಾಯಿ ಬಿಎಲ್ ಸಂತೋಷ್ ಅವರ ಮಾನಸಪುತ್ರ (ಮಗನಂತಹ) ಎಂದು ಆರೋಪಿಸಿದರು. ಇನ್ನು ಈ ವಿಷಯಕ್ಕೆ ಕುರಿತಂತೆ ಸಂಸದ ಪ್ರತಾಪ್ ಸಿಂಹ (Jagdish Shettar – Pratap Singh) ತಮ್ಮ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಖಾತೆಯಲ್ಲಿ, “ನಿನ್ನೆ ಸಂತೋಷ್ ಜಿಯವರನ್ನು ದೂಷಣೆ ಮಾಡಿದ್ದಾಯಿತು, ನೆಕ್ಸ್ಟ್ ಯಾವ ಬ್ರಾಹ್ಮಣರನ್ನು ಜಗದೀಶ್ ಶೆಟ್ಟರ್ ಟಾರ್ಗೆಟ್ ಮಾಡಬಹುದು? ಗೆಸ್ ಮಾಡಿ…” ಎಂದು ಜಗದೀಶ್ ಶೆಟ್ಟರ ಪೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ. ಈ ಬಾರೀ ಬಿಜೆಪಿ ಪಕ್ಷದ ಪಟ್ಟಿ ಬಿಡುಗಡೆ ಬಗ್ಗೆ ಹೈಕಮಾಂಡ್ ಹೆಚ್ಚಿನ ಗಮನಹರಿಸಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿ ಸಾಕಷ್ಟು ಅಳೆದು ತೂಗಿ ಪಟ್ಟಿ ಬಿಡುಗಡೆ ಮಾಡಲಾಗಿದೆ.
ನಿನ್ನೆ ಸಂತೋಷ್ ಜಿಯವರನ್ನು ದೂಷಣೆ ಮಾಡಿದ್ದಾಯಿತು, ನೆಕ್ಸ್ಟ್ ಯಾವ ಬ್ರಾಹ್ಮಣರನ್ನು ಜಗದೀಶ್ ಶೆಟ್ಟರ್ ಟಾರ್ಗೆಟ್ ಮಾಡಬಹುದು? ಗೆಸ್ ಮಾಡಿ… pic.twitter.com/0sDqyUOmiZ
— Pratap Simha (@mepratap) April 19, 2023
ಇದನ್ನೂ ಓದಿ : ಹುಬ್ಬಳ್ಳಿ : ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ಕಮ್ಮಾರ್‌ನ್ನು ಚಾಕುವಿನಿಂದ ಇರಿದು ಕೊಲೆ : 3 ಬಂಧನ
ಇದನ್ನೂ ಓದಿ : Former MLA Neeraja Reddy : ಭೀಕರ ಕಾರು ಅಪಘಾತ ; ಮಾಜಿ ಶಾಸಕಿ, ಬಿಜೆಪಿ ನಾಯಕಿ ನೀರಜಾ ರೆಡ್ಡಿ ಸಾವು
ಈ ಬಾರಿ ಬಿಜೆಪಿ ಪಕ್ಷ ಹೆಚ್ಚಾಗಿ ಹೊಸ ಅಭ್ಯರ್ಥಿಗಳಿಗೆ ಅವಕಾಶ ನೀಡಿದ್ದು, ಹೀಗಾಗಿ ಪಕ್ಷದ ಹಿರಿಯ ನಾಯಕರಿಗೆ ಟಿಕೆಟ್ ಕೈ ತಪ್ಪಿ ಹೋಗಿದೆ. ಇದರಲ್ಲಿ ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ತೀವ್ರವಾಗಿ ಅಸಮಧಾನಗೊಂಡಿದ್ದು, ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೇಸ್ ಪಕ್ಷದಲ್ಲಿ ಸೇರಿಕೊಂಡು ಚುನಾವಣೆ ಕಣಕ್ಕೆ ಇಳಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷದಲ್ಲಿ ನಮ್ಮಗೆ ಯಾಕೆ ಟಿಕೆಟ್ ಕೈ ತಪ್ಪಿ ಹೋಗಿದೆ ಎನ್ನುವುದರ ಕುರಿತು ಅಸಮಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಜಗದೀಶ್ ಶೆಟ್ಟರ್ ತಮ್ಮಗೆ ಟಿಕೆಟ್ ಕೈ ತಪ್ಪಿ ಹೋಗಲು ಬಿ. ಎಲ್ ಸಂತೋಷ್ ಕಾರಣ ಎಂದು ಆರೋಪಿಸಿದ್ದಾರೆ.
Jagdish Shettar – Pratap Singh: Jagdish Shettar’s next target for losing BJP ticket: Pratap Singh mocks