Gold Jewellery Seized Dharwad : ದಾಖಲೆ ಇಲ್ಲದೇ ಸಾಗಿಸುತ್ತಿದ್ದ5 ಕೋಟಿ ಮೌಲ್ಯದ ಚಿನ್ನಾಭರಣ ವಶ

ಧಾರವಾಡ: ಚುನಾವಣೆಯ ಹೊತ್ತಲ್ಲೇ ದಾಖಲೆಯ ಪ್ರಮಾಣದಲ್ಲಿ ನಗದು ಹಾಗೂ ಚಿನ್ನಾಭರಣಗಳು ಪತ್ತೆಯಾಗುತ್ತಿದೆ. ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಬರೋಬ್ಬರಿ 5 ಕೋಟಿ ರೂ. ಮೌಲ್ಯದ 7 ಕೆಜಿ 700 ಗ್ರಾಂ ತೂಕದ ಚಿನ್ನಾಭರಣಗಳನ್ನು (Gold Jewellery Seized Dharwad) ವಶಪಡಿಸಿಕೊಂಡಿರುವ ಘಟನೆ ಧಾರವಾಡ ಹೊರವಲಯದ ತೇಗೂರು ಚೆಕ್‌ಪೋಸ್ಟ್‌ ಬಳಿಯಲ್ಲಿ ನಡೆದಿದೆ.

ಧಾರವಾಡ ಪೊಲೀಸರು ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಚೇಕ್‌ ಪೋಸ್ಟ್‌ಗಳ ಮೇಲೆ ಹದ್ದಿನಕಣ್ಣು ಇರಿಸಿದ್ದಾರೆ. ಇದೀಗ ಧಾರವಾಡ-ಬೆಳಗಾವಿ ರಸ್ತೆಯ ತೇಗೂರು ಚೆಕ್ ಪೋಸ್ಟ್‌ ನಲ್ಲಿ ಇದೀಗ ದಾಖಲೆ ಇಲ್ಲದೇ ಸಾಗಾಟ ಮಾಡುಲಾಗುತ್ತಿದ್ದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿವಿಸಿ ಲಾಜಿಸ್ಟಿಕ್‌ ವಾಹನ ಬೆಳಗಾವಿ ಕಡೆಯಿಂದ ಬೆಂಗಳೂರಿನ ಕಡೆಗೆ ಪ್ರಯಾಣಿಸುತ್ತಿದ್ದು, ಈ ವಾಹನದಲ್ಲಿ ಚಿನ್ನಾಭರಣಗಳನ್ನು (Gold Jewellery Seized Dharwad) ಸಾಗಾಟ ಮಾಡಲಾಗುತ್ತಿತ್ತು. ಆದರೆ ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ ವಾಹನವನ್ನು ಗರಗ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆದಾಯ ತೆರಿಗೆ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ : BJP election campaign team : ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿರುವ ಬಿಜೆಪಿ ನಾಯಕರ ಪಟ್ಟಿ ಬಿಡುಗಡೆ

ಇದನ್ನೂ ಓದಿ : ಹುಬ್ಬಳ್ಳಿ : ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ಕಮ್ಮಾರ್‌ನ್ನು ಚಾಕುವಿನಿಂದ ಇರಿದು ಕೊಲೆ : 3 ಬಂಧನ

ಆಭರಣ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌ : ಚಿನ್ನ, ಬೆಳ್ಳಿ ಮೇಲೆ ಭಾರಿ ದರ ಏರಿಕೆ

ಕಳೆದ ನಾಲ್ಕು ದಿನಗಳ ನಂತರ ಇಂದು (ಏಪ್ರಿಲ್ 19) ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ (Gold – Silver price rise) ಭಾರೀ ಏರಿಕೆ ಕಂಡಿದೆ. ಇನ್ನು ನಿನ್ನೆ (ಏಪ್ರಿಲ್‌ 18) ಚಿನ್ನದ ಬೆಲೆ ಕುಸಿದಿದ್ದರೆ, ಸೋಮವಾರ (ಏಪ್ರಿಲ್‌ 17) ದೇಶಾದ್ಯಂತ ಬದಲಾಗದೆ ಉಳಿದಿದೆ. ಹೋಗಾಗಿ ಚಿನ್ನದ ಬೆಲೆಯಲ್ಲಿ ಏಪ್ರಿಲ್ 15 ಮತ್ತು 16 ರ ಸತತ ಎರಡು ದಿನಗಳವರೆಗೆ ಕುಸಿದಿದೆ. ಹೆಚ್ಚಾಗಿ ಇನ್ನು ಮದುವೆ ಸಮಾರಂಭಗಳು ಹೆಚ್ಚಾಗಿ ಇರುವುದರಿಂದ ಚಿನ್ನ, ಬೆಳ್ಳಿ ಮೇಲೆ ಸಾಮಾನ್ಯವಾಗಿಯೇ ಏರಿಕೆ ಆಗಿದ್ದು, ಇಂದು ಮಾತ್ರ ಗಣನೀಯವಾಗಿ ಏರಿಕೆ ಕಂಡಿದೆ. ಇದ್ದರಿಂದ ಸಾಮಾನ್ಯ ಜನರಿಗೆ ಜೀವನ ಕಷ್ಟಕರವಾಗಿದೆ. ಇತ್ತೀಚಿನ ಗುಡ್‌ರಿಟರ್ನ್ಸ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಇಂದು 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,850 ರುಪಾಯಿ ಆಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,920 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,740 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 55,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,050 ರುಪಾಯಿಯಲ್ಲಿ ಇದೆ.

ಪ್ರಮುಖ ಭಾರತೀಯ ನಗರಗಳಲ್ಲಿ 22-ಕ್ಯಾರೆಟ್ – 24-ಕ್ಯಾರೆಟ್ ಚಿನ್ನದ ದರಗಳ ವಿವರ :

ನಗರಗಳ ಹೆಸರು 22-ಕ್ಯಾರೆಟ್ 24-ಕ್ಯಾರೆಟ್

ಚೆನ್ನೈ ರೂ 56,650 ರೂ 61,800

ಮುಂಬೈ ರೂ 56,050 ರೂ 61,150

ದೆಹಲಿ ರೂ 56,200 ರೂ 61,310

ಕೋಲ್ಕತ್ತಾ ರೂ 56,050 ರೂ 61,150

ಬೆಂಗಳೂರು ರೂ 56,100 ರೂ 61,200

ಹೈದರಾಬಾದ್ ರೂ 56,050 ರೂ 61,150

ಸೂರತ್ ರೂ 56,100 ರೂ 61,200

ಪುಣೆ ರೂ 56,050 ರೂ 61,150

ವಿಶಾಖಪಟ್ಟಣಂ ರೂ 56,050 ರೂ 61,150

ಅಹಮದಾಬಾದ್ ರೂ 56,100 ರೂ 61,200

ಲಕ್ನೋ ರೂ 56,200 ರೂ 61,310

ನಾಸಿಕ್ ರೂ 56,080 ರೂ 61,180

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ) :

ಬೆಂಗಳೂರು : ರೂ. 8,050
ಚೆನ್ನೈ : ರೂ. 8,050
ಮುಂಬೈ: ರೂ. 7,740
ದೆಹಲಿ : ರೂ. 7,740
ಕೋಲ್ಕತಾ : ರೂ.7,740
ಕೇರಳ : ರೂ. 8,050
ಅಹ್ಮದಾಬಾದ್ : ರೂ. 7,740
ಜೈಪುರ್ : ರೂ. 7,740
ಲಕ್ನೋ : ರೂ. 7,740
ಭುವನೇಶ್ವರ್ : ರೂ. 8,050

Comments are closed.